ಉಡುಪಿ: ಬಿಜೆಪಿ ಆಡಳಿತಾವಧಿಯಲ್ಲಿನ ಸಮಾವೇಶಗಳ ರೋದನವಾಗಿಲ್ಲವೇ?

Spread the love

ಉಡುಪಿ: ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಬಿಜೆಪಿ ಹಲವಾರು ಸಮಾವೇಶಗಳನ್ನು ನಡೆಸಿರುವುದನ್ನು ಬಿಜೆಪಿ ಮರೆತಿರಬಹುದು. ಆದರೆ ಅಂದಿನ ಸಮಾವೇಶಗಳು ಬಿಜೆಪಿಗೆ ರೋದನವಾಗಿ ಕಾಣದೇ ಇರುವುದು ದುರ್ದೈವ. ಸರಕಾರ ವಿವಿಧ ಇಲಾಖೆಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂಬ ಸುಳ್ಳು ಹೇಳಿಕೆಗಳಿಂದ ಜನತೆಯನ್ನು ನಿರಂತರವಾಗಿ ವಂಚಿಸಲು ಸಾಧ್ಯವಿಲ್ಲ. ಸಾಧನೆಗಳಿದ್ದಾಗ ಸಾಧನಾ ಸಮಾವೇಶ ಮಾಡಲು ಯಾರ ಒಪ್ಪಿಗೆಯೂ ಬೇಕಾಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ಪ್ರತಿಕ್ರಿಯೆ ನೀಡಿದೆ.

 ಕೇವಲ ಒಂದು ವರ್ಷದ ಅವಧಿಯಲ್ಲಿ 18 ದೇಶಗಳನ್ನು ಸುತ್ತಿ ಇನ್ನೂ ಚುನಾವಣಾ ಭಾಷಣದ ಗುಂಗಿನಲ್ಲಿಯೇ ವಿದೇಶಗಳಲ್ಲಿ ವಿರೋಧ ಪಕ್ಷಗಳನ್ನು ದೂಷಿಸುವ ಪ್ರಧಾನಿಯಿಂದ ಭಾರತಕ್ಕೆ ವಿಶ್ವಗುರು ಪಟ್ಟ ಬರಲು ಸಾಧ್ಯವೇ? ಬರೇ ಘೋಷಣೆಗಳಿಂದ ಭಾರತ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ವಿದೇಶ ಪ್ರವಾಸದ ಸಮಯದಲ್ಲಿ ಅನಿವಾಸಿ ಭಾರತೀಯರನ್ನು ಒಗ್ಗೂಡಿಸಿ ಪ್ರಚಾರ ಪಡೆಯುವ ಪ್ರಧಾನಿ ವೈಖರಿಯಿಂದ ದೇಶದ ಬಡ ಜನತೆಯ ಉದ್ಧಾರ ಕನಸಿನ ಮಾತು. ಬಿಜೆಪಿಯು ಕಳೆದ ಯುಪಿಎ ಸರಕಾರದ ಅವಧಿಯಲ್ಲಿ ವಿರೋಧಿಸಿದ್ದ ಯೋಜನೆಗಳನ್ನೇ ಕಾರ್ಯಗತಗೊಳಿಸುತ್ತಿದೆ. ಅಂದರೆ  ಬಿಜೆಪಿಗೆ ಸ್ವಂತಿಕೆ ಎಲ್ಲಿಂದ ಬಂತು. ಅಂದು ವಿರೋಧಿಸಿದ್ದ ಯೋಜನೆಗಳನ್ನೇ ಈಗ ಕಾರ್ಯಗತಗೊಳಿಸುವ ಬಿಜೆಪಿಯ ಉದ್ದೇಶವನ್ನು ದೇಶದ ಜನತೆಗೆ ಉತ್ತರಿಸಬೇಕಾಗಿದೆ.

ಮೋದಿಯವರಿಗೆ ಪ್ರಧಾನಿ ಹುದ್ದೆಯ ನೆಲೆಯಲ್ಲಿ ಅಮೇರಿಕ ಹಾಗೂ ಇತರ ದೇಶಗಳು ವೀಸಾ ನೀಡಿರುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಮಾರುಕಟ್ಟೆಯಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ಗಗನವನ್ನೇರುತ್ತಾ ಇದ್ದರೆ, ಬಡವರ ಜೀವನ ದುಸ್ತರವಾಗಿದೆ. ಆದರೂ ಬೆಲೆಗಳು ನಿಯಂತ್ರಣದಲ್ಲಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಜಿಡಿಪಿ ದರ ಹೆಚ್ಚಳದಿಂದ ಸರಕಾರದ ಖಜಾನೆ ತುಂಬಬಹುದು. ಆದರೆ ಜನತೆಯ ಗೋಳು ಬಿಜೆಪಿಗೆ ಕಾಣದೇ ಇರುವುದು ಜಾಣ ಕುರುಡಲ್ಲವೇ? ಸ್ವಚ್ಛ ಭಾರತ ನಿರ್ಮಾಣ ಯುಪಿಎ ಸರಕಾರದ ಅವಧಿಯಲ್ಲಿಯೇ ಇತ್ತು. ಆದರೆ ಸರಕಾರದ ಪ್ರತಿನಿಧಿಗಳು ಪೆÇರಕೆ ಹಿಡಿದು ಪ್ರದರ್ಶನ ನೀಡುತ್ತಿರಲಿಲ್ಲ. ಮೇಕ್ ಇನ್ ಇಂಡಿಯಾ ಮೂಲಕ ವಿದೇಶದಿಂದ ಬಂಡವಾಳ ಹರಿದು ಬರುವಂತೆ ಮಾಡುವ ಬಿಜೆಪಿಯ ಯೋಜನೆಯು ಬಡ ರೈತರನ್ನು ನಿರ್ಗತಿಕರನ್ನಾಗಿ ಮಾಡಿದಂತೆ. ಭೂಸ್ವಾಧೀನ ಮಸೂದೆಯಿಂದ ಬಂಡವಾಳಶಾಹಿಗಳಿಗೆ ರೈತರ ಕೃಷಿ ಭೂಮಿ ನೀಡಿ, ದೇಶದ ಕೃಷಿ ಪ್ರಾಧಾನ್ಯತೆಯನ್ನು ವಿರೂಪಗೊಳಿಸಿದಂತೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.


Spread the love