ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳ  

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳ  

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು 03-3-2018 ರಿಂದ 31-03-2018 ರವರೆಗೆ ಮಂಗಳೂರಿನ 20 ತಂಡಗಳಿಂದ ಇಪ್ಪತ್ತು ವಿವಿಧ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು. ಮಾರ್ಚ್ ತಿಂಗಳಲ್ಲಿ ಒಟ್ಟು 500 ಕಾರ್ಯಕರ್ತರು 2000 ಮನೆಗಳನ್ನು ಸಂಪರ್ಕಿಸಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಂಡರು.

ಪಡೀಲ್ : ಸ್ವಚ್ಛ ಪಡೀಲ್ ತಂಡದ ಸದಸ್ಯ ರಿಂದ 76 ನೇ ನಿತ್ಯಜಾಗೃತಿ ಅಭಿಯಾನವನ್ನು ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್ ರೋಡ್ ನಲ್ಲಿರುವ ಮಹಾದೇವಿ ಭಜನಾ ಮಂದಿರದಿಂದ ಪ್ರಾರಂಭಿಸಲಾಯಿತು. ಸುಮಾರು ಮೂವತ್ತು ಜನ ಸದಸ್ಯರು ಉದಂiÀi ಕೆಪಿ ಮಾರ್ಗದರ್ಶನದಲ್ಲಿ ಸ್ಥಳಿಯ ಮನೆಗಳಿಗೆ ಬೇಟಿನೀಡಿ ಸ್ವಚ್ಛ ಸಂಕಲ್ಪ ಕರಪತ್ರ ವಿತರಿಸಿ ಜನರಲ್ಲಿ ಸ್ವಚ್ಚತೆಯ ಕುರಿತಂತೆ ಅರಿವು ಮೂಡಿಸಿದರು.

ಹೊಐಗೆ ಬಜಾರ್: ಮೀನುಗಾರಿಕ ಕಾಲೇಜಿನ ಸುತ್ತಮುತ್ತ ನಿವೇದಿತ ಬಳಗದ ಸದಸ್ಯೆಯರು 77 ನೇ ಅಭಿಯಾನವನ್ನು ಕೈಗೊಂಡರು. ಸ್ಥಳಿಯ ಯುವಕರ ಆಸಕ್ತಿಯಿಂದ ಉದ್ಯಾನವನವಾಗಿ ಮಾರ್ಪಾಡಾದ ಕಸ ಬೀಳುತ್ತಿದ್ದ ಜಾಗದಲ್ಲಿ ಸ್ವಚ್ಛತೆ ಕಾಯ್ದಿರಿಸುವಂತೆ ಸುತ್ತಮುತ್ತಲಿನ ನಾಗರಿಕರಲ್ಲಿ ಮನವಿ ಮಾಡಿಕೊಂಡರು.

ನಂತೂರ್: ಹವ್ಯಕ ಸಭಾ ಸದಸ್ಯರಿಂದ ನಂತೂರ್ ಜಂಕ್ಷನ್ ರಸ್ತೆಯÀಲ್ಲಿ ಸ್ವಚ್ಚತೆಗಾಗಿ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಭಾರತಿ ಕಾಲೇಜಿನ ಸುಮಾರು 40 ಜನ ವಿದ್ಯಾರ್ಥಿಗಳು ವೇಣುಗೋಪಾಲ್ ಭಟ್ ನೇತೃತ್ವದಲ್ಲಿ ಈ 78 ನೇ ಆಭಿಯಾನದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು.

ನಾಗುರಿ: ಸ್ವಚ್ಛ ಗರೋಡಿ ತಂಡದ ಯುವಕರು ನಾಗುರಿಯ ರೆಡ್ ಬಿಲ್ಡಿಂಗ್ ಪ್ರದೇಶದಲ್ಲಿನ ಸುಮಾರು ನೂರು ಮನೆಗಳಿಗೆ ಬೇಟಿನೀಡಿ 79 ನೇ ಸ್ವಚ್ಛತಾ ಜಾಗೃತಿಕಾರ್ಯ ಮಾಡಲಾಯಿತು. ಈ ಅಭಿಯಾನವನ್ನು ಪ್ರಕಾಶ್ ಗರೋಡಿ ಸಂಯೋಜಿಸಿದರು.

