ಮಂಗಳೂರು: ಜೈಲು ಸಿಬ್ಬಂದಿಯ ಜಾಮೀನು ಅರ್ಜಿ ವಜಾ

Spread the love

ಮಂಗಳೂರು: ಜೈಲು ಸಿಬ್ಬಂದಿಯ ಜಾಮೀನು ಅರ್ಜಿ ವಜಾ

ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದ ಕೈದಿಗೆ ಗಾಂಜಾ ನೀಡಲು ಯತ್ನಿಸಿ ಸಿಕ್ಕಿಬಿದ್ದ ಜೈಲಿನ ವಾರ್ಡನ್ ಸಂತೋಷ್ ಹೊಸಮನಿ ಮತ್ತು ಗಾಂಜಾ, ಮತ್ತಿತರ ವಸ್ತುಗಳನ್ನು ನೀಡಿದ್ದಾನೆ ಎನ್ನಲಾದ ಆರೋಪಡಿ ಬಂಧಿತನಾಗಿರುವ ಜಯಪ್ರಕಾಶ್ ಬಂಗೇರನ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಈ ಇಬ್ಬರು ಆರೋಪಿಗಳು ಮಂಗಳೂರಿನ ಆರನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಶಿಕಲಾ ಜಿ. ಆರೋಪಿಗಳ ಜಾಮೀನನ್ನು ವಜಾಗೊಳಿಸಿದ್ದಾರೆ.

ಸರಕಾರದ ಪರವಾಗಿ ಎಪಿಪಿ ಆರೋನ್ ಡಿಸೋಜ ವಿಟ್ಲ ವಾದ ಮಂಡಿಸಿದ್ದರು.


Spread the love