ಪಿ.ಎ. ಕಾಲೇಜ್ ನಲ್ಲಿ ಅತಿಥಿ ಉಪನ್ಯಾಸ

Spread the love

ಪಿ.ಎ. ಕಾಲೇಜ್ ನಲ್ಲಿ ಅತಿಥಿ ಉಪನ್ಯಾಸ

ಅಸೋಸಿಯೇಶನ್ ಆಫ್ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ವತಿಯಿಂದ ಮೆಸ್ಕಾಂನ, ಮಾನವ ಸಂಪನ್ಮೂಲ ವಿಭಾಗದ ನಿವೃತ ಸೂಪರಿಟೆಂಡಿಂಗ್ ಇಂಜಿನಿಯರ್ ಉಪೇಂದ್ರ ಕಿಣಿ ಅತಿಥಿ ಉಪನ್ಯಾಸ ನೀಡಿದರು.

ಯಾವ ರೀತಿ ವಿದ್ಯುತ್ ಉಳಿತಾಯ ಮಾಡುವುದು, ಎನರ್ಜಿ ನಷ್ಟಗಳನ್ನು ಕಡಿಮೆ ಮಾಡಿ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಹೇಗೆ ತಡೆಗಟ್ಟಬಹುದು ಎಂದು ವಿವರಿಸಿದರು. ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಮಾತನಾಡಿ ಇಂಜಿನಿಯರ್‍ಗಳ ಜ್ಞಾನ ಮತ್ತು ಔದ್ಯೋಗಿಕ ನಿಪುಣತೆಗೆ ಈ ಉಪನ್ಯಾಸಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು. ವಿಭಾಗದ ಮುಖ್ಯಸ್ಥ ಜೋನ್ ವಾಲ್ಡರ್ ಮಾತನಾಡಿ ಅತಿಥಿ ಉಪನ್ಯಾಸಗಳು ಪಠ್ಯಕ್ರಮದ ಕುಂದು ಕೊರತೆಗಳನ್ನು ನೀಗಿಸುವಲ್ಲಿ ಉಪಯೋಗಕಾರಿ ಎಂದರು.
ಮಾಸ್ಟರ್ ಆಫೀಫ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರಾಣಿ ಮಾರ್ಗರೇಟ್ ಸ್ವಾಗತಿಸಿದರು. ಮಾಸ್ಟರ್ ಮೆಲ್ಟನ್ ರೊಡ್ರಿಗಸ್ ವಂದಿಸಿದರು.


Spread the love