ವಿವಿಧ ಬೇಡಿಕೆಗಳ ಈಡೇರಿಕೆಗೆ ಆನ್ ಲೈನ್ ಚಳವಳಿ

Spread the love

ವಿವಿಧ ಬೇಡಿಕೆಗಳ ಈಡೇರಿಕೆಗೆ ಆನ್ ಲೈನ್ ಚಳವಳಿ

ಮೈಸೂರು: 200 ದಿನಗಳ ಉದ್ಯೋಗ ಖಾತ್ರಿ ಯೋಜನೆ ನಗರ ಭಾಗಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ CPI, CPIM, CPI(ML), SUCI(C) ಸ್ವರಾಜ್ ಇಂಡಿಯಾ ಪಕ್ಷಗಳು ಜಿಲ್ಲೆಯಲ್ಲಿ ಆನ್ ಲೈನ್ ಚಳವಳಿ ನಡೆಸಲಾಯಿತು.

ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಕೆಲವು ಹಳ್ಳಿಗಳಿಂದ ಹಾಗೂ ಮೈಸೂರು ನಗರದ ವಿವಿಧ ಬಡಾವಣೆಯ ಸುಮಾರು 200ಕ್ಕೂ ಹೆಚ್ಚು ಜನರು ಪಾಲ್ಗೊಂಡು ಪ್ರತಿಭಟಿಸಿದರು. ಈ ವೇಳೆ ಉಚಿತ ಸಾರ್ವತ್ರಿಕ ಲಸಿಕೆ ಔಷಧಿ ಚಿಕಿತ್ಸೆ, 200 ದಿನಗಳ ಉದ್ಯೋಗ ಖಾತ್ರಿ ಯೋಜನೆ ಖಾತ್ರಿ ಖಚಿತಪಡಿಸಲು ಹಾಗೂ ನಗರ ಭಾಗಗಳಿಗೂ ವಿಸ್ತರಿಸಲು, ನೇರ ನಗದು ಉಚಿತ ಪಡಿತರಕ್ಕಾಗಿ ರೈತ ಕಾರ್ಮಿಕ ವಿರೋಧಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ತಾವಿರುವ ಸ್ಥಳದಲ್ಲಿಯೇ ಫೋಸ್ಟರ್ ಬರೆದು ಫೋಟೋವನ್ನು ತೆಗೆದು ಈ ಚಳುವಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ ರವಿ, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಂ ಉಮಾದೇವಿ, ಹರೀಶ್, ಚಂದ್ರಶೇಖರ್ ಮೇಟಿ, ಸಂಧ್ಯಾ, ಸೀಮಾ, ಸುನಿಲ್ ಟಿ ಆರ್. ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ ಆಸೀಯಾ ಬೇಗಮ್, ಸುಮಾ, ಮುದ್ದುಕೃಷ್ಣ, ಆಕಾಶ್, ಸುಭಾಷ್, ಅಭಿಲಾಷ್ ಇನ್ನಿತರರು ಭಾಗವಹಿಸಿದ್ದರು.


Spread the love