ಪಡುಬಿದ್ರಿ ಬೈಕಿಗೆ ಕಾರು ಡಿಕ್ಕಿ ಮಗು ಸಹಿತ ಮೂವರು ಗಂಭೀರ ಗಾಯ

Spread the love

ಪಡುಬಿದ್ರಿ: ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಭಾವಿ ದಂಪತಿ ಹಾಗೂ ಅವರೊಂದಿಗಿದ್ದ ಮಗು ತೀವೃ ಗಾಯಗೊಂಡ ಘಟನೆ ಕಾರ್ಕಳ ರಸ್ತೆಯ ಕಂಚಿನಡ್ಕ ಬಳಿ ಸೋಮವಾರ ನಡೆದಿದೆ.

ಗಾಯಗೊಂಡವರನ್ನು ಬೈಕ್ ಸವಾರರಾದ ಪಲಿಮಾರು ನಿವಾಸಿ ಜಯಶ್ರೀ, ಉದ್ಯಾವರದ ಸುಬ್ರಹ್ಮಣ್ಯ ಮತ್ತು ಅವರ ಜತೆಗಿದ್ದ ಎರಡುವರೆ ವರ್ಶ ಪ್ರಾಯದ ಪ್ರಣವ್ ಎಂದು ಗುರುತಿಸಲಾಗಿದ್ದು ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಯಶ್ರೀ ಮತ್ತು ಸುಬ್ರಹ್ಮಣ್ಯರ ಮದುವೆ ನಿಗದಿಗೊಂಡಿದ್ದು, ಸೋಮವಾರ ಮಧ್ಯಾಹ್ನ ಐಸ್‌ಕ್ರೀಮ್ ತಿನ್ನಲೆಂದು ಪಲಿಮಾರಿನಿಂದ ಪಡುಬಿದ್ರಿಗೆ ಬಂದಿದ್ದು, ವಾಪಸ್ ಪಲಿಮಾರಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂದರ್ಭ ತಮ್ಮ ನೆರೆಮನೆಯ ಮಗು ಪ್ರಣವ್ ಎಂಬಾತನನ್ನೂ ತಮ್ಮ ಜತೆಯಲ್ಲಿ ಕರೆದುಕೊಂಡು ಬಂದಿದ್ದರು.

ಕಾರ್ಕಳ-ಪಡುಬಿದ್ರಿ ರಸ್ತೆಯ ಕಂಚಿನಡ್ಕದ ಬಳಿ ಲಯನ್ಸ್ ಶಾಲೆಯ ಮುಂಭಾಗದಲ್ಲಿ ಪಡುಬಿದ್ರಿ ಕಡೆಗೆ ತೆರಳುತ್ತಿದ್ದ ಓಮ್ನಿ ಕಾರು ಹಠಾತ್ ಬ್ರೇಕ್ ಹಾಕಿದ ಪರಿಣಾಮ, ಅದರ ಹಿಂದಿನಿಂದ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಐ 20 ಕಾರು ಓವರ್ ಟೇಕ್ ಮಾಡಿಕೊಂಡು ಮುಂಭಾಗಕ್ಕೆ ಬಂದಿದ್ದು, ಆಗ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.

ಘಟನೆಗೆ ಕಾರಣವಾದ ಕಾರು ಪರಾರಿಯಾಗಿದ್ದು, ಬೈಕ್‌ನಲ್ಲಿದ್ದ ಮೂವರು ಕೂಡ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ವೇಳೆ ಐ 20 ಕಾರಿನ ಚಾಲಕನಿಗೆ ಸ್ಥಳೀಯರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.


Spread the love