ಮರವಂತೆ ಕಡಲ ತೀರದಲ್ಲಿ ಮಗುಚಿ ಬಿದ್ದ ದೋಣಿ; ನಾಲ್ವರು ಮೀನುಗಾರರು ಪಾರು

Spread the love

ಮರವಂತೆ ಕಡಲ ತೀರದಲ್ಲಿ ಮಗುಚಿ ಬಿದ್ದ ದೋಣಿ; ನಾಲ್ವರು ಮೀನುಗಾರರು ಪಾರು

ಕುಂದಾಪುರ: ಕೊಡೇರಿ ದೋಣಿ ದುರಂತದಲ್ಲಿ ನಾಲ್ವರು ಮೀನುಗಾರರು ಸಾವನ್ನಪ್ಪಿರುವ ಕಹಿ ಘಟನೆ ನೆನಪು ಮಾಸುವ ಮುನ್ನವೇ ಇನ್ನೊಂದು ದೋಣಿ ದುರಂತ ಸಂಭವಿಸಿದೆ. ಬುಧವಾರ ಬೆಳಿಗ್ಗೆ ಇಲ್ಲಿನ ಮರವಂತೆ ಕಡಲತೀರದಲ್ಲಿ ಅಲೆಗಳ ರಭಸಕ್ಕೆ ದೋಣಿಯೊಂದು ಮಗುಚಿದ್ದು, ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಶ್ರೀನಿವಾಸ ಖಾರ್ವಿ ಅವರ ಆದಿ ಆಂಜನೇಯ ದೋಣಿ ಮರವಂತೆ ಕಡಲತೀರದ ಸಮೀಪ ಬೃಹತ್ ಅಲೆಗಳ ರಭಸಕ್ಕೆ ಮಗುಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಈಜಿ ದಡ ಸೇರಿದ್ದಾರೆ. ಈ ಸಂದರ್ಭದಲ್ಲಿ ದಡಕ್ಕೆ ಬಂದ ದೋಣಿಯ ರಕ್ಷಣೆಗೆ ಧಾವಿಸಿದ ವೇಳೆಯಲ್ಲಿ ಮತ್ತೆ ಬೃಹತ್ ಅಲೆಗಳು ದೋಣಿಗೆ ಬಂದಪ್ಪಳಿಸಿದ ಪರಿಣಾಮ ದೋಣಿ ಮೀನುಗಾರ ಶ್ರೀನಿವಾಸ್ ಖಾರ್ವಿಯವರ ಕಾಲಿಗೆ ಬಡಿದಿದ್ದರಿಂದ ಕಾಲಿಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ

ಘಟನೆಯಲ್ಲಿ ದೋಣಿ ಸಂಪೂರ್ಣ ಜಖಂಗೊಂಡಿದೆ.


Spread the love