ರೋಶನ್ ಡೊನಾಲ್ಡ್ ಮತ್ತು ಆಶಾ ರೋಶನಿ ಕೊರೆಯಾ ‘ಧ್ವನಿ ಪುರಸ್ಕಾರ ಅಂತರಾಷ್ಟ್ರೀಯ ಪ್ರಶಸ್ತಿ’ ಪುರಸ್ಕೃತರು 

Spread the love

ರೋಶನ್ ಡೊನಾಲ್ಡ್ ಮತ್ತು ಆಶಾ ರೋಶನಿ ಕೊರೆಯಾ ‘ಧ್ವನಿ ಪುರಸ್ಕಾರ ಅಂತರಾಷ್ಟ್ರೀಯ ಪ್ರಶಸ್ತಿ’ ಪುರಸ್ಕೃತರು 

ಧ್ವನಿ ಪ್ರತಿಷ್ಠಾನ ಯು.ಎ.ಇ. ತನ್ನ 35ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ “ಧ್ವನಿ ರಂಗ ಸಿರಿ ಉತ್ಸವ” ಸಂಭ್ರಮಾಚರಣೆಯಲ್ಲಿ 2020 ಫೆಬ್ರವರಿ 14ನೇ ತಾರೀಕಿನಂದು ದುಬಾಯಿ ಜುಮೆರಾದಲ್ಲಿರುವ ಎಮಿರೆಟ್ಸ್ ಇಂಟನ್ರ್ಯಾಶನಲ್ ಸ್ಕೂಲ್- ಎಮಿರೇಟ್ಸ್ ಥಿಯೆಟರ್‍ನಲ್ಲಿ ನಡೆಯಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಧ್ವನಿ ಪುರಸ್ಕಾರ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಯು.ಎ.ಇ. ಯಲ್ಲಿ ಸುಮಧುರ ಕಂಠ ಸಿರಿಯ ಗಾಯಕರು, ರಂಗಭೂಮಿ ಕಲಾವಿದರು, ಕಾರ್ಯಕ್ರಮ ನಿರೂಪಕರು, ಸಮಾಜ ಸೇವೆಯಲ್ಲಿ ತೊಡಗಿರುವ ದಂಪತಿಗಳಾದ ಶ್ರೀ ರೋಶನ್ ಡೊನಾಲ್ಡ್ ಕೊರೆಯ ಮತ್ತು ಶ್ರೀಮತಿ ಆಶಾ ರೋಶನಿ ಕೊರೆಯಾ ರವರಿಗೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗ್ಡೆ, ಕರ್ನಾಟಕ ನಾಟಕ ಅಕಾಡೇಮಿ ಪೂರ್ವ ಅಧ್ಯಕ್ಷರು ಶ್ರೀ ಶ್ರೀನಿವಾಸ ಕಪ್ಪಣ್ಣ, 2020 ನೇ ಸಾಲಿನ ಧ್ವನಿ ಶ್ರೀರಂಗ ಪ್ರಶಸ್ತಿ ಪುರಸ್ಕೃತರು ಡಾ. ಎಚ್.ಎಸ್.ವೆಂಕಟೇಶ್ ಮೂರ್ತಿ, ಗೌರವ ಅತಿಥಿ ಪ್ರೊ. ಮಂದ ವೆಂಕಟರಮಣ ಹಾಗೂ ಧ್ವನಿ ನೃಪತುಂಗ ಕನ್ನಡ ಪೋಷಕ ಪ್ರಶಸ್ತಿ ವಿಜೇತರುಗಳಾದ ಶ್ರೀ ರವೀಶ್ ಗೌಡ, ಶ್ರೀ ಜೇಮ್ಸ್ ಮೆಂಡೊನ್ಸಾ, ಶ್ರೀ ರಾಮಚಂದ್ರ ಹೆಗ್ಡೆ ಹಾಗೂ ಧ್ವನಿ ಪ್ರತಿಷ್ಠಾದ ಅಧ್ಯಕ್ಷರು ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಉಪಸ್ಥಿತರಿದ್ದರು.

