ಮಾ 30 ರ ಬಸ್ ಬಂದ್‍ಗೆ ಕೆನರಾ ಬಸ್ ಮಾಲಕರ ಸಂಘದ ಬೆಂಬಲವಿಲ್ಲ

Spread the love

ಮಾ 30 ರ ಬಂದ್‍ಗೆ ಕೆನರಾ ಬಸ್ ಮಾಲಕರ ಸಂಘದ ಬೆಂಬಲವಿಲ್ಲ
ಮ0ಗಳೂರು : “ದಕ್ಷಿಣ ಭಾರತದಾದ್ಯಂತ 5 ರಾಜ್ಯಗಳ ಸಹಿತ ಕರ್ನಾಟಕದಾದ್ಯಂತ ಹಾಗೂ ದ.ಕ, ಉಡುಪಿ ಜಿಲ್ಲೆ ಸಹಿತ ಖಾಸಗಿ ಬಸ್ಸುಗಳನ್ನು ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ವಿವಿಧ ಕಾನೂನು ಹಾಗೂ ರಾಷ್ಟ್ರೀಕರಣದ ನೀತಿಯ ವಿರುದ್ಧ ಮಾರ್ಚ್ 30 ರಿಂದ ಅನಿರ್ದಿಷ್ಟಾವದಿ ಬಂದ್ ಮಾಡಲು ಬೆಂಗಳೂರು ಹಾಗೂ ವಿವಿಧ ಕಡೆಗಳಲ್ಲಿ ನಡೆಸಲಾದ ಸಭೆಗಳಲ್ಲಿ ನಿರ್ಧರಿಸಲಾಗಿತ್ತು.
ಆದರೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ಪ್ರಾರಂಭವಾದರಿಂದ ಈ ಸಮಯದಲ್ಲಿ ರಾಜ್ಯವ್ಯಾಪ್ತಿ ಲಕ್ಷಾನುಗಟ್ಟಲೇ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಬಂದ್ ವಿಚಾರವನ್ನು ಮುಂದೂಡಿ ಯಾವುದೇ ಬಸ್ಸು ಬಂದ್ ನಡೆಸದಿರಲುದ್ತೀರ್ಮಾನಿಸಲಾಗಿದೆ. ಅದಲ್ಲದೇ ಸಾರ್ವಜನಿಕರಿಗೆ ಈ ಸಮಯದಲ್ಲಿ ಮದುವೆ ಸಮಾರಂಭ ಉತ್ಸವಗಳಿಗೂ ತೊಂದರೆಯಾಗುವುದನ್ನು ಮನಗಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಕೆನರಾ ಬಸ್ ಮಾಲಕರ ಸಂಘ ಸಂಘ ಲಿಖಿತವಾಗಿ ತಿಳಿಸಿದೆ ಎಂದು ಆರ್.ಟಿ.ಓ ಪ್ರಕಟಣೆ ತಿಳಿಸಿದೆ.


Spread the love