ಯಕ್ಕೂರು: ಸ್ವಚ್ಛ ಯಕ್ಕೂರು  ಕಾರ್ಯಕರ್ತರು ಸ್ಥಳಿಯ ಮನೆಗಳಿಗೆ ತೆರಳಿ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವಂತೆ ಮತ್ತು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವಿನಂತಿಸಿಕೊಂಡರು. ಪ್ರಶಾಂತ್ ಯಕ್ಕೂರು 80 ನೇ ಜಾಗೃತಿ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು

ಬಂದರ್: ಸ್ವಚ್ಛ ಮಂಗಳೂರು ಅಭಿಯಾನದ ಮೂಲಕ ಸ್ವಚ್ಛಗೊಳಿಸಿದ ಮೊಹಮ್ಮದ್ ಅಲಿ ರಸ್ತೆ, ಮಿಶನ್ ಸ್ಟ್ರೀಟ್ ರಸ್ತೆಗಳಲ್ಲಿ ಮತ್ತೆ ಕಸಬೀಳದಂತೆ ತಡೆಯಲು ಸಂತ ಅಲೋಸಿಯಸ್ ಎನ್‍ಎಸ್‍ಎಸ್ ಕಾರ್ಯಕರ್ತರಿಂದ 81ನೇ ನಿತ್ಯ ಜಾಗೃತಿ ಅಭಿಯಾನವನ್ನು ಹಮ್ಮಿ ಕೊಳ್ಳಲಾಯಿತು. ಎನ್‍ಎಸ್‍ಎಸ್ ಸಂಚಾಲಕಿ ಪ್ರೇಮಲತಾ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಸುಮಾರು ನೂರಕ್ಕೂ ಹೆಚ್ಚು ವರ್ತಕರನ್ನು ಬೇಟಿಮಾಡಿ ಜಾಗೃತಿ ಕಾರ್ಯ ಕೈಗೊಂಡರು.

ಕೊಡಿಕಲ್: ಸ್ವಚ್ಛ ಕೊಡಿಕಲ್ ತಂಡದ ಸದಸ್ಯರಿಂದ ಕೊಡಿಕಲ್ ಅಡ್ದರಸ್ತೆಯಲ್ಲಿನ ಮನೆಗಳಿಗೆ ತೆರಳಿ ಸಂಕಲ್ಪಕರಪತ್ರ ನೀಡಿ ಜನರಿಗೆ ಸ್ವಚ್ಚತೆಗೆ ಸಂಬಂದಿಸಿದ ಮಾಹಿತಿ ನೀಡಲಾಯಿತು. 82 ನೇ ಜಾಗೃತಿ ಅಭಿಯಾನವನ್ನು ಕಿರಣ್ ಕೊಡಿಕಲ್ ಸಂಘಟಿಸಿದರು.

ಶಿವಭಾಗ್: ಸ್ವಚ್ಛ ಶಿವಭಾಗ್ ಕಾರ್ಯಕರ್ತರು ಶಿವಭಾಗ್‍ನ 1 ಮತ್ತು 2ನೇ ಅಡ್ದರಸ್ತೆಗಳಲ್ಲಿನ ಮನೆಗಳನ್ನು ಸಂಪರ್ಕಿಸಿ ಸಾರ್ವಜನಿಕರು ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಕೇಳಿಕೊಂಡರು. ಶೀಲಾ ಜಯಪ್ರಕಾಶ್, ಸೀಮಾ ಈ  83 ನೇ ನಿತ್ಯ ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಉರ್ವಾ ಸ್ಟೋರ್: ಅಲ್ಪಸಂಖ್ಯಾತ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಂದ 84ನೇ ನಿತ್ಯ ಜಾಗೃತಿ ಅಭಿಯಾನವನ್ನು ಊರ್ವಾ ಸ್ಟೋರ್ ನಲ್ಲಿ ಹಮ್ಮಿ ಕೊಳ್ಳಲಾಯಿತು. ವಿದ್ಯಾರ್ಥಿನಿಯರು ಮೂರು ಗುಂಪು ಗಳಲ್ಲಿ ತೆರಳಿ 150ಕ್ಕೂ ಹೆಚ್ಚಿನ ವ್ಯಾಪಾರಿಗಳನ್ನು ಭೇಟಿಮಾಡಿ ಸ್ವಚ್ಛತೆಯ ಕರಪತ್ರ ನೀಡಿದರು.

ಬಿಜೈ: ಮಂಗಳೂರು ಹಿರಿಯ ನಾಗರಿಕರ ಒಕ್ಕೂಟದ ಸದಸ್ಯರಿಂದ ಬಿಜೈ ಚರ್ಚ್ ರಸ್ತೆಯಲ್ಲಿ 85ನೇ ಸ್ವಚ್ಛತಾಜಾಗೃತಿ ಕಾರ್ಯವನ್ನು ನೆರವೇರಿಸಲಾಯಿತು. ಸದಸ್ಯರು ರಸ್ತೆಯಲ್ಲಿ ಕಸಎಸೆದವರ ಮನೆಯನ್ನು ಪತ್ತೆಹಚ್ಚಿ ಅ ಕಸ ಹಿಂದಿರುಗಿಸಿ ಇನ್ನು ಮುಂದೆ ಈ ರೀತಿ ಅಚಾತುರ್ಯ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡರು.