ಗಿರೀಶ್ ಕಾರ್ನಾಡರ ನಾಟಕ ಪ್ರಕಾಶ್ ರಾವ್ ಪಯ್ಯಾರ್ ನಿರ್ದೇಶನದ, ಧ್ವನಿ ಪ್ರತಿಷ್ಠಾನ ಅರ್ಪಿಸುವ ಸ್ಥಳಿಯ ರಂಗಭೂಮಿ ಕಲಾವಿದರ ತಂಡೊಂದಿಗೆ ರೋಶನ್ ಡೊನಾಲ್ಡ್ ಕೊರೆಯ ಮತ್ತು ಆಶಾ ರೋಶನಿ ಕೊರೆಯಾ ನಟಿಸಿರುವ “ಮದುವೆಯ ಅಲ್ಬಂ” ನಾಟಕ ಹಾಗೂ ಮುದ್ರಾದಿ ನಾಟ್ಕದೂರು ನಮ್ಮ ತುಳುವೆರ್ ಸಂಘಟನೆ ಪ್ರಸ್ತುತ ಪಡಿಸಿದ ಮುದ್ರಾಡಿಯಿಂದ ದುಬಾಯಿಗೆ ಬಂದಿರುವ ರಂಗಭೂಮಿ ಕಲಾವಿದರ ತಂಡದವರಿಂದ ಶ್ರೀ ಸುಕುಮಾರ್ ಮೋಹನ್ ನಿರ್ದೇಶನದಲ್ಲಿ “ದಶಾನನ ಸ್ವಪ್ನಸಿದ್ಧಿ” ನಾಟಕ ಪ್ರದರ್ಶನವಾಯಿತು.

ರೋಶನ್ ಡೊನಾಲ್ಡ್ ಕೊರೆಯ ಹೆಜ್ಜೆ ಗುರುತುಗಳು….
ಭವ್ಯ ಭಾರತ ಸುಂದರ ಕರ್ನಾಟಕದ ಕಡಲ ತೀರದ ತುಳುನಾಡಿನ ಉಡುಪಿ ಜಿಲ್ಲೆಯ ಪೆರ್ನಾಲ್‍ನಲ್ಲಿ ಶ್ರೀ ಡೇವಿಡ್ ಕೊರೆಯಾ ಮತ್ತು ಶ್ರೀಮತಿ ಎಲಿಝಾ ಕೊರೆಯಾ ದಂಪತಿಗಳ ಮಗನಾಗಿ ಜನಿಸಿರುವ ರೋಶನ್ ಡೊನಾಲ್ಡ್ ಕೊರೆಯ ಉತ್ತಮ ಪರಿಸರದಲ್ಲಿ ಬೆಳೆದು ಬಂದವರು ಸಾಂಸ್ಕೃತಿಕವಾಗಿ ಬಹುಮುಖ ಪ್ರತಿಭೆಯನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡಿದ್ದರು.

ಶಿರ್ವಾ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ನಾಯಕನಾಗಿ ಆಯ್ಕೆಯಾಗಿ ಜೊತೆಗೆ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ “ಬೆಸ್ಟ್ ಔಟ್ ಸ್ಟ್ಯಾಂಡಿಂಗ್ ಲೀಡರ್ಶಿಫ್ ಪ್ರಶಸ್ತಿ” ಪಡೆದು ತನ್ನ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರು. ಅಖಿಲ ಭಾರತ ಕೆಥೋಲಿಕ್ ಯೂನಿವರ್ಸಿಟಿ ಫೆಡರೇಶನ್ ಅಧ್ಯಕ್ಷ, ಫಾಮದ್ ಪೆರ್ನಾಲ್ ಅಧ್ಯಕ್ಷ, ಐಸಿಎಮ್ ಶಿರ್ವಾ ವಾರಡೋ ಸಾಂಸ್ಕೃತಿಕ ಕಾರ್ಯದರ್ಶಿ, ದಾಯಿಜಿ ರಂಗ ಮಂದಿರ್ ಸಹ ಸಂಘಟಕರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ರೋಶನ್ ಡೊನಾಲ್ಡ್ ಕೊರೆಯ ಎಲ್ಲರ ಮೆಚ್ಚುಗೆಯ “ಡೋನಿ” ಎಂದೇ ಕರೆಯಲ್ಪಟ್ಟರು.

