ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ

Spread the love

ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಡಿ.2: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರಕೂಳೂರು ಪ್ರದೇಶದ ಘಾಲ್ಗುಣಿ ನದಿಯ ಬಳಿ ಗಾಂಜಾ ಮತ್ತು ಎಂ.ಡಿ.ಎಂ (MDMA) ಮಾರಾಟ ಯತ್ನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಡಿಸೆಂಬರ್ 2ರಂದು ಬೆಳಿಗ್ಗೆ ದೊರೆತ ಗುಪ್ತಮಾಹಿತಿಯ ಮೇರೆಗೆ, ಎಸಿಪಿ ಪಣಂಬೂರು ಶ್ರೀಕಾಂತ್ ಕೆ., ಪಿಐ ಕಾವೂರು ರಾಘವೇಂದ್ರ ಬೈಂದೂರು, ಪಿಎಸ್‌ಐ ಮಲ್ಲಿಕಾರ್ಜುನ, ಎಎಸ್‌ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ರೆಜಿ ಎಂ., ಹಾಲೇಶ್ ನಾಯ್ಕ್, ರಿಯಾಜ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ದಾಳಿಯಲ್ಲಿ ತುಮಕೂರು ನಿವಾಸಿಗಳಾದ ಶಾಫಿ ಅಹ್ಮದ್ (40) ಮತ್ತು ಮೊಹಮ್ಮದ್ ಸಮೀರ್ (20) ಅವರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ 12 ಗ್ರಾಂ ಎಂ.ಡಿ.ಎಂ (ಅಂದಾಜು ಮೌಲ್ಯ 70,000), 275 ಗ್ರಾಂ ಗಾಂಜಾ (ಅಂದಾಜು ಮೌಲ್ಯ 10,000), 2 ಮೊಬೈಲ್ ಫೋನ್‌ಗಳು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನಿಷೇಧಿತ ಮಾದಕ ವಸ್ತುಗಳನ್ನು ಬೆಂಗಳೂರು ನಗರದಲ್ಲಿ ‘ನಿಗ್ರೋ’ ಎಂದು ಪರಿಚಿತರಾದ ವ್ಯಕ್ತಿಗಳಿಂದ ಖರೀದಿಸಿದ್ದೇವೆ ಎಂದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 177/2025, NDPS Act ನ ಕಲಂ 8(C), 21(C), 20(B)ಗಳಡಿ ಪ್ರಕರಣ ದಾಖಲಾಗಿದೆ.

ಮುಖ್ಯ ಆರೋಪಿ ಶಾಫಿ ಅಹ್ಮದ್ ವಿರುದ್ಧ 9 ಪ್ರಕರಣಗಳು!

ಬಂಧಿತ ಶಾಫಿ ಅಹ್ಮದ್ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ವಾರಂಟ್ ಮತ್ತು ಪ್ರೊಕ್ಲಮೇಶನ್‌ ಜಾರಿ ಆಗಿದೆ. ಅವನ ವಿರುದ್ಧ ದಾಖಲಾಗಿರುವ ಪ್ರಕರಣಗಳು:

ಮಂಗಳೂರು ಉಳ್ಳಾಲ ಪಿಎಸ್ Cr.145/2020 ಕಲಂ 489(A)(B)(C) IPC ವಾರಂಟ್

ತುಮಕೂರು New Extension Cr.08/2019 ಕಲಂ 392 IPC ವಾರಂಟ್

ತುಮಕೂರು New Extension Cr.22/2019 ಕಲಂ 392 IPC ವಾರಂಟ್

ತುಮಕೂರು New Extension Cr.24/2019 ಕಲಂ 394 IPC ವಾರಂಟ್

ತುಮಕೂರು ಜಯನಗರ Cr.41/2019 ಕಲಂ 392, 411 IPC ಪ್ರೊಕ್ಲಮೇಶನ್

ತುಮಕೂರು ಜಯನಗರ Cr.47/2019 ಕಲಂ 392, 411 IPC ಪ್ರೊಕ್ಲಮೇಶನ್

ತುಮಕೂರು ತಿಲಕ್ ಪಾರ್ಕ್ Cr.56/2019 ಕಲಂ 399, 402 IPC

ತುಮಕೂರು New Extension Cr.30/2025 ಕಲಂ 8(C), 20(B) NDPS Act ವಾರಂಟ್

ತುಮಕೂರು ಹೆಬ್ಬೂರು Cr.184/2025 ಕಲಂ 310(2) BNS ದಸ್ತಗಿರಿಗೆ ಬಾಕಿ

ಸಮೀರ್ ವಿರುದ್ಧ 1 ಪ್ರಕರಣ

ಬಂಧಿತ ಮೊಹಮ್ಮದ್ ಸಮೀರ್ ವಿರುದ್ಧ ತುಮಕೂರು DCB Special Police Station ನಲ್ಲಿ Cr.91/2024 ಕಲಂ 27(B) NDPS Act ಪ್ರಕರಣ ದಾಖಲಾಗಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಂಡಿದ್ದಾರೆ.

ತನಿಖೆ ಮುಂದುವರಿಯುತ್ತಿದೆ.


Spread the love
Subscribe
Notify of

0 Comments
Inline Feedbacks
View all comments