ಜಪ್ಪು: ಬೋಳಾರ ರಸ್ತೆಯಲ್ಲಿ ಭಗಿನಿ ಸಮಾಜದ ಮಹಿಳೆಯರಿಂದ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದನ್ನು ನಿಲ್ಲಿಸುವ ಸಲುವಾಗಿ 86ನೇ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ರತ್ನ ಆಳ್ವ ಅಭಿಯಾನ ಸಂಯೋಜಿಸಿದರು.

ಅಳಕೆ: ಕೂಳೂರು ಫೆರ್ರಿ ರಸ್ತೆ ಯಲ್ಲಿ ಸ್ವಚ್ಛ ಅಳಕೆ ತಂಡದ ಯುವಕರು ರಸ್ತೆಬದಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಿದ್ದರು.ಇನ್ನು ಮುಂದೆ ಅಲ್ಲಿ ಕಸ ಎಸೆಯದಂತೆ ಸ್ಥಳಿಯ ಅಂಗಡಿ ಮನೆ ಗಳಿಗೆ ತೆರಳಿ ಜಾಗೃತಿ ಕಾರ್ಯ ನಡೆಸಿದರು. ಕೃಷ್ಣ ಪ್ರಸಾದ್ ಶೆಟ್ಟಿ  87ನೇ ಅಭಿಯಾನವನ್ನು ಸಂಯೋಜಿಸಿದರು.

ಸೆಂಟ್ರಲ್ ಮಾರ್ಕೆಟ್: ರಥಬೀದಿ ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳು ಮೂರು ಗುಂಪುಗಳಲ್ಲಿ 88ನೇ ಜಾಗೃತಿ ಕಾರ್ಯ ಕೈಗೊಂಡರು. ಸುಮಾರು ನೂರಾಐವತ್ತು ವ್ಯಾಪಾರ ಮಳಿಗೆಗಳಿಗೆ ಬೇಟಿ ನೀಡಿ ಸ್ವಚ್ಛತೆಯ ಪ್ರಾಮುಖ್ಯತೆ ತಿಳಿಸಿಕೊಟ್ಟರು. ಪೆÇ್ರ. ಶೇಷಪ್ಪ ಆಮೀನ್ ಅಭಿಯಾನದ ನೇತೃತ್ವ ವಹಿಸಿದ್ದರು.

ಬೋಳಾರ: ನಿವೇದಿತ ಬಳಗದ ಸದಸ್ಯೆಯರು ಲೀವೆಲ್ ರಸ್ತೆಯಲ್ಲಿನ ಮನೆಗಳಿಗೆ ಮತ್ತು ಪಿಎನ್‍ಟಿ ಕ್ವಾಟರ್ಸ್ ಗೆ ತೆರಳಿ ಕರಪತ್ರ ನೀಡಿ,  ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಯ್ದಿರಿಸುವಂತೆ ಮನವಿ ಮಾಡಿಕೊಂಡರು. 89ನೇ ಅಭಿಯಾನವನ್ನು ಅಧ್ಯಾಪಕಿ ವಿಜಯಲಕ್ಷ್ಮೀ ಮಾರ್ಗದರ್ಶಿಸಿದರು.

ಹಳೆ ಬಸ್ ನಿಲ್ದಾಣ: ಶರವು ದೇವಸ್ಥಾನ ರಸ್ತೆ ಮತ್ತು ಸಿಟಿ ಸೆಂಟರ್ ಮಾಲ್ ಸಾಗುವ ಮಾರ್ಗದಲ್ಲಿ ಎಸ್‍ಕೆಬಿ ಆಟೋಪಾರ್ಕ್‍ನ ಸದಸ್ಯರು ಗಣೇಶ್ ಬೊಳಾರ್ ನೇತೃತ್ವದಲ್ಲಿ 90 ನೇ ನಿತ್ಯಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ಜಾಗೃತಿ ಕರಪತ್ರ ವಿತರಿಸಿ ಸ್ವಚ್ಛತಾ ಸಂದೇಶವನ್ನು ಸಾರಿದರು.

