ಮಂಗಳೂರು:  ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡವರ ಬಂಧನ

Spread the love

ಮಂಗಳೂರು:  ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡವರ ಬಂಧನ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಕೊಲೆಯತ್ನ ಪ್ರಕರಣಗಳಲ್ಲಿ  ನ್ಯಾಯಾಲಯದಿಂದ ಜಾಮೀನು ಪಡೆದು ಸುಮಾರು ಒಂದು ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಜಾಲ್ ಪೈಸಲ್ ನಗರ ನಿವಾಸಿ ನಿಜಾಮ್ @ ಇಬ್ಬಿ ನಿಜಾಮ್ ಮತ್ತು ಕಣ್ಣೂರು ಕುಂಡಾಲ ನಿವಾಸಿ ಅಮೀರ್ ಸುಹೈಲ್ @ ಅಮ್ಮಿ  ಎಂಬವರುಗಳನ್ನು ಈ ದಿನ‌ ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂಧಿಯವರುಗಳಾದ ರಮೇಶ್, ಜಯಾನಂದ, ರಾಜೇಶ್, ಕುಶಲ್ ಹೆಗ್ಡೆ, ರಾಘವೇಂದ್ರ ಮತ್ತು ಗಂಗಾಧರ್ ರವರು ವಶಕ್ಕೆ ಪಡೆದಿದ್ದು, ನಂತರ ಇವರುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

ಇವರುಗಳಲ್ಲಿ ನಿಜಾಮ್ @ ಇಬ್ಬಿ ನಿಜಾಮ್ ಎಂಬಾತನ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ  ಹಲ್ಲೆ ಪ್ರಕರಣ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಮತ್ತು ಕೊಲೆಯತ್ನ ಪ್ರಕರಣಗಳು ದಾಖಲಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ ಮತ್ತು

ಅಮೀರ್ ಸುಹೈಲ್ @ ಅಮ್ಮಿ ಎಂಬಾತನ‌ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ  ಮತ್ತು ಬಂಟ್ವಾಳ‌ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ   ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣಗಳು ದಾಖಲಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ


Spread the love