ವಿದ್ಯುತ್ ಬಿಲ್ ದೂರು: ತ್ವರಿತ ಸ್ಪಂದನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ  

Spread the love

ವಿದ್ಯುತ್ ಬಿಲ್ ದೂರು: ತ್ವರಿತ ಸ್ಪಂದನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ  

ಮಂಗಳೂರು: ಲಾಕ್‍ಡೌನ್‍ ಅವಧಿಯಲ್ಲಿ ವಿದ್ಯುತ್ ಬಿಲ್ ಅಧಿಕ ಬಂದಿರುವುದಾಗಿ ಸಾರ್ವಜನಿಕರಿಂದವ್ಯಕ್ತವಾಗಿರುವ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿಕಚೇರಿಯಲ್ಲಿ ಈ ಸಂಬಂಧಉನ್ನತ ಮಟ್ಟದ ಸಭೆ ನಡೆಸಿ ಮಾತನಾಡುತ್ತಿದ್ದರು.ಮಾರ್ಚ್- ಎಪ್ರಿಲ್ ತಿಂಗಳ ಬಿಲ್ಲನ್ನುಒಟ್ಟಿಗೆ ನೀಡಿರುವುದರಿಂದ ಬಿಲ್ಲು ಮೊತ್ತಅಧಿಕವಾಗಿರುವುದು ಸಹಜ.ಆದರೆ, ಪ್ರತೀಯುನಿಟ್‍ದರ ಲೆಕ್ಕ ಹಾಕುವಾಗ ಸಮರ್ಪಕವಾಗಿಲ್ಲಎಂದು ಸಾರ್ವಜನಿಕರಿಂದಅತೃಪ್ತಿ ವ್ಯಕ್ತವಾಗಿವೆ. ಈ ನಿಟ್ಟಿನಲ್ಲಿ ಮೆಸ್ಕಾಂ ಸಾರ್ವಜನಿಕಕುಂದುಕೊರತೆ ಸಭೆಗಳನ್ನು ನಡೆಸಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು. ಅಲ್ಲದೇ, ಸಾಮಾಜಿಕಜಾಲತಾಣ, ಸಹಾಯವಾಣಿಗಳ ಮೂಲಕವೂ ದೂರುಗಳಿಗೆ ತ್ವರಿತ ಪರಿಹಾರ ನೀಡಬೇಕುಎಂದು ಸಚಿವರು ತಿಳಿಸಿದರು.ಅಲ್ಲದೇ, ಬಿಲ್ ಮೊತ್ತವನ್ನು ಕಂತುಗಳಲ್ಲಿ ಕಟ್ಟಲುಗ್ರಾಹಕರಿಗೆ ಅವಕಾಶ ನೀಡಬೇಕುಎಂದು ಸಚಿವಕೊಟ ಸೂಚಿಸಿದರು.

ಮೆಸ್ಕಾಂ ವ್ಯವಸ್ಥಾಪಕನಿರ್ದೇಶಕಿ ಸ್ನೇಹಲ್‍ಆರ್. ಮಾತನಾಡಿ, ಗ್ರಾಹಕರಿಗೆ ನಿಗದಿತದರದಲ್ಲಿಯೇ ಬಿಲ್ ನೀಡಲಾಗಿದ್ದು, ಯಾವುದೇ ಲೋಪವಾಗಿಲ್ಲ. ಬಡ್ಡಿಕೂಡಾ ಹಾಕಿಲ್ಲ. ಹೆಚ್ಚುವರಿಯಾಗಿ ಬಿಲ್‍ನಲ್ಲಿ ಮೊತ್ತ ನಮೂದಿಸಿದ್ದರೆ, ಮುಂದಿನ ಬಿಲ್‍ನಲ್ಲಿ ಹೊಂದಾಣಿಕೆ ಮಾಡಿಕೊಡಲಾಗುವುದುಎಂದು ಹೇಳಿದರು.