ಪ್ರಸ್ತುತ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಅನಿವಾಸಿ ಭಾರತೀಯರಾಗಿ ಮಡದಿ ಶ್ರೀಮತಿ ಆಶಾ ರೋಶನಿ ಕೊರೆಯ ಮತ್ತು ಮಕ್ಕಳು ಡಿಯೋನಾ ರೆಬೆಕ್ಕಾ, ಡೆಲಿಶಾ ರುಕ್ ರೊಂದಿಗೆ ನೆಲೆಸಿದ್ದಾರೆ. ಮಂಗಳೂರಿನ ಬಹುಮುಕ ಪ್ರತಿಭೆಯಾಗಿ ತಾಯಿನಾಡಿನ ಹೆಸರನ್ನು ಗಲ್ಫ್ ರಾಷ್ಟ್ರದಲ್ಲಿ ಎತ್ತಿ ಹಿಡಿದಿದ್ದಾರೆ.

ಸುಮಧುರ ಕಂಠಸಿರಿಯ ಗಾಯಕರಾಗಿ….

ಗಲ್ಫ್ ರಾಷ್ಟ್ರದ ವಿವಿಧ ಭಾಗಗಳಲ್ಲಿ ವಿವಿದ ಸಂಘಟನೆಗಳ ವೈವಿಧ್ಯಮಯ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಂಗೀತ ಸಂಜೆ, ಸಂಗೀತ ಸ್ಪರ್ಧೆ, ವಾರ್ಷಿಕ ಸ್ನೇಹಮಿಲನ, ಸಾಹಿತ್ಯ ಸಮ್ಮೇಲನದ ವೇದಿಕೆಗಳಲ್ಲಿ ಡೋನಿ ಕೊರೆಯಾ ರವರ ಬಹುಮುಖ ಪ್ರತಿಭೆಗಳು ಅನಾವರಣಗೊಂಡಿದೆ. ಕೊಂಕಣಿ, ಕನ್ನಡ, ತುಳು, ಹಿಂದಿ ಚಿತ್ರ ಗೀತೆಗಳು, ಜನಾಪದ ಗೀತೆಗಳು, ಬೈಲಾ ಗೀತೆಗಳು ಮರಳುನಾಡಿನಾದ್ಯಂತ ಪ್ರತಿಧ್ವನಿಸುತ್ತಿದೆ. ಅಪಾರ ಅಭಿಮಾನಿ ಕೇಳುಗ ಪ್ರೇಕ್ಷಕರನ್ನು ಪಡೆದಿರುವ ಡೋನಿ ಕೊರೆಯಾ ಸಂಗೀತ ಲೋಕದಲ್ಲಿ ಪ್ರಬುದ್ಧ ಗಾಯಕರಾಗಿ ಜನಮಾನಸದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಮಂಗ್ಳುರ್ ಕೊಂಕಣ್ಸ್ ಏರ್ಪಡಿಸಿದ ಯು.ಎ.ಇ. ಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. “ಗಲ್ಫ್ ವಾಯ್ಸ್ ಆಫ್ ಮಂಗ್ಲೂರ್” ಗಲ್ಫ್ ರಾಷ್ಟ್ರಗಳ ಮಟ್ಟದಲ್ಲಿ ಕುವೈಟ್ ನಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ಸ್ ಅಪ್ ಆಗಿ ಪ್ರಶಸ್ತಿಯನ್ನು ಡೋನಿ ಕೊರೆಯಾ ತನ್ನದಾಗಿಸಿ ಕೊಡ್ಡಿದ್ದರು.

“ಗಲ್ಫ್ ವಾಯ್ಸ್ ಆಫ್ ಮಂಗ್ಲೂರ್” ಸೀಸನ್ 3, 4, 5ರಲ್ಲಿ ಕಾರ್ಯಕ್ರಮ ನಿರೂಪಕರಾಗಿ ಅತ್ಯಂತ ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಾರೆ.

