ಮಂಗಳೂರು ಮಟ್ಟದ ಗ್ಯಾರಂಟಿ ಯೋಜನೆ ಪರಿಶೀಲನೆ ಸಭೆ

Spread the love

ಮಂಗಳೂರು ಮಟ್ಟದ ಗ್ಯಾರಂಟಿ ಯೋಜನೆ ಪರಿಶೀಲನೆ ಸಭೆ

ಮಂಗಳೂರು: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಟನ ಸಮಿತಿಯ ಸಭೆ ಸುರೇಂದ್ರ ಕಂಬಳಿ ಅಧ್ಯಕ್ಷತೆಯಲ್ಲಿ ಗುರುವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

2025 ರ ಅಕ್ಟೋಬರ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಸಹಾಯಧನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ವೇತಾ ತಿಳಿಸಿದರು.

ಉಳಾಯಿಬೆಟ್ಟು ಸಂಕಮಾಡು ಮಾರ್ಗವಾಗಿ ಹೊಸ ಕೆಎಸ್‍ಆರ್‍ಟಿಸಿ ಬಸ್ಸು ಮಂಜೂರಾಗಿದ್ದು, ಶೀಘ್ರವೇ ಪ್ರಾರಂಭಿಸುವಂತೆ ಸಮಿತಿಯ ಸದಸ್ಯ ನವಾಜ್ ಒತ್ತಾಯಿಸಿದಾಗ, ಕೆಎಸ್‍ಆರ್‍ಟಿಸಿ ಅಧಿಕಾರಿ ಅವರು ಸಕರಾತ್ಮಕವಾಗಿ ಸ್ಪಂದಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಜಿಲ್ಲಾ ಗ್ಯಾರಂಟಿ ಯೋಜನೆ ಅನುμÁ್ಟನ ಸಮಿತಿ ಸದಸ್ಯ ಅಲ್‍ಸ್ಟನ್ ಡಿ ಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನುμÁ್ಟನ ಸಮಿತಿ ಸದಸ್ಯರಾದ ಪ್ರಶಾಂತ್ ಎಸ್, ನವಾಜ್, ಶೈಲಾ ನೀತಾ ಡಿಸೋಜಾ, ರಾಜೇಶ್ ಶೆಟ್ಟಿ , ರಿತೇಶ್ ಅಂಚನ್, ವಿದ್ಯಾ, ಶ್ರೀಧರ ಪಂಜ, ಡಿ. ಎಂ. ಮುಸ್ತಾಪ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯ, ವಿಷಯ ನಿರ್ವಾಹಕ ಆರೀಸ್ ಹಾಗೂ ತಾಲೂಕು ಐಇಸಿ ಸಂಯೋಜಕಿ ನಿಶ್ಮಿತ.ಬಿ ಹಾಜರಿದ್ದರು.


Spread the love
Subscribe
Notify of

0 Comments
Inline Feedbacks
View all comments