ಪಾಸಿಟಿವ್ ಬಂದ ಉಡುಪಿ ಜಿಪಂ ಸಿಬಂದಿಯ ವರದಿ ಈಗ ನೆಗೆಟಿವ್ !

Spread the love

ಪಾಸಿಟಿವ್ ಬಂದ ಉಡುಪಿ ಜಿಪಂ ಸಿಬಂದಿಯ ವರದಿ ಈಗ ನೆಗೆಟಿವ್ !

ಉಡುಪಿ: ಗೊಂದಲಕ್ಕೆ ಕಾರಣವಾಗಿದ್ದ ಉಡುಪಿ ಜಿಪಂ ಸಿಬ್ಬಂದಿ, ಕಟಪಾಡಿ ಸರಕಾರಿಗುಡ್ಡೆಯ 30ರ ಹರೆಯದ ಯುವಕನ 3ನೇ ಬಾರಿ ನಡೆಸಿದ ಗಂಟಲದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೋವಿಡ್ ನೋಡೆಲ್ ಅಧಿಕಾರಿ ಡಾ ಪ್ರಶಾಂತ್ ಭಟ್ ಮೇ 24ರಂದು ಮಂಗಳೂರು ಪ್ರಯೋಗಾಲಯದಿಂದ ಇವರ ಗಂಟಲು ದ್ರವದ ಮಾದರಿಯ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕವಾಗಿರಿಸಿ ನೋಡಿಕೊಳ್ಳಲಾಗುತ್ತಿತ್ತು.

ಆದರೆ ಆತನಲ್ಲಿ ಸೋಂಕಿನ ಸಾಧ್ಯತೆ ಇಲ್ಲದ ಕಾರಣ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಎರಡು ಮತ್ತು ಮೂರನೇ ವರದಿಯಲ್ಲಿ ನೆಗೆಟಿವ್ ಇರುವುದು ಖಚಿತವಾಗಿದೆ.

ಸದ್ಯ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿರುವ ಇವರನ್ನು ಆಸ್ಪತ್ರೆಯನ್ನು ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.


Spread the love