ಮಂಗಳೂರು: ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016

Spread the love

ಮಂಗಳೂರು: 2016 ಫೆಬ್ರವರಿ ತಿಂಗಳ ದಿನಾಂಕ 12 ಮತ್ತು 13ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016ನ್ನು ನೆಹರು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ದ.ಕ. ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ ರಾಷ್ಟ್ರೀಯ ಅಮೆಚೂರ್ ಬಾಡಿ ಬಿಲ್ಡರ್ಸ್ ಫೆಡರೇಷನ್ ಇದರ ಮೇಲುಸ್ತುವಾರಿಯಲ್ಲಿ 64ನೇ ರಾಷ್ಟೀಯ ದೇಹದಾಢ್ರ್ಯ ಸ್ಪರ್ಧೆಯು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ರಾಜ್ಯಮಟ್ಟದ ಚಾಂಪಿಯನ್‍ಶಿಫ್ ನಡೆಯುತ್ತಿದ್ದು, ಈ ಸ್ಪರ್ಧೆಗಳಲ್ಲಿ ಆಯ್ಕೆಯಾದ  ದೇಹದಾಢ್ರ್ಯಪಟುಗಳು ಅಂತರಾಷ್ಟೀಯ ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.

1-ivan-dsouza-press-20160105

ರಾಷ್ಟ್ರೀಯ ಮಟ್ಟದ ಈ ಸ್ಫರ್ಧೆಯಲ್ಲಿ ದೇಶದ 29 ರಾಜ್ಯಗಳಿಂದ ಸುಮಾರು 250ಕ್ಕೂ ಅಧಿಕ ದೇಹದಾಢ್ರ್ಯಪಟುಗಳು ದಿನಾಂಕ 11/02/2016ರ ಸಯಂಕಾಲ ಆಗಮಿಸಲಿದ್ದು ಫೆಬ್ರವರಿ ತಿಂಗಳ 12 ಮತ್ತು 13ರಂದು 2 ದಿನಗಳ ಕಾಲ ದೇಹದಾಢ್ರ್ಯಪಟುಗಳ ನಿಯಮಾನುಸಾರ ಈ ಸ್ಫರ್ಧೆಯು ನಡೆಯಲಿರುವುದು. ಈ ಸ್ಫರ್ಧೆಯಲ್ಲಿ ‘’ಭಾರತ್ ಕುಮಾರ್’’‘ಭಾರತ ಉದಯ’, ‘ಭಾರತ ಕೇಸರಿ’, ‘ಭಾರತ ಕಿಶೋರ’, ‘ಭಾರತ ಶ್ರೀ’ ಟೈಟಲ್‍ಗಳಿಗೆ ಸ್ಪರ್ಧೆ ನಡೆಯಲಿದ್ದು, ಪ್ರಶಸ್ತಿಗಳ ಜೊತೆ ನಗದು ಬಹುಮಾನ ಸಹ  ನೀಡಲಾಗುವುದು. ಈ ಸ್ಫರ್ಧೆಯಲ್ಲಿ ವಿಜೇತರಾದವರು ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.

