ರೈಲು ಡಿಕ್ಕಿಯಾಗಿ ಛಿದ್ರಗೊಂಡ ಶವವನ್ನು ಎತ್ತಿ ಮಾನವೀಯತೆ ಮೆರೆದ ಮುಸ್ಲಿಂ ವ್ಯಕ್ತಿ

ರೈಲು ಡಿಕ್ಕಿಯಾಗಿ ಛಿದ್ರಗೊಂಡ ಶವವನ್ನು ಎತ್ತಿ ಮಾನವೀಯತೆ ಮೆರೆದ ಮುಸ್ಲಿಂ ವ್ಯಕ್ತಿ

ಮುಲ್ಕಿ: ರೈಲು ಡಿಕ್ಕಿ ಹೊಡೆದು ಸಂಪೂರ್ಣ ಛಿದ್ರವಾದ ದೇಹವನ್ನು ಎತ್ತಿ ಮಾನವೀಯತೆ ಹಾಗೂ ಸೌಹಾರ್ದತೆಗೆ ಮುಸ್ಲಿಂ ವ್ಯಕ್ತಿಯೊಬ್ಬರು ಸಾಕ್ಷಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸೋಮವಾರ ವೆಂಕಟೇಶ್ ಎಂಬ ವ್ಯಕ್ತಿ ಮೂಲ್ಕಿಯಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದು, ರೈಲು ಡಿಕ್ಕಿ ಹೊಡೆದ ರಭಸಕ್ಕೆ ವೆಂಕಟೇಶ್ ಅವರ ಶರೀರ ಸಂಪೂರ್ಣ ಛಿದ್ರಗೊಂಡು ರೈಲು ಹಳಿಗಳ ಮೇಲೆ ಬಿದ್ದಿದ್ದು, ಮುಲ್ಕಿಯಲ್ಲಿ ಆಪತ್ಪಾಂಧವ ಎಂದು ಗುರುತಿಸಿಕೊಂಡಿದ್ದ ಪಡುಬಿದ್ರೆ ಆಸೀಫ್ ಎಂಬವರು ಪೊಲೀಸರ ಸಹಾಯದಿಂದ ಮುಲ್ಕಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸಿದ್ದಾರೆ.

ಮುಲ್ಕಿ ಶವಾಗಾರದಲ್ಲಿ ಆಸ್ಪತ್ರೆಯ ವೈದ್ಯರೊಂದಿಗೆ ಇನ್ನೋರ್ವ ಮುಸ್ಲಿಂ ವ್ಯಕ್ತಿ ವಾಜೀದ್ ಪಟೇಲ್ ಕೂಡ ಸಹಕರಿಸಿದ್ದು ಮಾನವೀಯತೆ ಮೆರೆಯುವಲ್ಲಿ ಸಹಕಾರಿಯಾಗಿದ್ದು ಸಾರ್ವಜನಿಕರು ಇವರ ಕೆಲಸಕ್ಕೆ ಶ್ಲಾಘಿಸಿದ್ದಾರೆ.