ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ದನಗಳನ್ನು ರಕ್ಷಿಸಿದ ಬರ್ಕೆ ಪೋಲಿಸರು; ಆರೋಪಿಗಳು ಪರಾರಿ

Spread the love

ಮಂಗಳೂರು: ದನಗಳ್ಳರನ್ನು ಹಿಡಿಯಲು ಪೋಲಿಸ್ ಇಲಾಖೆ ವಿಫಲವಾಗಿದೆ ಎಂದು ಹಿಂದೂ ಸಂಘಟನೆಗಳು ಮಾಡಿದ ಆರೋಪದ ಮರುದಿನವೇ ಬರ್ಕೆ ಪೋಲಿಸರು ಅಮಾನವೀಯ ರೀತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನಗಳನ್ನು ಹಿಡಿದು ರಕ್ಷಿಸಿದ್ದಾರೆ.

ಗುರುವಾರ ಬೆಳಿಗ್ಗೆ ಮಂಗಳೂರು ನೋಂದಾಯಿತ ಫೋರ್ಸ್ ಟ್ರಾವೆಲರ್ ವಾಹನದಲ್ಲಿ ಕಸಾಯಿ ಖಾನೆಗೆ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಧಾಳಿ ನಡೆಸಿದ ಪೋಲಿಸರು 16 ದನಗಳನ್ನು ರಕ್ಷಿಸಿದ್ದಾರೆ.

ಕೆಲವೊಂದು ದನಗಳು ತೀವೃವಾಗಿ ಗಾಯಗೊಂಡಿದ್ದು, ಸಾರ್ವಜನಿಕರ ಸಹಾಯದೊಂದಿಗೆ ದನಗಳನ್ನು ಫಜೀರಿನ ಗೋಶಾಲೆಗೆ ಸ್ಥಳಾಂತರಿಸಲಾಗಿದೆ.

ಆರೋಪಿಗಳು ನಾಪತ್ತೆಯಾಗಿದ್ದು, ಬರ್ಕೆ ಪೋಲಿಸರು ಕೇಸು ದಾಖಲಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.


Spread the love