 ಭಾರತ ದೇಶದಲ್ಲಿಯೇ ಅತ್ಯಂತ ಹೆಚ್ಚು ದೇಹದಾಢ್ರ್ಯಪಟುಗಳನ್ನು ದೇಶಕ್ಕೆ ನೀಡಿದ ಜಿಲ್ಲೆ ಕರಾವಳಿ ಜಿಲ್ಲೆ. ಅದರಲ್ಲೂ 25 ವರ್ಷಗಳ ಹಿಂದೆ Mr. World ಆಗಿ ದೇಶದ ಹೆಸರನ್ನು ಪ್ರಪಂಚಕ್ಕೆ ಪರಿಚಯಿಸಿದ ಶ್ರೀ ರೇಮಂಡ್ ಡಿ’ಸೋಜಾ ಸಹಿತ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಅನೇಕ ದೇಹದಾಢ್ರ್ಯಪಟುಗಳನ್ನು ನೀಡಿದ ಜಿಲ್ಲೆ ಕರಾವಳಿ ಜಿಲ್ಲೆ. ಅಂತೆಯೇ ರಾಷ್ಟ್ರೀಯ ಮಟ್ಟದ ತರಭೇತಿದಾರರು, ಏಕಲವ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು, ಜೀವನ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ಅನೇಕ ದೇಹದಾಢ್ರ್ಯಪಟುಗಳು ಕರಾವಳಿ ಜಿಲ್ಲೆಯ ಕೊಡುಗೆಯಾಗಿದೆ. ದ.ಕ ಜಿಲ್ಲೆಯಲ್ಲಿ 1956ರಲ್ಲಿ ಶ್ರೀ ಕೇಶವ ಅಡಿಗ ಇವರ ನೇತೃತ್ವದಲ್ಲಿ ಪ್ರತಿಷ್ಠಿತ ದೇಹದಾಢ್ರ್ಯಪಟುಗಳ  ಸ್ಫರ್ಧೆಯು ನಡೆದಿದ್ದು, ಜಿಲ್ಲೆಯ ಎಲ್ಲಾ ದೇಹದಾಢ್ರ್ಯಪಟುಗಳು ಭಾಗವಹಿಸಿದ್ದು, ತದನಂತರ ಜಿಲ್ಲೆಯಲ್ಲಿ ದೇಹದಾಢ್ರ್ಯಪಟುಗಳ ಸಂಖ್ಯೆ ಹೆಚ್ಚುತ್ತಿದ್ದು ಪ್ರತಿ ವರ್ಷ 25ಕ್ಕೂ ಹೆಚ್ಚು ಸ್ಪರ್ಧೆಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ.

ದ.ಕ. ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಆಧುನಿಕ ತಂತ್ರಜ್ಞಾನಗಳುಳ್ಳ ಜಿಮ್ ಮತ್ತು ಈiಣಟಿess ಕೇಂದ್ರಗಳಿದ್ದು, ಜೊತೆಯಲ್ಲಿ ವ್ಯಾಯಾಮ ಶಾಲೆಗಳು ಸಹ ಕಾರ್ಯಾಚರಿಸುತ್ತಿವೆ. ಈ ಜಿಮ್‍ಗಳಲ್ಲಿ ತರಭೇತಿ ಪಡೆದ ಅನೇಕ ಯುವಕರಿಗೆ ಪ್ರೋತ್ಸಾಹ ಮತ್ತು ಹೆಚ್ಚಿನ ಅವಕಾಶಗಳನ್ನು ದೊರಕಿಸಿ ಕೊಡುವ ದೃಷ್ಟಿಯಿಂದ ದ.ಕ. ಜಿಲ್ಲೆಯಲ್ಲಿ ಈ ಸ್ಫರ್ಧೆಯನ್ನು ಎರ್ಪಡಿಸಲಾಗಿದೆ.

ಈ ಸ್ಫರ್ಧೆಯನ್ನು ಮಂಗಳೂರಿನಲ್ಲಿ ನಡೆಸುವರೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಬಂದ ಎಲ್ಲಾ ಸ್ಫರ್ಧಾಳುಗಳಿಗೆ ವಸತಿ ಊಟೋಪಾಚಾರಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸುವವರಿಗೆ ನಗದು ಬಹುಮಾನದ ಜೊತೆಗೆ ಉತ್ತಮ ಸೌಕರ್ಯಗಳನ್ನು ನೀಡಲು ತೀರ್ಮಾನಿಸಲಾಗಿದೆ, 2 ದಿನಗಳ ಈ ಸ್ಫರ್ಧೆಯಲ್ಲಿ ರಾಷ್ಟ್ರಮಟ್ಟದ ವಿದ್ಯುನ್ಮಾನ ಚಾನೆಲ್‍ಗಳು ನೇರಪ್ರಸಾರವನ್ನು ಮಾಡುತ್ತವೆ.