ಪ್ರತೀ ಮನೆಗೆ ಮೊದಲ 30 ಯುನಿಟ್‍ನಲ್ಲಿ ಪ್ರತೀಯುನಿಟ್‍ಗೆರೂ.3.70ರಂತೆ, ನಂತರದ 31 ರಿಂದ 70 ಯುನಿಟ್–ರೂ.5.20, 101 ರಿಂದ 200 ಯುನಿಟ್‍ರೂ.6.75 ಹಾಗೂ 201ರ ಮೇಲಿನ ಯುನಿಟ್‍ಗಳಿಗೆ ರೂ. 7.80 ಗಳಂತೆ ಬಿಲ್ ಮಾಡಲಾಗುತ್ತಿದೆ. ಬಿಲ್ ನಿಗದಿತ ಶುಲ್ಕದಲ್ಲಿ 1 ಕೆವಿಗೆ ರೂ.60, 2ನೇ ಕೆವಿಗೆ ರೂ.70 ರಂತೆದರ ಹಾಕಲಾಗುತ್ತಿದೆಎಂದುಅವರು ಹೇಳಿದರು.

ಗ್ರಾಹಕರು ಬಿಲ್ ಮೊತ್ತವನ್ನು ಕಂತುಗಳಾಗಿ ಪಾವತಿಸಬಹುದು.ಯಾವುದೇ ದೂರುಗಳಿಗೆ ಆಯಾ ಮೆಸ್ಕಾಂ ಉಪವಿಭಾಗದಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಬಹುದು.ಅಲ್ಲದೇ, ಸಹಾಯವಾಣಿ ಸಂಖ್ಯೆ 1912 ಗೆ ಕಾಲ್ ಮಾಡಿಅಥವಾ ವಾಟ್ಸಾಪ್ ಸಂಖ್ಯೆ 9483041912 ಗೆ ತಮ್ಮದೂರು ನೀಡಬಹುದುಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.

ಮಳೆಗಾಲ ಸಿದ್ಧತೆ:ಇದೇ ಸಂದರ್ಭದಲ್ಲಿ ಸಚಿವಕೋಟ ಶ್ರೀನಿವಾಸ ಪೂಜಾರಿಅವರು ಮಳೆಗಾಲದಲ್ಲಿ ಮೆಸ್ಕಾಂ ಸಿದ್ಧತೆಗಳನ್ನು ಪರಿಶೀಲಿಸಿದರು.

ಮೆಸ್ಕಾಂ ಮುಖ್ಯಅಭಿಯಂತರ ಮಂಜಪ್ಪಅವರು ಮಾತನಾಡಿ, ಮೆಸ್ಕಾಂ ನಲ್ಲಿ24 ಗಂಟೆಗಳ ಕಾರ್ಯನಿರ್ವಹಿಸುವ ಕಂಟ್ರೋಲ್‍ರೂಂ (ಸಂಖ್ಯೆ 1912) ನಿರಂತರವಾಗಿಗ್ರಾಹಕರ ಅಹವಾಲುಗಳಿಗೆ ಸ್ಪಂದಿಸಲಿದೆ.ಮಳೆಗಾಲದ ವಿದ್ಯುತ್‍ಜಾಲದ ನಿರ್ವಹಣೆಗೆ ಹಾಗೂ ತುರ್ತು ಸಂದರ್ಭಗಳಿಗೆ ಬೇಕಾಗುವ ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳು, ಇನ್ಸುಲೇಟರ್ ಮತ್ತಿತರ ಸಾಮಾಗ್ರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿದಾಸ್ತಾನುಇಡಲಾಗಿದೆ.ಪ್ರತೀ ಉಪವಿಭಾಗದಲ್ಲಿ 10 ಕೆಲಸಗಾರರತಂಡವನ್ನುತುರ್ತು ಕೆಲಸಗಳಿಗಾಗಿ ನಿಯೋಜಿಸಲಾಗಿದ್ದು, 1 ವಾಹನವನ್ನೂ ನಿಯೋಜಿಸಲಾಗಿದೆ.ಮಳೆಗಾಲದ ತುರ್ತು ಕಾಮಗಾರಿಗಳ ನಿರ್ವಹಣೆಗೆಅವಶ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಗ್ಯಾಂಗ್‍ಮೆನ್‍ಗಳನ್ನು ನಿಯೋಜಿಸಲಾಗಿದೆಎಂದು ವಿವರಿಸಿದರು.

ಸಭೆಯಲ್ಲಿಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ, ಮೇಯರ್ ದಿವಾಕರ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರಜಿಲ್ಲಾಧಿಕಾರಿರೂಪಾ ಮತ್ತಿತರರುಇದ್ದರು.


Spread the love