ಮುಕ್ಕಾದಲ್ಲಿ MDMA ಮಾರಾಟ ಯತ್ನ: ಇಬ್ಬರ ಬಂಧನ, 18.72 ಲಕ್ಷ ಮೌಲ್ಯದ ಸೊತ್ತು ವಶ
ಸುರತ್ಕಲ್: ಮಾಧಕವಸ್ತು MDMA ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿ, ಸುಮಾರು ರೂ.18,72,700 ಮೌಲ್ಯದ ಮಾದಕವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆ ಮೊ.ನಂ 18/2026 ರಲ್ಲಿ ಕಲಂ 8(ಸಿ), 22(ಸಿ) of Narcotic Drugs and Psychotropic Substances Act ಹಾಗೂ ಕಲಂ 3(5) of Bharatiya Nyaya Sanhita ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳನ್ನು ಕಾಪು ನಿವಾಸಿ ಝಕಾರಿಯಾ (38), ತಂದೆ: ದಿ. ಕೆ. ಮೊಹಮ್ಮದ್, ಕೊಂಬುಗುಡ್ಡೆ, ಮಜೂರು, ಮಲ್ಲಾರ್ ಅಂಚೆ ಮತ್ತು ಗ್ರಾಮ, ಉಡುಪಿ ಜಿಲ್ಲೆ ಹಾಗೂ ಮಿಥುನ್ ಪೂಜಾರಿ (23), ತಂದೆ: ಮಹಾಬಲ ಪೂಜಾರಿ, ಗುರುಪ್ರಸಾದ್ ನಿಲಯ, ಅಬ್ಬನ ಕುದ್ರು, ತೆಂಕಬೆಟ್ಟು, ಉಳ್ಳೂರು ಗ್ರಾಮ, ಸಂತೆಕಟ್ಟೆ ಅಂಚೆ, ಉಡುಪಿ ಜಿಲ್ಲೆ ಎಂದು ಗುರುತಿಸಲಾಗಿದೆ.
ಫೆಬ್ರವರಿ 27, 2026 ರಂದು ಮುಕ್ಕಾದಲ್ಲಿರುವ ವೇಯಿಂಗ್ ಬ್ರಿಡ್ಜ್ ಬಳಿಗೆ MDMA ಮಾರಾಟ ಮಾಡಲು ಝಕಾರಿಯಾ ಬರುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ಠಾಣೆಯ ಪಿ.ಎಸ್.ಐ ತಂಡ ಸಂಜೆ 4.15ಕ್ಕೆ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ KA-20-MC-1703 ಹಾಗೂ KA-19-MR-5180 ನಂಬರಿನ ಎರಡು ಕಾರುಗಳು ನಿಂತಿದ್ದು, ಆರೋಪಿಗಳು ಕಾರಿನಲ್ಲೇ ಇದ್ದರು.
ಪರಿಶೀಲನೆ ವೇಳೆ ಆರೋಪಿಗಳ ವಶದಿಂದ ಒಟ್ಟು 54.06 ಗ್ರಾಂ MDMA (ಝಕಾರಿಯಾ ವಶದಿಂದ 18.42 ಗ್ರಾಂ ಮತ್ತು ಮಿಥುನ್ ಪೂಜಾರಿ ವಶದಿಂದ 36.18 ಗ್ರಾಂ) ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ರೂ.5,41,000 ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಕೃತ್ಯಕ್ಕೆ ಬಳಸಿದ ರೂ.13 ಲಕ್ಷ ಮೌಲ್ಯದ ಎರಡು ಕಾರುಗಳು, ರೂ.20,000 ಮೌಲ್ಯದ ಎರಡು ಮೊಬೈಲ್ ಫೋನ್ಗಳು ಹಾಗೂ ರೂ.11,700 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ರೂ.18,72,700 ಆಗಿದೆ.
ಆರೋಪಿಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಹಿಂದಿನ ಪ್ರಕರಣಗಳು
ಬಂಧಿತ ಝಕಾರಿಯಾ ವಿರುದ್ಧ ಈ ಹಿಂದೆ 2009ರಲ್ಲಿ ಬಟ್ಟೆ ಠಾಣೆಯಲ್ಲಿ ಹಲ್ಲೆ ಪ್ರಕರಣ, 2020ರಲ್ಲಿ ಮೂಲ್ಕಿ ಠಾಣೆಯಲ್ಲಿ ಹಲ್ಲೆ ಪ್ರಕರಣ, 2021ರಲ್ಲಿ ಉಡುಪಿ ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ಹಾಗೂ 2022ರಲ್ಲಿ ಮಹಿಳೆಯ ಮೇಲೆ ಹಲ್ಲೆ ಪ್ರಕರಣ ಮತ್ತು ಪಡುಬಿದ್ರೆ ಠಾಣೆಯಲ್ಲಿ ಹಲ್ಲೆ ಪ್ರಕರಣ ಸೇರಿ ಒಟ್ಟು ಐದು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.













