ಮೋದಿ ಕಿ ಗ್ಯಾರಂಟಿ ಅಲ್ಲ – ಮತ್ತೊಮ್ಮೆ ಜನರಿಗೆ ಮಂಕುಬೂದಿ – ಕೃಷ್ಣಮೂರ್ತಿ ಆಚಾರ್ಯ

Spread the love

ಮೋದಿ ಕಿ ಗ್ಯಾರಂಟಿ ಅಲ್ಲ – ಮತ್ತೊಮ್ಮೆ ಜನರಿಗೆ ಮಂಕುಬೂದಿ – ಕೃಷ್ಣಮೂರ್ತಿ ಆಚಾರ್ಯ

ಉಡುಪಿ: ಉಚಿತ ಯೋಜನೆಗಳಿಂದ ಆರ್ಥಿಕತೆ ಹಾಳಾಗುತ್ತದೆ ಎಂದಿದ್ದ ಇದೇ ನರೇಂದ್ರ ಮೋದಿ ಈಗ “ಮೋದಿ ಕಿ ಗ್ಯಾರಂಟಿ” ಘೋಷಿಸಿದ್ದಾರೆ. ಇದು ನರೆಂದ್ರ ಮೋದಿ ಕಿ ಗ್ಯಾರಂಟಿ ಅಲ್ಲ ಇದು ಜನರಿಗೆ ಮತ್ತೋಮ್ಮೆ ಮಂಕು ಬೂದಿ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ವ್ಯಂಗ್ಯವಾಡಿದ್ದಾರೆ.

ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ನೀಡಿದ ಜನಕಲ್ಯಾಣ ಯೋಜನೆಗಳನ್ನು ಉಚಿತ ಯೋಜನೆಗಳು, ಬಿಟ್ಟಿ ಭಾಗ್ಯಗಳು ಎಂದು ಹಿಯಾಳಿಸುತ್ತಾ ಭಾರತ ಪಾಕಿಸ್ತಾನ, ಶ್ರೀಲಂಕಾ ರೀತಿ ಆಗುತ್ತದೆ ಎನ್ನುತ್ತಿದ್ದ ಬಿಜೆಪಿ ಈಗ ಅದೇ ಗ್ಯಾರಂಟಿ ಮಾದರಿಯಲ್ಲಿ ಘೋಷಣೆಗಳನ್ನು ಮಾಡುತ್ತಿದೆ. ಉಚಿತ ಯೋಜನೆಗಳಿಂದ ಆರ್ಥಿಕತೆ ಹಾಳಾಗುತ್ತದೆ ಎಂದಿದ್ದ ಇದೇ ನರೇಂದ್ರ ಮೋದಿ ಈಗ “ಮೋದಿ ಕಿ ಗ್ಯಾರಂಟಿ” ಘೋಷಿಸಿದ್ದಾರೆ.ಇದು ನರೆಂದ್ರ ಮೋದಿ ಕಿ ಗ್ಯಾರಂಟಿ ಅಲ್ಲ ಇದು ಜನರಿಗೆ ಮತ್ತೋಮ್ಮೆ ಮಂಕು ಬೂದಿ “ಹಿಪಾಕ್ರಸಿ” ಎಂಬುದಕ್ಕೆ ಪರ್ಯಾಯ ಪದವನ್ನು ಹುಡುಕುವುದಾದ್ರೆ ಅದಕ್ಕೆ ” ನರೇಂದ್ರ ಮೋದಿ” ಹೆಸರೇ ಸೂಕ್ತ ಅಲ್ಲವೇ

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈ ಹಿಂದೆಯೂ ಐದು ವರ್ಷದಲ್ಲಿ ಅನೇಕ ಯೋಜನೆಗಳನ್ನು ನುಡಿದಂತೆ ನಡೆದು ಅನುಷ್ಠಾನ ಮಾಡಿದ್ದಾರೆ ಜನರಿಗೆ ತಲುಪಿದೆ ಇದು ಎಲ್ಲಾ ರಾಜ್ಯಗಳಿಗೂ ಮಾದರಿ ಅದೇ ರೀತಿ ಈ ಬಾರಿಯೂ ಮುಖ್ಯಮಂತ್ರಿ ಆಗಿ ನಮ್ಮ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಹೇಳಿದ ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ನೀಡುತ್ತಿದೆ ಆದರೆ ನರೇಂದ್ರ ಮೋದಿಯವರು ಕಳೆದ 9 ವರ್ಷದಿಂದ ಹೇಳಿದ ಯಾವುದೇ ಒಂದು ಯೋಜನೆಗಳು ಜನರಿಗೆ ತಲುಪಿಲ್ಲ ಚುನಾವಣಾ ಪೂರ್ವ ದಲ್ಲಿ ಅನೇಕ ಭರವಸೆಗಳನ್ನು ಬಿಜೆಪಿ ಸಭೆಯಲ್ಲಿ ಬಣ್ಣ ಬಣ್ಣದ ಭಾಷಣ ಗಳನ್ನು ಮಾಡಿದ ನರೇಂದ್ರ ಮೋದಿ ಅವರು ಗೆದ್ದ ನಂತರ ಭಾಷಣದಲ್ಲಿ ಹೇಳಿದ ಯಾವುದನ್ನು ಇವತ್ತು ಮಾಡಿದ್ದು ಇಲ್ಲ ಇವತ್ತು ಕಾಂಗ್ರೆಸ್ನ ಉಚಿತ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಜನರಿಗೆ ಮೋಸ ಮಾಡಿ ಮತವನ್ನು ಪಡೆಯಲು ಪ್ರಯತ್ನಿಸುತ್ತಿದೆ ಆದರೆ ಜನರಿಗೆ ಗೊತ್ತು ಕಳೆದ 9 ವರ್ಷದಲ್ಲಿ ನೀಡಿದ ಭರವಸೆಗಳು ಯಾವುದನ್ನು ನೀಡಿಲ್ಲ ಜನರು ಇವರನ್ನು ತಿರಸ್ಕರಿಸಿದ್ದಾರೆ ಮುಂದಿನ ಚುನಾವಣೆಯಲ್ಲಿ ಗ್ಯಾರಂಟಿಯಾಗಿ ಇವರನ್ನು ಜನರು ಮನೆಗೆ ಕಳಿಸುತ್ತಾರೆ ಎಂದು ಅವರು ಪ್ರಕಟಣೆಯಲ್ಲಿತ ತಿಳಿಸಿದ್ದಾರೆ.


Spread the love