ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ ಕರಂದ್ಲಾಜೆ; ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ?

Spread the love

ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ ಕರಂದ್ಲಾಜೆ; ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ?

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧೆಯಿಂದ ಹಿಂದೆ ಸರಿಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹುದ್ದೆಯನ್ನು ಅಲಂಕರಿಸಿದ ರೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸಲು ರಣತಂತ್ರ ಹೆಣೆಯಲು ಶೋಭಾ ಮುಂದಾಗಿದ್ದಾರೆ ಎನ್ನಲಾಗಿದೆ.

ಮಹತ್ವದ ಬೆಳವಣಿಗೆ ಒಂದರಲ್ಲಿ ಉಡುಪಿಯ ಬಿಜೆಪಿ ಯುವ ಮುಖಂಡ ಯಶ್ಪಾಲ್ ಸುವರ್ಣ ಅವರಿಗೆ ದೆಹಲಿಯಿಂದ ಬುಲಾವ್ ಬಂದಿದ್ದು, ಅವರು ತುರ್ತಾಗಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಆಂತರಿಕ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ರಾಜ್ಯದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೇವಲ 2 ಹೆಸರುಗಳಷ್ಟೇ ಅಂತಿಮವಾಗಿವೆ ಎಂದು ತಿಳಿದು ಬಂದಿದೆ ಮೊದಲ ಹೆಸರು ಶೋಭಾ ಕರಂದ್ಲಾಜೆ ಅವರ ದಿದ್ದರೆ ಎರಡನೇ ಹೆಸರು ಯಶ್ಪಾಲ್ ಸುವರ್ಣ ಅವರದ್ದಾಗಿದೆ ಜಯಪ್ರಕಾಶ್ ಹೆಗಡೆ ಮತ್ತಿತರರು ಟಿಕೇಟಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ರೂ ಸಂಘ ಪರಿವಾರ ಇವರ ಹೆಸರನ್ನು ಎಲ್ಲೂ ಸೂಚಿಸಿಲ್ಲ ಹೀಗಾಗಿ ಶೋಭಾ ಮತ್ತು ಯಶ್ ಪಾಲ್ ಹೆಸರಷ್ಟೇ ಅಂತಿಮಗೊಂಡಿದೆ ಶೋಭಾ ಕರಂದ್ಲಾಜೆಯವರು ರಾಜ್ಯ ಬಿಜೆಪಿಯ ಪ್ರಮುಖ ಹುದ್ದೆಯನ್ನು ಅಲಂಕರಿಸುವುದು ರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಒಂದಕ್ಕೆ ನಾಂದಿ ಹಾಡಲಿದ್ದಾರೆ ಎಂದು ಬಿಜೆಪಿ ವಲಯದಿಂದ ತಿಳಿದು ಬಂದಿದೆ.

ಈ ಹಿಂದೆ ಬಿಜೆಪಿ ಸರಕಾರ ರಚಿಸಲು ನಡೆಸಿದ ಹಲವಾರು ಕಸರತ್ತುಗಳ ಹಿಂದೆ ಶೋಭಾ ಕರಂದ್ಲಾಜೆಯವರ ಪಾತ್ರವಿತ್ತು ಲೋಕಸಭಾ ಚುನಾವಣೆಯ ಬಳಿಕ ಈ ಪ್ರಯತ್ನಗಳು ಇನ್ನಷ್ಟು ತೀವ್ರವಾಗಿ ನಡೆಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯ ಟಿಕೆಟ್ ಅಂತಿಮಗೊಳಿಸುವ ಸಂಸದೀಯ ಸಮಿತಿಯ ಮುಂದೆ ಇದೀಗ ಎರಡು ಹೆಸರುಗಳಿವೆ. ಇದರ ಜೊತೆಗೆ ಪಕ್ಷವು ಒಂದಷ್ಟು ಖಾಸಗಿ ಏಜೆನ್ಸಿಗಳ ಮೂಲಕ ನಡೆಸಿರುವ ಸಮೀಕ್ಷೆಯನ್ನೂ ಅಭ್ಯರ್ಥಿ ಆಯ್ಕೆಗೆ ಪರಿಗಣಿಸುತ್ತಾರೆ ಎಂದು ತಿಳಿದು ಬಂದಿದೆ. ಯಶ್ ಪಾಲ್ ಸುವರ್ಣ ಅವರಿಗೆ ಟಿಕೇಟ್ ಸಿಕ್ಕದ್ದೇ ಆದಲ್ಲಿ ಹಿಂದುಳಿದ ವರ್ಗ ಸೇರಿದಂತೆ ಬಂಟ ಬಿಲ್ಲವ ಎರಡೂ ಪ್ರಬಲ ಸಮುದಾಯಗಳು ಬಿಜೆಪಿಯನ್ನೂ ಪೂರ್ಣ ರೀತಿಯಲ್ಲಿ ಬೆಂಬಲಿಸುವುದರಲ್ಲಿ ಎರಡು ಮಾತಿಲ್ಲ. ಚಿಕ್ಕಮಗಳೂರು ಭಾಗದಲ್ಲಿಯೂ ಯಶಪಾಲ್ ಪರವಾಗಿ ಉತ್ತಮ ಜನಾಭಿಪ್ರಾಯವಿದ್ದು ಯಶ್ಪಾಲ್ ಗೆಲ್ಲಲು ಯಾವುದೇ ಸಮಸ್ಯೆ ಆಗಲಾರದು ಎನ್ನುವುದು ಬಿಜೆಪಿ ವಲಯದ ನಿರೀಕ್ಷೆಯಾಗಿದೆ.

ಈ ನಡುವೆ ಜಯಪ್ರಕಾಶ್ ಹೆಗ್ಡೆ ಕೂಡ ಟಿಕೆಟ್ ಗಾಗಿ ಭಾರೀ ಲಾಭಿ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಆಯ್ಕೆ ಕುತೂಹಲ ಮೂಡಿಸಿದೆ.


Spread the love