ಗಣೇಶ್ ರಾವ್ ಲೇನ್ : ಸುಬ್ರಹ್ಮಣ್ಯ ಸಭಾ ಸದನದ ಕಾರ್ಯಕರ್ತರು ಬಿಜೈನ ಗಣೇಶ್ ರಾವ್ ಲೇನ್ ಮನೆಗಳಿಗೆ ಬೇಟಿನೀಡಿದ ಸ್ವಚ್ಛತಾ ಮಾಹಿತಿ ಪತ್ರವನ್ನು ನೀಡಿ ಮಂಗಳೂರನ್ನು ಸ್ವಚ್ಛವಾಗಿಡಲು  ಸಹಕಾರ ಕೋರಿದರು. ಶ್ರೀಕಾಂತ್ ರಾವ್ 91 ನೇ ಅಭಿಯಾನವನ್ನು ಸಂಯೋಜಿಸಿದರು.

ಪಾಂಡೇಶ್ವರ: ಶ್ರೀಶಾರದ ಮಹಿಳಾವೃಂದದ ಸದಸ್ಯೆಯರಿಂದ ಶಿವನಗರದಲ್ಲಿನ ನೂರಕ್ಕೂ ಅಧಿಕಮನೆಗಳಿಗೆ ಬೇಟಿನೀಡಿ ಸ್ವಚ್ಛಜಾಗೃತಿ ಕಾರ್ಯಕೈಗೊಳ್ಳಲಾಯಿತು. ಶ್ರೀಮತಿ ಲತಾಮಣಿ ರೈ ಸೇರಿದಂತೆ ಸುಮಾರು ಮೂವತ್ತಕ್ಕೂ ಅಧಿಕ ಮಹಿಳೆಯರು 92ನೇ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹಂಪನಕಟ್ಟೆ: ಬಲ್ಮಠ ರಸ್ತೆಯಲ್ಲಿ ಹಿಂದೂ ವಾರಿಯರ್ಸ್ ಯುವಕಾರ್ಯಕರ್ತರಿಂದ 93ನೇ ನಿತ್ಯಜಾಗೃತಿ ಅಭಿಯಾನವನ್ನು ನೆರವೇರಿಸಲಾಯಿತು. ಕಾರ್ಯಕರ್ತರು ಯೋಗಿಶ್ ಕಾಯರ್ತಡ್ಕ ನೇತೃತ್ವದಲ್ಲಿ ಎರಡುಗುಂಪುಗಳಲ್ಲಿ ಸ್ವಚ್ಛತಾ ಸಂಕಲ್ಪ ಕರಪತ್ರ ವಿತರಿಸಿ ಜಾಗೃತಿಕಾರ್ಯ ಕೈಗೊಂಡರು.

ಬಿಬಿ ಅಲಾಬಿ ರಸ್ತೆ: ಮೈದಾನ್ ಮೂರನೇ ತಿರುವು ಮತ್ತು ಬಿಬಿ ಅಲಬಿ ರಸ್ತೆಗಳಲ್ಲಿನ ವ್ಯಾಪಾರಸ್ತರನ್ನು ಸಂಪರ್ಕಿಸಿದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮತ್ತು ಕಸದ ಬುಟ್ಟಿಗಳನ್ನಿಡುವಂತೆ ಕೇಳಿಕೊಂಡರು. 94ನೇ ಅಭಿಯಾನದಲ್ಲಿ ಸುಮಾರು ನಲವತ್ತು ಕಾಲೇಜು ಯುವ-ಯುವತಿಯರು ಪಾಲ್ಗೊಂಡರು.

ಪ್ರತಿದಿನ ಸಾಯಂಕಾಲ ನಡೆಯುತಿರುವ ಸ್ವಚ್ಛತಾ ಜಾಗೃತಿ ಅಭಿಯಾನದ ನೇತೃತ್ವವನ್ನು ಬ್ರಹ್ಮಚಾರಿ ಶಿವಕುಮಾರ, ಬ್ರಹ್ಮಚಾರಿ ವಿನೋದ್, ಬ್ರಹ್ಮಚಾರಿ ನಿಶ್ಚಯ, ಬ್ರಹ್ಮಚಾರಿ ಚಿದಾನಂದ, ಬ್ರಹ್ಮಚಾರಿ ಲೋಕೆಶ್, ಬ್ರಹ್ಮಚಾರಿ ರಾಜಶೇಖರ್ ವಹಿಸಿದ್ದರು.  ಪ್ರಧಾನ ಸಂಯೋಜಕ ಶ್ರೀ ಉಮಾನಾಥ ಕೋಟೆಕಾರ್ ಕಾರ್ಯಕ್ರಮಗಳನ್ನು ಸಂಘಟಿಸಿದರು.


Spread the love