ಮಂಗಳೂರು:  ಮಾಜಿ ಮೇಯರ್ ಗುಲ್ಜಾರ್ ಬಾನು ಸೇರಿ ಕಾಂಗ್ರೆಸ್ ನಿಂದ ಮೂವರು ಉಚ್ಚಾಟನೆ

ಮಂಗಳೂರು:  ಮಾಜಿ ಮೇಯರ್ ಗುಲ್ಜಾರ್ ಬಾನು ಸೇರಿ ಕಾಂಗ್ರೆಸ್ ನಿಂದ ಮೂವರು ಉಚ್ಚಾಟನೆ

ಮಂಗಳೂರು:  ಮಹಾನಗರ ಪಾಲಿಕೆಗೆ ನವೆಂಬರ್ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಈ ಕೆಳಗೆ ತಿಳಿಸಿದವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದು ಸಾಬೀತಾಗಿರುವುದರಿಂದ ಮುಂದಿನ 6 ವರ್ಷಗಳ ಅವಧಿಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಫಾಟಿಸಲಾಗಿದೆ.

ಉಚ್ಚಾಟನೆಗೊಂಡವರು ಮಂಗಳೂರು ಬಜಾಲ್ ವಾರ್ಡ್ ನಂ 49 ರ ಬಿ. ವಿಶ್ವನಾಥ್, ಕೃಷ್ಣಾಪುರ ಕಾಟಿಪಳ್ಳ ವಾರ್ಡ್ ನಂ 05 ಇದರ ಗುಲ್ಜಾರ್ ಬಾನು ಮತ್ತು ಚೊಕ್ಕಬೆಟ್ಟು ಕೃಷ್ಣಾಪುರದ ವಾರ್ಡ್ ನಂ 47 ನ ಟಿ ಕೆ ತೌಸೀಫ್ ಅವರನ್ನು ಮುಂದಿನ 6 ವರ್ಷಗಳ ಅವಧಿಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಫಾಟಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.