ಮಾ 8 ರಂದು ಕೇಂದ್ರ ಸಚಿವ ರಮೇಶ್ ಸಿ ಜಿಗಜಿಣಗಿಯಿಂದ ಉಡುಪಿಯಲ್ಲಿ ಸ್ವಚ್ಛ ಶಕ್ತಿ ಸಪ್ತಾಹ

Spread the love

ಮಾ 8 ರಂದು ಕೇಂದ್ರ ಸಚಿವ ರಮೇಶ್ ಸಿ ಜಿಗಜಿಣಗಿಯಿಂದ ಉಡುಪಿಯಲ್ಲಿ ಸ್ವಚ್ಛ ಶಕ್ತಿ ಸಪ್ತಾಹ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2017’ ‘ಸ್ವಚ್ಛ ಶಕ್ತಿ ಸಪ್ತಾಹ-2017’ ಕಾರ್ಯಕ್ರಮವು ಮಾರ್ಚ್ 8 ರಂದು ಬೆಳಗ್ಗೆ 10.30 ಗಂಟೆಗೆ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಚಿವ ರಮೇಶ್ ಸಿ ಜಿಗಜಿಣಗಿ ನೆರವೇರಿಸುವರು. ಅಧ್ಯಕ್ಷತೆಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸುವರು.

ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು ಉದ್ಘಾಟಿಸುವರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆಯವರು ‘ಪ್ರೇರಣಾ’ ಪರಿಕಲ್ಪನೆಯ ನಂಬಿಕೆ ಹಾಗೂ ಗರ್ಭಿಣಿ ಮಹಿಳೆಯರ ಅಪೌಷ್ಠಿಕತೆ ನಿವಾರಣೆ ಕುರಿತ ಕರಪತ್ರ ಬಿಡುಗಡೆ ಮಾಡಲಿರುವರು.


Spread the love