ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಅನ್ನು ಮಂಗಳೂರು ಅವಿರೋಧ ಆಯ್ಕೆ

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಅನ್ನು ಮಂಗಳೂರು ಅವಿರೋಧ ಆಯ್ಕೆ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್‍ನ ಅಧ್ಯಕ್ಷರಾಗಿ ಎಚ್.ಪುಂಡಲಿಕ ಪೈ (ಅನ್ನು ಮಂಗಳೂರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರೆಸ್‍ಕ್ಲಬ್‍ನ ಆಡಳಿತ ಸಮಿತಿಯ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂಪಡೆಯಲು ಸೋಮವಾರ (ಸೆ.9) ಕೊನೆಯ ದಿನವಾಗಿತ್ತು. ಆಡಳಿತ ಸಮಿತಿಯ ಎಲ್ಲ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆದಿದೆ ಎಂದು ಚುಣಾವಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಪಿ.ಬಿ.ಹರಿಪ್ರಸಾದ್ ರೈ, ಕೋಶಾಧ್ಯಕ್ಷರಾಗಿ ಇಬ್ರಾಹಿಂ ಅಡ್ಕಸ್ಥಳ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಆರಿಫ್, ಕಾರ್ಯದರ್ಶಿಯಾಗಿ ಆತ್ಮಭೂಷಣ್, ಆಂತರಿಕ ಲೆಕ್ಕಪರಿಶೋಧಕರಾಗಿ ಹರೀಶ್ ಮೋಟುಕಾನ ಅವಿರೋಧವಾಗಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಗನ್ನಾಥ ಶೆಟ್ಟಿ ಬಾಳ, ಜಿತೇಂದ್ರ ಕುಂದೇಶ್ವರ, ಪುಷ್ಪರಾಜ್ ಬಿ.ಎನ್, ರಾಜೇಶ್ ಶೆಟ್ಟಿ, ರಾಮಕೃಷ್ಣ .ಆರ್, ವಿಜಯ್ ಕೋಟ್ಯಾನ್ ಮತ್ತು ಕೆ.ವಿಲ್‍ಫ್ರೆಡ್ ಡಿ’ ಸೋಜಾ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಪ್ರಕಟಣೆ ತಿಳಿಸಿದೆ.