ಡೋನಿ ಕೊರೆಯಾ ತಮ್ಮ ಬಾಳಸಂಗಾತಿ ಶ್ರೀಮತಿ ಆಶಾ ಕೊರೆಯಾರೊಂದಿಗೆ ಸೇರಿ ನಿರ್ಮಿಸಿದ ಕೊಂಕಣಿ ಭಾಷೆಯ ಮ್ಯೂಸಿಕ್ ಅಲ್ಬಂ “ಹಿರೋ ಒನ್ಲಿ ಯೂವರ್ಸ್” ಸೂಪರ್ ಹಿಟ್ ಆಗಿ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಗಲ್ಫ್ ರಾಷ್ಟ್ರದಲ್ಲಿ ನೀಡಿರುವ ಗಾಯನ ಕಾರ್ಯಕ್ರಮಗಳು ವಿಕ್ಟರ್ ಕೊನೆಸ್ಕೊ ನೈಟ್, ರಂಗ್ ತರಂಗ್, ಡಾ. ಪ್ರಶಾಂತ್ ರಾಜ್ ಲೈವ್ ಕಾನ್ಸರ್ಟ್, ಮೊಗಾಚಿ ಲಾರೆನ್ ಕಾನ್ಸರ್ಟ್, ಮಂಗ್ಳುರ್ ಕೊಂಕಣ್ಸ್ – ಕೊಂಕಣ್ ಮಿಲನ್, ಲ್ಯಾನ್ಸಿ ನೊರೊನಾ ಮ್ಯೂಸಿಕಲ್ ನೈಟ್, ಕರ್ನಾಟಕ ಸಂಘ ಶಾರ್ಜಾ, ತುಳುಕೂಟ ದುಬಾಯಿ-ತುಳು ಪರ್ಬ, ಬೆಳ್ಳೆವಿಶನ್, ಸಂಭ್ರಮ್, ದಾಯಿಜಿ ದುಬಾಯಿ – ದಾಯಿಜಿ ದರ್ಬಾರ್, ಫೆರಾರಿಟಸ್, ನಾಮಂಜೂರಿಯನ್ಸ್, ಕಟ್ಪಾಡಿ ಕೊಂಕಣ್ಸ್, ಉದ್ಯಾವರೈಟ್ಸ್, ಎಮಿರೆಟ್ಸ್ ಪಾಂಗಾಲೈಟ್ಸ್, ಪಂಬೂರ್ ವೆಲ್ಫೆರ್ ಅಸೋಸಿಯೇಶನ್ಸ್, ವಮಾಂಜೂರ್ ದೈವ್ಸ್, ಲೂಡ್ರ್ಸ್ ಕಣಜಾರ್, ಸೈಂಟ್ ಜೋಸೆಪ್ಸ್ ಬೆಟ್ಕಟಿ ಬೆಳ್ಮಣ್, ಪುತ್ತೂರು ಅಸೊಸಿಯೇಶನ್ಸ್, ಕೆಮ್ಮಣ್ಣು ಫ್ಲವರ್ಸ್ ದುಬಾಯಿ.

ಚಿತ್ರನಟ, ರಂಗಭೂಮಿ ನಟನಾಗಿ…

ಯು.ಎ.ಇ.ಯಲ್ಲಿ ನಡೆದಿರುವ ಹಲವಾರು ರಂಗ ಪ್ರಯೋಗಗಳಲ್ಲಿ ತನ್ನ ಅದ್ಭುತ ಅಭಿನಯದ ಮೂಲಕ ಜನಮಾನಸದಲ್ಲಿ ಗೌರವದ ಸ್ಥಾನ ಪಡೆದಿರುವ ಡೋನಿ ಕೊರೆಯಾ ಕೊಂಕಣಿ ಭಾಷೆಯಲ್ಲಿ 30 ಕಿಂತಲೂ ಹೆಚ್ಚು ನಾಟಕಗಳಲ್ಲಿ ಹಾಗೂ ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಟಿಸಿರುವ ಇವರಿಗೆ ತುಳುಭಾಷೆಯಲ್ಲಿ ಬಿಡುಗಡೆಯಾಗಿರುವ “ನಿರೆಲ್” ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಜನಮನ ಸೆಳೆದಿದ್ದಾರೆ.