ಮಂಗಳೂರಿನಲ್ಲಿ ಸ್ಫರ್ಧೆಯನ್ನು  ಏರ್ಪಡಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈಯವರ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಯುವ ಜನಸೇವೆ, ಕ್ರೀಡಾ ಹಾಗೂ ಮೀನುಗಾರಿಕೆ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್,. ಆರೋಗ್ಯ ಸಚಿವರಾದ ಶ್ರೀ ಯು.ಟಿ. ಖಾದರ್, ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮೇಯರ್ ಶ್ರೀಮತಿ ಜೆಸಿಂತಾ ವಿಜಯಾ ಆಲ್ಫ್ರೇಡ್, ಜಿಲ್ಲಾಧಿಕಾರಿಯವರಾದ ಶ್ರೀ ಇಬ್ರಾಹಿಂ., ನಗರ ಪೋಲಿಸ್ ಆಯುಕ್ತರರಾದ ಶ್ರೀ ಚಂದ್ರಶೇಖರ್, ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀಮತಿ ವಿದ್ಯಾ, ಇವರು ಸಮಿತಿಯ  ಗೌರವಾಧ್ಯಕ್ಷರಾಗಿರುತ್ತಾರೆ.

ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ| ಡಿ. ವಿರೇಂದ್ರ ಹೆಗ್ಡೆಯವರು ವಿಶೇಷ ಆಹ್ವಾನಿತರಾಗಿರುತ್ತಾರೆ. ಹಾಗೂ ಶಾಸಕರಾದ ಶ್ರೀ ಜೆ.ಆರ್. ಲೋಬೊ, ಶ್ರೀ ಮೊೈದಿನ್ ಬಾವಾ, ಶ್ರೀಮತಿ ಶಕುಂತಳ ಶೆಟ್ಟಿ, ಶ್ರೀ ವಸಂತ ಬಂಗೇರ,  ಶ್ರೀ ಅಂಗಾರ ಎಸ್., ವಿಧಾನ ಪರಿಷತ್ ಶಾಸಕರಾದ ಶ್ರೀ ಪ್ರತಾಪ್‍ಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ,    ಕ್ಯಾ. ಗಣೇಶ್ ಕಾರ್ಣಿಕ್, ಮೂಡಾ ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಕೊಡಿಜಾಲ್, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರು, ಕ್ರೀಡಾ ಇಲಾಖೆಯ ಅಧಿಕಾರಿಗಳು, ಶ್ರೀ ಎ.ಜೆ.ಶೆಟ್ಟಿ, ಚೇರ್‍ಮೇನ್ ಎ.ಜೆ.ಎಜುಕೇಷನ್ ಟ್ರಸ್ಟ್ ಡಾ| ಮೋಹನ್ ಆಳ್ವ, ಚೇರ್‍ಮೆನ್ ಆಳ್ವಾಸ್ ಎಜುಕೇಷನ್ ಟ್ರಸ್ಟ್, ಶ್ರೀ ಸದಾನಂದ ಶೆಟ್ಟಿ ಚೇರ್‍ಮೆನ್, ಶ್ರೀದೇವಿ ಎಜುಕೇಶನ್ ಟ್ರಸ್ಟ್, ರೆ| ಫಾ| ಪೆಟ್ರಿಕ್ ರಾಡ್ರಿಗಸ್, ನಿರ್ದೇಶಕರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಶ್ರೀ ರೋನಾಲ್ಡ್ ಕೊಲಾಸೋ, ಎನ್.ಆರ್.ಐ. ಹಾಲಿವುಡ್ ಟೌನ್, ಬೆಂಗಳೂರು, ಡಾ| ರಾಜೇಂದ್ರ ಕುಮಾರ್ ಚೇರ್‍ಮೆನ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಶ್ರೀ ವಾಲ್ಟರ್ ಸ್ಟೀಫನ್ ಮೆಂಡಿಸ್ ಮ್ಯಾನೆಜಿಂಗ್ ಡೈರೆಕ್ಟರ್, ವೆಸ್ಟರ್ನ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪ್ರೊ. ಬೈರಪ್ಪ ಉಪಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ, ಕೋಣಾಜೆ, ಶ್ರೀ ಕೆ.ಎಚ್. ನಾೈಕ್ ಅಧ್ಯಕ್ಷರು, ದ.ಕ.ಜಿಲ್ಲಾ ದೈಹಿಕ ಶಿಕ್ಷಕರ ಸಂಘ, ಇವರು ಆಹ್ವಾನಿತರಾಗಿರುತ್ತಾರೆ. ಇವರುಗಳನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.


Spread the love