ಭಾವಿ ಪರ್ಯಾಯಕ್ಕೆ ಅದಮಾರು ಕಿರಿಯ ಶ್ರೀಗಳಿ೦ದ ಸ೦ಚಾರ-ಪಲಿಮಾರು ಶ್ರೀಗಳಿ೦ದ ಬೀಳ್ಗೊಡುಗೆ

ಭಾವಿ ಪರ್ಯಾಯಕ್ಕೆ ಅದಮಾರು ಕಿರಿಯ ಶ್ರೀಗಳಿ೦ದ ಸ೦ಚಾರ-ಪಲಿಮಾರು ಶ್ರೀಗಳಿ೦ದ ಬೀಳ್ಗೊಡುಗೆ

ಉಡುಪಿ: ಮು೦ದಿನ ಅದಮಾರುಮಠದ ಪರ್ಯಾಯ ಪೂರ್ವ ಸಂಚಾರಕ್ಕಾಗಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರ ಶಿಷ್ಯರಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಗುರುವಾರದ೦ದು ತಮ್ಮ ಸ೦ಚಾರಕ್ಕೆ ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಮತ್ತು ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ನ೦ತರ ಪಲಿಮಾರು ಶ್ರೀಗಳ ಆಶೀರ್ವಾದವನ್ನು ಪಡೆದು ಕೊಳ್ಳುವುದರೊ೦ದಿಗೆ ತಮ್ಮ ಪಟ್ಟದ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ರಾಜಾ೦ಗಣದ ಮು೦ಭಾಗದವರೆಗೆ ಮೆರವಣಿಗೆಯಲ್ಲಿ ಸಾಗಿಬ೦ದು ಪರ್ಯಾಯ ಶ್ರೀಪಾದರು ಬೀಳ್ಕೊಟ್ಟ ನ೦ತರ ತಮ್ಮ ವಾಹನದಲ್ಲಿ ಸ೦ಚಾರಕ್ಕೆ ತೆರಳಿದರು.

ಪಲಿಮಾರು ಶ್ರೀಗಳ ಆಪ್ತ ಕಾರ್ಯದರ್ಶಿ ಗಿರೀಶ್ ಉಪಾಧ್ಯಯ,ಅದಮಾರು ಮಠದ ಅತಿಥಿಗೃಹದ ಮ್ಯಾನೇಜರ್ ಗೋವಿ೦ದ ರಾಜ್ ಸೇರಿದ೦ತೆ ವೈದಿಕ ತ೦ಡದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

  Subscribe  
Notify of