ನಾಟಕಗಳಲ್ಲಿ ಪ್ರಮುಖವಾದುದು: ಧ್ವನಿ ಪ್ರತಿಷ್ಠಾನ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ನಡೆದಿರುವ ರಂಗ ಪ್ರಯೋಗಗಳಲ್ಲಿ ಗಿರೀಶ್ ಕಾರ್ನಾಡ್ ರವರ್ “ನಾಗಮಂಡಲ” ಹಯವದನ, ಆಶಾಡದ ಒಂದು ದಿನ, ಬಲಿ ಮತ್ತು ಗಮ್ಮತ್ ಕಲಾವಿದರ ಆಶ್ರಯದಲ್ಲಿ ತುಳು ನಾಟಕ ಗಂಗುನ ಗಮ್ಮತ್, ಬೆನ್ಪಿನೊರಿ ತಿನ್ಪಿನೊರಿ, ಮಾಸ್ಟ್ರ್ ಮನಿಪುಜೆರ್, ಆಪಿನಿ ಪೂರ ಎಡ್ಡೆಗೆ, ಪೊರ್ಲುದಾಯೆ, ಪೊರ್ಲು ತೂವಡೆ, ತೆಲಿಕೆದ ಬರ್ಸೊಲು, ಬಯ್ಯ ಮಲ್ಲಿಗೆ ಹಾಗೂ ಸ್ವಂತ ರಚನೆಯಲ್ಲಿ ಪ್ರದರ್ಶಿರುವ “ಚಿಂಟುನ್ ಪೊಳೆ” ದುಬಾಯಿಯಲ್ಲಿ ನಡೆದ ಮಾಡ್ರನ್ ಥಿಯೇಟರ್ ತರಭೇತಿ ಶಿಬಿರದಲ್ಲಿ ಭಾಗವಹಿಸಿ ಅಪಾರ ಅನುಭವ ಪಡೆದು ಮನರಂಜನೆಯ ಮೂಲಕ್ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಾ ಬಂದಿದ್ದಾರೆ. ಎರಡು ಯಕ್ಷಗಾನ ಪ್ರಸಂಗಳಲ್ಲಿ ವೇಷಧಾರಿಯಾಗಿ ತಮ್ಮ ಅಭಿನಯ ಚಾತುರ್ಯವನ್ನು ಮೆರೆದಿದ್ದಾರೆ.

ಕಾರ್ಯಕ್ರಮ ನಿರೂಪಕನಾಗಿ….

ಕೊಂಕಣಿ, ತುಳು ಕನ್ನಡ ಭಾಷೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ತನ್ನ ಪ್ರತಿಭೆಯನ್ನು ಸಾಕ್ಷಿಕರಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು “ಗಲ್ಫ್ ವಾಯಿಸ್ ಅಫ್ ಮಂಗ್ಳುರ್” ಸೆಮಿಫೈನಲ್ ಸೌದಿ ಅರೆಬೀಯಾ 2012 ರಲ್ಲಿ, 2014ರಲ್ಲಿ ಕುವೈಟ್, 2016ರಲ್ಲಿ ಒಮಾನ್, 2016 ರಲ್ಲಿ ಸೌದಿ ಅರೇಬೀಯ, ಕೆವಿನ್ ಮಿಸ್ಕ್ವಿಟ್ ನಿಟ್ಟ್ ಒಮಾನ್, ವಿಕ್ಟರ್ ಕೊನೆಸೊ ನೈಟ್, ಡೆಸೆರ್ಟ್ ಮ್ಯೂಸಿಕ್ ಅವಾಡ್ರ್ಸ್, ಲಿಟ್ಲ್ ಫ್ಲವರ್ ಮುಕಾಮಾರ್, ಫಾಮದ್ ಡ್ಯಾನ್ಸ್ ಚಾಲೆಂಜ್ 2007, ರಂಗ್ ತರಂಗ್ 2009, ಫಾಮದ್ ಅಂತ್ಯಾಕ್ಷರಿ 2010, ವಾರ್ಷಿಕ ಮಿಲನ್ ಉದ್ಯಾವರೈಟ್ಸ್, ಕಟ್ಪಾಡಿ ಕೊಂಕಣ್ಸ್, ಎಮಿರೇಟ್ಸ್ ಪಾಂಗಳೈಟ್ಸ್, ಕೆಮ್ಮಣ್ಣು ಫ್ಲವರ್ಸ್, ಫೆರಾರೇಟ್ಸ್ ದುಬಾಯಿ, ವಾಮಂಜೂರೈಟ್ಸ್ ಡೈವ್, ಲೂರ್ಡ್ ಕಣಜಾರ್, ಬೆಳ್ಮಣ್ ಅಸೋಸಿಯೇಶನ್ಸ್ ಇತ್ಯಾದಿ ಸಂಘಟನೆಗಳು.
ಯು.ಕೆ. ಯಲ್ಲಿ ಎರಡು ಬಾರಿ ನಡೆದ “ಕೊಂಕಣ್ ದಬಾಝೊ” ಕಾರ್ಯಕ್ರಮ ನಿರೂಪಣೆ.
ಎರಡು ಬಾರಿ “ಬೆಸ್ಟ್ ಎಂ. ಸಿ. ಪ್ರಶಸ್ತಿ” : ಎಸ್.ಎಂ.ಕೆ.ಸಿ. ದುಬಾಯಿ ಮ್ನತ್ತು ಸೈಂಟ್ ಅಲೋಸಿಯಸ್ ಕಾಲೇಜ್ ಮಂಗಳೂರು.
ಸಾಂಸ್ಕೃತಿಕ ಹಾಗೂ ಸೇವೆಗಾಗಿ ಸನ್ಮಾನ ಗೌರವ : ಯಕ್ಷ ಮಿತ್ರರು ದುಬಾಯಿ, ಗಮ್ಮತ್ ಕಲಾವಿದೆರ್ ದುಬಾಯಿ, ಲಿಟ್ಲ್ ಪ್ಲವರ್ಸ ಮುಕಮರ್, ಫಾಮದ್ ಪೆರ್ನಾಲ್, ಮೊಗಚಿಂ ಲಾರನ್ ದುಬಾಯಿ,

