Spread the love
ಮಂಗಳೂರು – ಧರ್ಮಸ್ಥಳ: ರಾಜಹಂಸ ಬಸ್ ಸೇವೆ ಪ್ರಾರಂಭ
ಮಂಗಳೂರು: ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ, ಮಂಗಳೂರು-2ನೇ ಘಟಕದಿಂದ ನೂತನವಾಗಿ ಜುಲೈ 3 ರಿಂದ ಮಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಹೊಸದಾಗಿ ರಾಜಹಂಸ ಸಾರಿಗೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿದೆ.
ಪ್ರಯಾಣ ದರ ಮತ್ತು ನಿಲುಗಡೆಗಳ ವಿವರ: ಬಿಸಿರೋಡು, ಬಂಟ್ವಾಳ, ಕಾರಿಂಜ ಕ್ರಾಸ್, ಪೂಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ. ಒಟ್ಟು ಪ್ರಯಾಣ ದರ ರೂ.110.
ಸಾರ್ವಜನಿಕ ಪ್ರಯಾಣಿಕರು ನೂತನ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love