ಪುತ್ತೂರು: ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಪುತ್ತೂರು: ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಮಂಗಳೂರು: ವ್ಯಕ್ತಿಯೋರ್ವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಾಟ ನಡೆಸಿ ತಪ್ಪಿಸಿಕೊಂಡ ಘಟನೆ ಪುತ್ತೂರು ನಗರ ಠಾಣ ವ್ಯಾಪ್ತಿಯ ಕಬಕ ಕಲಂದಡ್ಕ ಎಂಬಲ್ಲಿ ಮಂಗಳವಾರ ನಡೆದಿದೆ.

ಮಂಗಳವಾರ ಸಂಜೆ ಸುಮಾರು 06.30 ಗಂಟೆಗೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿ ಕಬಕ ಕಲಂದಡ್ಕ ಎಂಬಲ್ಲಿ ದುಷ್ಕರ್ಮಿಗಳು ಕಬಕ ಕಲಂದಡ್ಕ ನಿವಾಸಿ ಅಬ್ದುಲ್ ಖಾದರ್ (35) ಎಂಬವರಿಗೆ ಅವರ ಮನೆಯ ಬಳಿ ಪಿಸ್ತೂಲ್ ಮಾದರಿಯ ಯಾವುದೋ ಸಾಧನದಿಂದ ಗುಂಡು ಹಾರಿಸಿದ್ದು, ಅಬ್ದುಲ್ ಖಾದರ್ ರವರ ಎದೆಯ ಬಲಭಾಗಕ್ಕೆ ಗುಂಡು ತಗುಲಿರುತ್ತದೆ. ಸದರಿಯವರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಮನೆಯಲ್ಲಿದ್ದ ತಮ್ಮ ಕಾರಿನಲ್ಲಿ ಕಬಕ ಪೇಟೆಗೆ ಬಂದಿದ್ದು ಅಲ್ಲಿಂದ ಸ್ಥಳೀಯರು ಗಾಯಾಳುವನ್ನು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಆರೋಪಿಗಳ ಪತ್ತೆಗಾಗಿ ಪುತ್ತೂರು ಪೊಲೀಸ್ ಉಪಾಧೀಕ್ಷಕರ ನೇತೃತ್ವದ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಪ್ರಗತಿಯಲ್ಲಿರುತ್ತದೆ.