ಶ್ರೀಮತಿ ಆಶಾ ರೋಶನಿ ಕೊರೆಯ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶ್ರೀ ಟೈಟಸ್ ಸಿಕ್ವೇರಾ ಮತ್ತು ಶ್ರೀಮತಿ ಹಿಲ್ಡಾ ಸಿಕ್ವೇರಾ ದಂಪತಿಗಳ ಮಗಳಾಗಿ ಜನಿಸಿ ಉತ್ತಮ ಪರಿಸರದಲ್ಲಿ ಬೆಳೆದು ಬಾಲ್ಯದಿಂದಲೇ ಗಾಯನ, ನಟನೆಯ ಪ್ರತಿಭೆಯನ್ನು ಪಡೆದಿರುವ ಆಶಾ ಕೊರೆಯಾ ಗಲ್ಫ್ ನಾಡಿಗೆ ಬಂದನಂತರ ತಮ್ಮ ಪ್ರತಿಭೆಯ ಅನಾವರಣ ವಿವಿಧ ಪ್ರತಿಷ್ಠಿತ ಸಮಾರಂಭಗಳ ವೇದಿಕೆಯಲ್ಲಿ ಅನಾವರಣ ಗೊಂಡಿದೆ. ಅತ್ಯುತ್ತಮ ಗಾಯಕಿಯಾಗಿರುವ ತಮ್ಮ ಸುಮಧುರ ಕಂಠಸಿರಿಯಲ್ಲಿ ಕೊಂಕಣಿ, ತುಳು, ಕನ್ನಡ ಗೀತೆಗಳು ಜನಮನ ಸೆಳೆದಿದೆ. ರಂಗಭೂಮಿಯ ಕಲಾವಿದೆಯಾಗಿ, ಪ್ರಸಿದ್ದ ರಂಗನಾಟಕಗಳಲ್ಲಿ, ಸಾಮಾಜಿಕ ನಾಟಕಗಳಲ್ಲಿ, ಯಕ್ಷಗಾನದಲ್ಲಿ ಪ್ರಮುಖ ಪಾತ್ರದ ಮೂಲಕ ಮನೋಜ್ಞ ಅಭಿನಯದ ಮೂಲಕ ಜನಮನ ಸೆಳೆದಿದ್ದಾರೆ.

ಪ್ರಸ್ತುತ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪತಿ ಡೊನಾಲ್ಡ್ ಕೊರೆಯ ಮತ್ತು ಮಕ್ಕಳು ಡಿಯೋನಾ ರೆಬೆಕ್ಕಾ, ಡೆಲಿಶಾ ರುಕ್ ರೊಂದಿಗೆ ನೆಲೆಸಿದ್ದು ತಮ್ಮ ಬಹುಮುಖ ಪ್ರತಿಭೆಯಿಂದ ತನ್ನ ಪತಿಯ ಜೊತೆ ಜೊತೆಯಲ್ಲಿ ಗಲ್ಫ್ ದೇಶದಲ್ಲಿ ತನ್ನ ತಾಯಿನಾಡಿನ ಹೆಸರನ್ನು ಎತ್ತಿ ಹಿಡಿದಿದ್ದಾರೆ.

