ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ

Spread the love

ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ

ಉಡುಪಿ: ಬಾಳೆ ಹಣ್ಣು ತುಂಬಿಸಿಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನವೊಂದು ನಿಯಂತ್ರಣ ತಪ್ಪಿ ರಾಹೆ 66ರಲ್ಲಿ ಪಲ್ಟಿಯಾದ ಪರಿಣಾಮ ಸರಣಿ ಅಫಘಾತಗಳು ನಡೆದ ಘಟನೆ ಕಾಪು ಸರ್ವೇಶ್ವರ ಬೊಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಮುಂಬಾಗದಲ್ಲಿ ಬುಧವಾರ ಸಂಭವಿಸಿದೆ.

ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಮುಂಭಾಗ ಬಾಳೆಹಣ್ಣು ತುಂಬಿಸಿಕೊಂಡು ಶಿವಮೊಗ್ಗದಿಂದ ಮಂಗಳೂರು ಕಡೆ ಸಾಗುತ್ತಿದ್ದ ಪಿಕ್ಆಪ್ ವಾಹನವೊಂದು ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ಪಲ್ಟಿಯಾದ ಪರಿಣಾಮ ಹಿಂಬದಿಯಲ್ಲಿದ್ದ ಮೀನು ತುಂಬಿಸಿಕೊಂಡು ಕಿನ್ನಿಗೋಳಿ ಕಡೆ ಸಾಗುತ್ತಿದ್ದ ವಾಹನ ಡಿಕ್ಕಿ ಹೊಡೆದ ಘಟನೆ ಬುಧವಾರ ಬೆಳಗ್ಗಿನ ಜಾವ ನಡೆದಿದೆ.

ಬಾಳೆಹಣ್ಣು ವಾಹನದ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love