ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದೂಕು, ಸ್ಫೋಟಕ ಸಾಮಗ್ರಿ ಪತ್ತೆ: ಆರೋಪಿ ಸೆರೆ

Spread the love

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದೂಕು, ಸ್ಫೋಟಕ ಸಾಮಗ್ರಿ ಪತ್ತೆ: ಆರೋಪಿ ಸೆರೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರಿನಲ್ಲಿ ಬಂದೂಕು, ಸ್ಫೋಟಕ ಸಾಮಗ್ರಿ ಸಾಗಾಟ ಮಾಡುತ್ತಿರುವು ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಉಡುಪಿ ಬ್ರಹ್ಮಾವರ ಮೂಲದ ರೈನಾಲ್ಡ್ ಡಿಸೋಜ (24) ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಸಂಬಂಧಿಯನ್ನು ಕರೆದೊಯ್ಯಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ರೈನಾಲ್ಡ್ ಡಿಸೋಜ, ತನ್ನ ಕಾರಿನಲ್ಲಿ ಕಂಟ್ರಿ ಮೇಡ್ ನಾಡ ಬಂದೂಕು ತಂದಿದ್ದು, ಪಾರ್ಕಿಂಗ್ ಏರಿಯಾದಲ್ಲಿ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ತಪಾಸಣೆ ಸಂದರ್ಭ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಐಎಸ್‌ಎಫ್ ಅಧಿಕಾರಿಗಳು ನಾಡ ಬಂದೂಕು ಹಾಗು ರೈನಾಲ್ಡ್ ನನ್ನು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿಕಾರಿಗೆ ತಯಾರಾಗಿ ಬಂದಿದ್ದಾಗಿ ವಿಚಾರಣೆ ವೇಳೆ ರೈನಾಲ್ಡ್ ಡಿಸೋಜ ಹೇಳಿಕೆ‌ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


Spread the love

1 Comment

Comments are closed.