ಸುಮಧುರ ಕಂಠಸಿರಿಯ ಗಾಯಕಿಯಾಗಿ….

ಗಲ್ಫ್ ರಾಷ್ಟ್ರದ ವಿವಿಧ ಭಾಗಗಳಲ್ಲಿ ವಿವಿದ ಸಂಘಟನೆಗಳ ವೈವಿಧ್ಯಮಯ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಂಗೀತ ಸಂಜೆ, ಸಂಗೀತ ಸ್ಪರ್ಧೆ, ವಾರ್ಷಿಕ ಸ್ನೇಹಮಿಲನ, ಸಾಹಿತ್ಯ ಸಮ್ಮೇಲನದ ವೇದಿಕೆಗಳಲ್ಲಿ ಆಶಾ ಕೊರೆಯಾ ರವರ ಬಹುಮುಖ ಪ್ರತಿಭೆಗಳು ಅನಾವರಣಗೊಂಡಿದೆ.

ಆಶಾ ಕೊರೆಯಾ ತಮ್ಮ ಬಾಳಸಂಗಾತಿ ಡೋನಿ ಕೊರೆಯಾರೊಂದಿಗೆ ಸೇರಿ ನಿರ್ಮಿಸಿದ ಕೊಂಕಣಿ ಭಾಷೆಯ ಮ್ಯೂಸಿಕ್ ಅಲ್ಬಂ “ಹಿರೋ ಒನ್ಲಿ ಯೂವರ್ಸ್” ಸೂಪರ್ ಹಿಟ್ ಆಗಿ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಗಲ್ಫ್ ರಾಷ್ಟ್ರದಲ್ಲಿ ನೀಡಿರುವ ಗಾಯನ ಕಾರ್ಯಕ್ರಮಗಳು ವಿಕ್ಟರ್ ಕೊನೆಸ್ಕೊ ನೈಟ್, ರಂಗ್ ತರಂಗ್, ಡಾ. ಪ್ರಶಾಂತ್ ರಾಜ್ ಲೈವ್ ಕಾನ್ಸರ್ಟ್, ಮೊಗಾಚಿ ಲಾರೆನ್ ಕಾನ್ಸರ್ಟ್, ಮಂಗ್ಳುರ್ ಕೊಂಕಣ್ಸ್ – ಕೊಂಕಣ್ ಮಿಲನ್, ಲ್ಯಾನ್ಸಿ ನೊರೊನಾ ಮ್ಯೂಸಿಕಲ್ ನೈಟ್, ಕರ್ನಾಟಕ ಸಂಘ ಶಾರ್ಜಾ, ತುಳುಕೂಟ ದುಬಾಯಿ-ತುಳು ಪರ್ಬ, ಬೆಳ್ಳೆವಿಶನ್, ಸಂಭ್ರಮ್, ದಾಯಿಜಿ ದುಬಾಯಿ – ದಾಯಿಜಿ ದರ್ಬಾರ್, ಫೆರಾರಿಟಸ್, ನಾಮಂಜೂರಿಯನ್ಸ್, ಕಟ್ಪಾಡಿ ಕೊಂಕಣ್ಸ್, ಉದ್ಯಾವರೈಟ್ಸ್, ಎಮಿರೆಟ್ಸ್ ಪಾಂಗಾಲೈಟ್ಸ್, ಪಂಬೂರ್ ವೆಲ್ಫೆರ್ ಅಸೋಸಿಯೇಶನ್ಸ್, ವಮಾಂಜೂರ್ ದೈವ್ಸ್, ಲೂಡ್ರ್ಸ್ ಕಣಜಾರ್, ಸೈಂಟ್ ಜೋಸೆಪ್ಸ್ ಬೆಟ್ಕಟಿ ಬೆಳ್ಮಣ್, ಪುತ್ತೂರು ಅಸೊಸಿಯೇಶನ್ಸ್, ಕೆಮ್ಮಣ್ಣು ಫ್ಲವರ್ಸ್ ದುಬಾಯಿ.
ರಂಗಭೂಮಿ ನಟಿಯಾಗಿ…

