ಮಂಗಳೂರು: ಹತ್ತು ವರ್ಷ ಹರೆಯದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ

Spread the love

ಮಂಗಳೂರು: ಹತ್ತು ವರ್ಷ ಹರೆಯದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಹತ್ತು ವರ್ಷ ಹರೆಯದ ಬಾಲಕಿಯೊಬ್ಬಳು ತನ್ನ ಮನೆಯ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಬಾಲಕಿಯನ್ನು ಹೀರೆ ಬಾರಂದಾಡಿಯ ಪ್ರೀಯಾ (10) ಎಂದು ಗುರುತಿಸಲಾಗಿದೆ.

ಗುರುವಾರ ಪ್ರಿಯಾ ತನ್ನ ತಾಯಿಯಲ್ಲಿ ಕೂದಲನ್ನು ಕಟ್ಟುವಂತೆ ಕೇಳಿದ್ದು ಇದಕ್ಕೆ ತಾಯಿ ಆಕೆಯನ್ನು ಗದರಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆಕೆ ತನ್ನ ಮನೆಯ ಮೇಲ್ ಮಹಡಿಗೆ ತೆರಳಿದ್ದು ಹಲವು ಸಮಯದ ವರೆಗೂ ಬಾರದೆ ಇರುವುದನ್ನು ಗಮನಿಸಿ ಮನೆಯವರು ಹುಡುಕಾಡ ನಡೆಸಿದಾಗ ಆಕೆ ಮನೆಯ ಮಹಡಿಯಲ್ಲಿ ಸ್ಕಿಪ್ಪಿಂಗ್ ರೋಪ್ ಮೂಲಕ ನೇಣು ಬಿಗಿದು ಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love