ಫೇಸ್ ‌ಬುಕ್‌ ನಲ್ಲಿ ಟ್ರಿಪ್ಪಲ್ ತಲಾಖ್ ಸಂದೇಶ: ಆರೋಪಿ ಪತಿಯನ್ನು ಬಂಧಿಸಿದ ಶಿರ್ವ ಪೊಲೀಸರು

Spread the love

ಫೇಸ್ ‌ಬುಕ್‌ ನಲ್ಲಿ ಟ್ರಿಪ್ಪಲ್ ತಲಾಖ್ ಸಂದೇಶ: ಆರೋಪಿ ಪತಿಯನ್ನು ಬಂಧಿಸಿದ ಶಿರ್ವ ಪೊಲೀಸರು

ಉಡುಪಿ: ಪತ್ನಿಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಟ್ರಿಪ್ಪಲ್ ತಲಾಖ್ ಸಂದೇಶವನ್ನು ಅಪ್ ಲೋಡ್ ಮಾಡಿರುವ ಆರೋಪದ ಮೇಲೆ ಪತಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶಿರ್ವ ನಿವಾಸಿ ಶೇಕ್ ಮೊಹಮ್ಮದ್ ಸಲೀಂ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಶಿರ್ವ ಜಾಮೀಯ ಮಸೀದಿ ಸಮೀಪದ ನಿವಾಸಿ ಸ್ವಪ್ನಾಸ್ ಅವರನ್ನು 2010ರ ಸೆ.23 ರಂದು ಶಿರ್ವದಲ್ಲಿ ವಿವಾಹ ವಾಗಿದ್ದು, ನಂತರ ಪತಿ ಮತ್ತು ಮಗಳು ಅನಾಸ್ ಜೊತೆ ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ವಾಸ ಮಾಡಿಕೊಂಡಿದ್ದನು. ಅಗಸ್ಟ್ .3ರಂದು ಸಲೀಂ ತನ್ನ ಪತ್ನಿ ಹಾಗೂ ಮಗಳನ್ನು ದಮ್ಮಾಮ್ನಲ್ಲಿಯೇ ಬಿಟ್ಟು ಇನ್ನೊಂದು ಮಹಿಳೆಯೊಂದಿಗೆ ಮುಂಬೈಗೆ ಬಂದಿದ್ದನು. ನಂತರ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಪ್ರೋಫೈಲ್ನಲ್ಲಿ ಪತ್ನಿಯನ್ನುದ್ದೇಶಿಸಿ ಟ್ರಿಪ್ಪಲ್ ತಲಾಖ್ ಎಂಬುದಾಗಿ ಸಂದೇಶವನ್ನು ಅಫ್ಲೋಡ್ ಮಾಡಿರುವು ದಾಗಿ ದಮ್ಮಾಮ್ನಲ್ಲಿರುವ ಪತ್ನಿ ಸ್ವಪ್ನಾಸ್ ಆನ್ಲೈನ್ನಲ್ಲಿ ನೀಡಿದ ದೂರಿ ನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಗಸ್ಟ್ 5ರಂದು ಮುಂಬೈಯಿಂದ ಊರಿಗೆ ಬಂದಿದ್ದ ಆರೋಪಿ ಸಲೀಂನನ್ನು ಶಿರ್ವ ಪೊಲೀಸರು ಆ.7ರಂದು ಶಿರ್ವದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿಯನ್ನು ಆ.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


Spread the love