ಮ0ಗಳೂರು ಮಹಾನಗರಪಾಲಿಕೆ ನಿಯೋಗದಿಂದ ಸಿಎಂ ಭೇಟಿ

Spread the love

ಮ0ಗಳೂರು ಮಹಾನಗರಪಾಲಿಕೆ ನಿಯೋಗದಿಂದ ಸಿಎಂ ಭೇಟಿ 
ಮ0ಗಳೂರು : ಮೇಯರ್ ಕವಿತಾ ಸನಿಲ್ ಅವರ ನೇತೃತ್ವದಲ್ಲಿ ಮಂಗಳೂರು ಮಹಾನಗರಪಾಲಿಕೆ ನಿಯೋಗವು ಶನಿವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿತು.
ಮಂಗಳೂರು ಮಹಾನಗರಪಾಲಿಕೆಗೆ ನಗರೋತ್ಥಾನ 4ನೇ ಹಂತದ ಯೋಜನೆಯಲ್ಲಿ 100 ಕೋಟಿ ರೂ. ಅನುದಾನ ಹಾಗೂ ತುಂಬೆ ವೆಂಟೆಡ್ ಡ್ಯಾಂ 7 ಮೀಟರ್ ಎತ್ತರ ಏರಿಸಿದ್ದರಿಂದ ಮುಳುಗಡೆಯಾಗುವ ಸುಮಾರು 500 ಎಕರೆ ಜಮೀನಿಗೆ ರೈತರಿಗೆ ಪರಿಹಾರ ನೀಡಲು ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಮೇಯರ್ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಜೆ.ಆರ್. ಲೋಬೋ, ಮುಖ್ಯ ಸಚೇತಕ ಐವನ್ ಡಿಸೋಜಾ, ನಗರಪಾಲಿಕೆಯ ಹಲವು ಸದಸ್ಯರು ಉಪಸ್ಥಿತರಿದ್ದರು.

Spread the love