ಬೀದಿ ವ್ಯಾಪಾರಿಗೆ ಕಿರುಕುಳ ಆತ್ಮ ಹತ್ಯೆಗೆ ಯತ್ನ, ಮಹಿಳೆ ಗಂಭೀರ

Spread the love

ಬೀದಿ ವ್ಯಾಪಾರಿಗೆ ಕಿರುಕುಳ ಆತ್ಮ ಹತ್ಯೆಗೆ ಯತ್ನ, ಮಹಿಳೆ ಗಂಭೀರ

ಬೀದಿ ವ್ಯಾಪಾರದ ಜಾಗದಲ್ಲಿ ಅನಧಿಕೃತ ಆಟೋ ರಿಕ್ಷಾ ಪಾರ್ಕ್ ನಿರ್ಮಾಣ ಮಾಡಿ ಮಹಿಳಾ ಬೀದಿಬದಿ ವ್ಯಾಪಾರಿಗೆ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಪಾಲಿಕೆ ಅಧಿಕಾರಿಗಳಿಂದ ಕಳೆದ ಒಂದು ತಿಂಗಳಿಂದ ನಿರಂತರ ತೊಂದರೆ ನೀಡಿ ಮಹಿಳೆಯ ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿತ್ತು.

ಪಾಲಿಕೆ ಅಧಿಕಾರಿಗಳು ಆಟೋ ಪಾರ್ಕಿಗೆ ಅನುಮತಿ ನೀಡದಿದ್ದರೂ ರಾಜಕೀಯ ಒತ್ತಡದಿಂದ ತೆರವುಗೊಳಿಸಲು ಬಲವಂತಪಡಿಸಲಾಗುತ್ತಿತ್ತು, ವ್ಯಾಪಾರದಲ್ಲಿ ಅಪಾರ ನಷ್ಟ ಮತ್ತು ಕಿರುಕುಳ ತಾಳಲಾರದೆ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದ ಮಹಿಳೆ ಶಾಲಿನಿ (48ವರ್ಷ) ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು ಎ.ಜೆ ಆಸ್ಪತ್ರೆಯ ಐ ಸಿ ಯು ನಲ್ಲಿದ್ದಾರೆ.  ನಗರದ ಬೋಂದೆಲ್ ಜಂಕ್ಷನ್ ಬಳಿ ಏರ್ ಪೋರ್ಟ್ ರಸ್ತೆಯಲ್ಲಿ ಪಾಲಿಕೆಯ ಅನುಮತಿ ಇಲ್ಲದೆ ವಿಧಾನ ಪರಿಷತ್ ಸದಸ್ಯರ ಅನುದಾನ ದಿಂದ ಅನಧಿಕೃತ ರಿಕ್ಷಾ ಪಾರ್ಕ್ ನಿರ್ಮಾಣಗೊಂಡ ನಂತರ ಈ ಬೆಳವಣಿಗೆ ನಡೆಯುತ್ತಿದೆ.


Spread the love
Subscribe
Notify of

0 Comments
Inline Feedbacks
View all comments