ಆಶಾ ಕೊರೆಯಾ ಕೊಂಕಣಿ ಭಾಷೆಯಲ್ಲಿ 14 ಕಿಂತಲೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ಕೊಂಕಣಿಯಲ್ಲಿ – ಮೊತ್ಲಬ್ ಸೊಂಸಾರ್, ಅಮಿ ನಥ್ಲ್ಯ ವೆಲ್ಲರ್ ಹಾಗೂ 3 ಕನ್ನಡ ಮತ್ತು ಗಮ್ಮತ್ ಕಲಾವಿದರ ಆಶ್ರಯದಲ್ಲಿ 8 ನಾಟಕ ತುಳು ಭಾಷೆಗಳಲ್ಲಿ ನಟಿಸಿದ್ದಾರೆ. ಧ್ವನಿ ಪ್ರತಿಷ್ಠಾನ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ನಡೆದಿರುವ ರಂಗ ಪ್ರಯೋಗಗಳಲ್ಲಿ ಗಿರೀಶ್ ಕಾರ್ನಾಡ್ ರವರ “ಹಯವದನ”, “ಆಶಾಡದ ಒಂದು ದಿನ”, “ಬಲಿ”. ಎರಡು ಯಕ್ಷಗಾನ ಪ್ರಸಂಗಳಲ್ಲಿ ವೇಷಧಾರಿಯಾಗಿ ತಮ್ಮ ಅಭಿನಯ ಚಾತುರ್ಯವನ್ನು ಮೆರೆದಿದ್ದಾರೆ.

ಕಾರ್ಯಕ್ರಮ ನಿರೂಪಕಿಯಾಗಿ….
ಆಶಾ ಕೊರೆಯಾ ಹತ್ತು ಮೆಗಾ ಶೋ ಗಳಲ್ಲಿ ಕೊಂಕಣಿ, ತುಳು ಕನ್ನಡ ಭಾಷೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ತನ್ನ ಪ್ರತಿಭೆಯನ್ನು ಸಾಕ್ಷಿಕರಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ಡೆಸೆರ್ಟ್ ಮ್ಯೂಸಿಕ್ ಅವಾಡ್ರ್ಸ್, ಲಿಟ್ಲ್ ಫ್ಲವರ್ ಮುಕಾಮಾರ್, ಫಾಮದ್ ಡ್ಯಾನ್ಸ್ ಚಾಲೆಂಜ್ 2007, ರಂಗ್ ತರಂಗ್ 2009, ಗಮ್ಮತ್ ಕಲಾವಿದೆರ್ ಇತ್ಯಾದಿ ಸಂಘಟನೆಗಳು.
ಸನ್ಮಾನ ಗೌರವ : “ವುಮನ್ ಆಫ್ ವೆರಸತಲಿಟಿ” – ಮೊಗಚಿಂ ಲಾರನ್ ದುಬಾಯಿ, ಯಕ್ಷ ಮಿತ್ರರು ದುಬಾಯಿ, ಗಮ್ಮತ್ ಕಲವಿದೆರ್ ದುಬಾಯಿ, ಲಿಟ್ಲ್ ಪ್ಲವರ್ಸ ಮುಕಮರ್, ಫಾಮದ್ ಪೆರ್ನಾಲ್, ಮೊಗಚಿಂ ಲಾರನ್ ದುಬಾಯಿ.
ದುಬಾಯಿಯ ಬಿಡುವಿಲ್ಲದ ಕೆಲಸ ಕಾರ್ಯ ಒತ್ತಡದ ಜೊತೆ ಜೊತೆಯಾಗಿ ತಮ್ಮಲ್ಲಿರುವ ಕಲಾಪ್ರತಿಭೆಯನ್ನು ಪೋಷಿಸಿಕೊಂಡು ನಾಡು ನುಡಿ ಸಂಸ್ಕೃತಿಯನ್ನು ಹೊರನಾಡಿನಲ್ಲಿ ಅನಾವರಣ ಮಾಡುವಲ್ಲಿ ಆಶಾ ಕೊರೆಯಾ ಮತ್ತು ಡೊನಾಲ್ಡ್ ಕೊರೆಯಾ ದಂಪತಿಗಳು ಸಾರ್ವ ಕಾಲಿಕ ಮಾನ್ಯರು. ಈ ಅಪರೂಪದ ಪ್ರತಿಭಾನ್ವಿತ ಜೋಡಿಯ ಕಲಾಸೇವೆ ನಿತ್ಯ ನಿರಂತರವಾಗಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಹಾರೈಕೆಗಳು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ


Spread the love