ಬೆಳ್ಮಣ್ ಬಳಿ ಬಸ್- ಟಿಪ್ಪರ್ ಢಿಕ್ಕಿ: ಯುವತಿ ಮೃತ್ಯು; ನಾಲ್ವರು ಗಂಭೀರ

Spread the love

ಬೆಳ್ಮಣ್ ಬಳಿ ಬಸ್- ಟಿಪ್ಪರ್ ಢಿಕ್ಕಿ: ಯುವತಿ ಮೃತ್ಯು; ನಾಲ್ವರು ಗಂಭೀರ

ಕಾರ್ಕಳ: ಬೆಳ್ಮಣ್- ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ಇಂದು ಸಂಜೆ 5.30ರ ಸುಮಾರಿಗೆ ಬಸ್ ಹಾಗೂ ಟಿಪ್ಪರ್ ಮಧ್ಯೆ ಸಂಭವಿಸಿದ ಭೀಕರ ಅಪ ಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟು, 4 ಮಂದಿ ಗಂಭೀರ ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಮಂಗಳೂರು ನೀರುಮಾರ್ಗದ ಮೌಶಿಕಾ (21) ಎಂದು ಗುರುತಿಸಲಾಗಿದೆ.

ಬೆಳ್ಮಣ್ ಕಡೆಯಿಂದ ಶಿರ್ವ ಕಡೆ ಹೋಗುತ್ತಿದ್ದ ಬಸ್ಗೆ ಎದುರಿನಲ್ಲಿ ಬರುತ್ತಿದ್ದ ಟಿಪ್ಪರ್ ಮುಖಾಮುಖಿ ಢಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಬಸ್ ಪಲ್ಟಿಯಾಯಿತೆನ್ನಲಾಗಿದೆ.

ಇದರಿಂದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮೌಶಿಕಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟರೆಂದು ತಿಳಿದುಬಂದಿದೆ. ಉಳಿದಂತೆ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 12 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ಕು ಮಂದಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ, ಮೂವರು ಶಿರ್ವ ಆಸ್ಪತ್ರೆಯಲ್ಲಿ ಮತ್ತು ಆರು ಮಂದಿ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love