ಬಲೆ ಬೀಸಿ ಮೀನು ಹಿಡಿಯಲು ತೆರಳಿದ್ದ ಸ್ಥಳೀಯ ಯುವಕ ಸಮುದ್ರಪಾಲು

Spread the love

ಬಲೆ ಬೀಸಿ ಮೀನು ಹಿಡಿಯಲು ತೆರಳಿದ್ದ ಸ್ಥಳೀಯ ಯುವಕ ಸಮುದ್ರಪಾಲು

ಪಡುಬಿದ್ರಿ: ಬಲೆ ಬೀಸಿ ಮೀನು ಹಿಡಿಯಲು ತೆರಳಿದ್ದ ಸ್ಥಳೀಯ ಯುವಕನೊಬ್ಬ ನೀರಿನ ಒರೆತಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಪಡುಬಿದ್ರಿ ನಡಿಪಟ್ಣ ನಿವಾಸಿ ಪ್ರಜ್ವಲ್ ಶೆಟ್ಟಿ(23) ಸಮುದ್ರಪಾಲಾದ ದುರ್ದೈವಿ. ಬಡ ಕುಟುಂಬದ ಈತ ಪಡುಬಿದ್ರಿಯ ಜ್ಯುವೆಲ್ಲರಿ ಒಂದರಲ್ಲಿ ಕೆಲಸಕ್ಕಿದ್ದು, ಭಾನುವಾರ ರಜಾ ದಿನವಾಗಿದ್ದರಿಂದ ಸಮುದ್ರದಲ್ಲಿ ಮೀನು ಹಿಡಿಯಲೆಂದು ಬಲೆ ಬೀಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮಧ್ಯಾಹ್ನ ಪಕ್ಕದ ಮನೆಯ ಹುಡುಗನೊಂದಿಗೆ ಸಮುದ್ರಕ್ಕೆ ಇಳಿದಿದ್ದನು. ಆದರೆ ಕಳೆದ ಎರಡು ದಿನಗಳಿಂದ ನೀರಿನ ಸೆಳೆತ ತೀವ್ರವಾಗಿದ್ದು, ಪ್ರಜ್ವಲ್ ಸೆರೆಗಳಿಗೆ ಸಿಲುಕಿಕೊಂಡು ಒದ್ದಾಡಿದ್ದಾನೆ. ಇದನ್ನು ಕಂಡ ಬೀಚ್‍ನ ಜೀವರಕ್ಷಕರು ತಕ್ಷಣ ಸ್ಥಳಕ್ಕೆ ಆಗಮಿಸಿ ಸಮುದ್ರಕ್ಕೆ ಹಾರಿ ಪ್ರಜ್ವಲ್‍ನನ್ನು ಕಾಪಾಡಲು ಹರಸಾಹಸ ಪಟ್ಟರೂ ಪ್ರಯತ್ನ ಫಲಕಾರಿಯಾಗದೆ ಪ್ರಜ್ವಲ್ ಆಳ ಸಮುದ್ರದ ಬೊಗಸೆಯೊಳಗೆ ಸೇರಿಬಿಟ್ಟಿದ್ದಾನೆ. ತಕ್ಷಣ ಆತನ ತಂದೆ ತಾಯಿಗೆ ಮಾಹಿತಿ ರವಾನಿಸಲಾಗಿದೆ.

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟದಲ್ಲಿ ಸಹಕರಿಸಿದ್ದಾರೆ.


Spread the love