ಮಳೆ, ನೆರೆ ಅಬ್ಬರಕ್ಕೆ ಸಿಲುಕಿದ ಜನತೆಯ ನೆರವಿಗೆ ಬರಲು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರೆ

ಮಳೆ, ನೆರೆ ಅಬ್ಬರಕ್ಕೆ ಸಿಲುಕಿದ ಜನತೆಯ ನೆರವಿಗೆ ಬರಲು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರೆ

ಪುತ್ತೂರು: ಮಳೆಯ ಅಬ್ಬರಕ್ಕೆ ತತ್ತರಿಸಿದ ಕರ್ನಾಟಕದ ಜನತೆಗೆ ನೆರವು ನೀಡಲು ಮಾಜಿ ಐಪಿಎಸ್ ಅಧಿಕಾರಿ ಕರ್ನಾಟಕದ ಸಿಂಗಮ್ ಅಣ್ಣಾಮಲೈ ಕರೆ ನೀಡಿದ್ದಾರೆ.

ಆಗಸ್ಟ್ 11 ರಂದು ಭಾನುವಾರ ಪುತ್ತೂರಿನಲ್ಲಿ ಯುವ ವಾಹಿನಿ ಆಯೋಜಿಸಿರುವ ವಾರ್ಷಿಕ ಕಾರ್ಯಕ್ರಮಕ್ಕೆ ಆಗಮಿಸಿರುವ ಅಣ್ಣಾಮಲೈ ಅವರು ವಾಟ್ಸಾಪ್ ಮೂಲಕ ಈ ರೀತಿಯ ಕರೆ ನೀಡಿದ್ದಾರೆ. ಅದರ ವಿವರ ಇಂತಿದೆ
ಮಾತಾ ಯುವವಾಹಿನಿ ಬಂದುಲೆಗ್ ಎನ್ನ ನಮಸ್ಕಾರ”, ವಿದ್ಯೆ ˌಉದ್ಯೋಗˌ ಸಂಪರ್ಕವೆಂಬ ಮುಖ್ಯ ದ್ಯೇಯಗಳೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಅಡಿಯಲ್ಲಿ ರಾಜ್ಯಾದ್ಯಂತ 35ಘಟಕಗಳನ್ನು ಹೊಂದಿರುವ ಯುವವಾಹಿನಿ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶಕ್ಕೆ ಪುತ್ತೂರಿಗೆ ನಾನು ಬರ್ತೇನೆ.

ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿರುವ ಕರ್ನಾಟಕದ ಕೆಲವು ಭಾಗದ ಜನರ ಸಂಕಷ್ಟವನ್ನು ಕಂಡು ನಮ್ಮ ಸಹೋದರˌ ಸಹೋದರಿಯರಿಗೆ ನೆರವು ನೀಡಲು ನಿಮ್ಮ ಮನಸ್ಸು ಹಂಬಲಿಸುತ್ತಿದೆಯೇ, ಹಾಗಿದ್ದರೆ. ನೀವು ಸಮಾವೇಶಕ್ಕೆ ಬರುವಾಗ ಈ ಕೆಳಗಿನ ಯಾವುದಾದರೊಂದು ಪದಾರ್ಥಗಳನ್ನು ತನ್ನಿ ಎಂದು ಅವರು ಹೇಳಿದ್ದಾರೆ.

ನೀರಿನ ಬಾಟಲಿ, ಬಿಸ್ಕೆಟ್, ರಸ್ಕ್, ಬ್ರೆಡ್, ಮೆಡಿಸಿನ್,ORS ಪ್ಯಾಕೆಟ್, ಡೆಟಾಲ್, ಕ್ಲೋರಿನ್ ಮಾತ್ರೆ, ಸೊಳ್ಳೆ ಬತ್ತಿ, ಟೂತ್ ಪೇಸ್ಟ್, ಗುಡ್ ಲೈಫ್ ಹಾಲಿನ ಪ್ಯಾಕೆಟ್, ಹೊಸ ಬಟ್ಟೆ, ಹೊದಿಕೆ, ಸ್ವೆಟರ್, ಮಂಕಿ ಕ್ಯಾಪ್, ಸ್ಯಾನಿಟರಿ ನ್ಯಾಪ್ಕಿನ್, ಬೇಬಿ ಡೈಪರ್ಸ್, ಒಳ ಉಡುಪು, ಹೊಸ ಚಪ್ಪಲಿ, ಸಾಬೂನು, ಟಾರ್ಚ್, ಕ್ಯಾಂಡಲ್, ಬೆಂಕಿಪೊಟ್ಟಣ ಮತ್ತಿತರ ಅಗತ್ಯ ವಸ್ತುಗಳನ್ನು ತಂದು ನೀಡಬಹುದು ಅವರು ಮನವಿ ಮಾಡಿದ್ದಾರೆ.

Notify of
K madhava kotiqn

Namma sahodarara kastagalige Sakthinagara meeting sahakarisona