ಮೂರು ಶ್ರೇಷ್ಠ ಕೊಂಕಣಿ ಸಾಧಕರಿಗೆ ಎಫ್.ಕೆ.ಸಿ.ಎ ಪ್ರಶಸ್ತಿ

ಮೂರು ಶ್ರೇಷ್ಠ ಕೊಂಕಣಿ ಸಾಧಕರಿಗೆ ಎಫ್.ಕೆ.ಸಿ.ಎ ಪ್ರಶಸ್ತಿ

ಬೆಂಗಳೂರು : ಫೆಡರೇಶನ್ ಆಫ್ ಕೊಂಕಣಿ ಕ್ಯಾಥೊಲಿಕ್ ಅಸೋಸಿಯೇಷನ್ ಅವರ 21ನೇ ಫೆಡರೇಶನ್ ಡೇ ಅಂದು ತಮ್ಮದೇ ಆದ ಕ್ಷೇತ್ರದಲ್ಲಿ ಹೆಸರು ಮಾಡಿರುವಂತಹ ಕೊಂಕಣಿ ಭಾಷಿಕರಾದ ಪಾಲ್ ಮೊರಾಸ್, ವಿವೇಕ್ ಅರಾನ್ಹಾ ಮತ್ತು ಕೊರಿನ್ ಅಂಟೋನೆಟ್ ರಾಸ್ಕಿನ್ಹಾ ರವರಿಗೆ ಗೌರವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಿದ್ದಾರೆ.‌ ಫೆ.4, ಸಂಜೆ 4.30 ಗಂಟೆಗೆ, ಸ್ಥಳ: ಗುಡ್ ಶೆಫರ್ಡ್ ಆಡಿಟೋರಿಯಂ, ಮ್ಯೂಸಿಯಂ ರಸ್ತೆ, ಸೇಂಟ್ ಪ್ಯಾಟ್ರಿಕ್‌ ಚರ್ಚ್ ಎದುರು, ರಿಚ್ಮಂಡ್ ಟೌನ್, ಬೆಂಗಳೂರು ಇಲ್ಲಿ ನಡೆಯಲಿದೆ.

ಕೊಂಕಣಿಯನ್ನು ತನ್ನ ಬರವಣಿಗೆಯ ಮೂಲಕ ಪುಷ್ಟೀಕರಿಸಿದಕ್ಕಾಗಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಪೌಲ್ ಮೊರಾಸ್ ರನ್ನು ಗೌರವಿಸಲಾಗುವುದು.

ಕೊರಿನ್ ಅಂಟೋನೆಟ್ ರಾಸ್ಕ್ವಿನಾ ಅವರಿಗೆ ಪ್ರೊಫೆಷನಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇವರು ವೈಟ್ ಡೌವ್ಸ್ ಎಂಬ ಮಂಗಳೂರು ಮೂಲದ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕರು.

ಪುಣೆ ರೋಸರಿ ಎಜುಕೇಶನ್ ಗ್ರೂಪ್ ನ ಅಧ್ಯಕ್ಷ ವಿವೇಕ್ ಅರಾನ್ ಅವರಿಗೆ ವರ್ಷದ ಶ್ರೇಷ್ಠ ವಾಣಿಜ್ಯೋದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ಪಿ. ವಿಶ್ವನಾಥ ಶೆಟ್ಟಿ ಲೋಕಯುಕ್ತ, ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಶಾಸನಸಭೆಯ ಮುಖ್ಯ ಹಾಗು ಮಂಗಳೂರು ದಕ್ಷಿಣ ಕ್ಷೇತ್ರದ ಎಂ.ಎಲ್.ಎ ಇವಾನ್ ಡಿ’ಸೋಜಾ, ಆರ್ ಸಂಪತ್ ರಾಜ್ ಗೌರವ ಅತಿಥಿಗಳಾಗಿ ಮತ್ತು ರೆವ್ ಡಾ. ಬೆರ್ನಾರ್ಡ್ ಮೊರಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.