ಬಂಟ್ವಾಳ ಕೊಲೆ ಯತ್ನ – ಮೂವರ ಬಂಧನ

ಬಂಟ್ವಾಳ ಕೊಲೆ ಯತ್ನ – ಮೂವರ ಬಂಧನ

 ಬಂಟ್ವಾಳ: ಬಂಟ್ವಾಳದಲ್ಲಿ ತಲವಾರು ಹಿಡಿದು ಗಣೇಶ್ ರೈ, ಪುಷ್ಪರಾಜ್, ಮನೋಜ್ ಮತ್ತು ಇತರರ ಮೇಲೆ ಕೊಲೆ ಯತ್ನ ನಡೆಸಿದ್ದ  ಇನ್ನೂ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ನಿವಾಸಿ ಪ್ರದೀಪ್ (28), ತಿಲಕ್ (28) ಮತ್ತು ಮನೋಹರ್ (28) ಎಂದು ಗುರುತಿಸಲಾಗಿದೆ.

ಜೂನ್ 11ರಂದು  ದಾಖಲಾಗಿದ್ದ ಪ್ರಕರಣ ಸಂಖ್ಯೆ 338/18 ಕಲಂ 143, 147, 148, 307, 395 r/w 149 ರಲ್ಲಿ ತಲ್ವಾರ್ ಹಿಡಿದು ಬಡ್ಡ ಕಟ್ಟೆಯಲ್ಲಿ ಗಣೇಶ್ ರೈ, ಪುಷ್ಪರಾಜ್, ಮನೋಜ್ ಮತ್ತು ಇತರರ ಮೇಲೆ ಕೊಲೆ ಯತ್ನ ನಡೆಸಿದ್ದ  ಮುಖ್ಯ ಆರೋಪಿಯಾಗಿದ್ದಂತ ಸುರೇಂದ್ರ ಬಂಡಾರಿ , ಸತೀಶ್ ಕುಲಾಲ್ ಹಾಗೂ ಪೃಥ್ವಿರಾಜ್ ಜೆ ಶೆಟ್ಟಿ ಈಗಾಗಲೇ ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದು, ಸದ್ರಿ ಪ್ರಕರಣದ ಉಳಿದ ಮೂರು ಆರೋಪಿಗಳನ್ನು ಜುಲೈ 11 ರಂದು ಬಂಟ್ವಾಳ ತಾಲೂಕು ನ ಪರಂಗಿಪೇಟೆ ಎಂಬಲ್ಲಿ ವಶಕ್ಕೆ ಪಡೆದು ದಸ್ತಗಿರಿ ಕ್ರಮ ಜರಿಗಿಸಿದ್ದು  ನ್ಯಾಯಾಲಯಕ್ಕೆ ಹಾಜರು ಪಡಿಸಿಲಾಗಿದೆ.

ಕಾರ್ಯಾಚರಣೆಯಲ್ಲಿ ನಾಗರಾಜ CPI ಬಂಟ್ವಾಳ, ಬಂಟ್ವಾಳ PSI ರವರಾದ ಚಂದ್ರಶೇಖರ್, ಹರೀಶ್ ಹಾಗೂ ಠಾಣಾ ಸಿಬ್ಬಂದಿಗಳು  ಕಾರ್ಯಾಚರಣೆ ಯಲ್ಲಿ ಭಾಗವಹಿಸಿರುತಾರೆ.