ವಿಶ್ವಕರ್ಮ ಸಮುದಾಯದಿಂದ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ

Spread the love

ವಿಶ್ವಕರ್ಮ ಸಮುದಾಯದಿಂದ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ

ಮೂಡಿಗೆರೆ: ಭಾನುವಾರ ಮೂಡಿಗೆರೆಯ ಕಾಂಗ್ರೆಸ್ ಭವನದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷ ಜಗದೀಶ ಆಚಾರ್ಯ ಅವರು ತಮ್ಮ ಮೂಡಿಗೆರೆಯ ವಿಶ್ವಕರ್ಮ ಸಮುದಾಯವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

“ನಾಳೆಗಳ ನೆಮ್ಮದಿಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವುದು ಜನಪ್ರತಿನಿಧಿಯ ಕರ್ತವ್ಯ. ತಾನು ಗೆದ್ದ ಕ್ಷೇತ್ರಕ್ಕೆ ಮತ್ತೆ ಬಾರದಿದ್ದರೆ ಆತ ಜನಪ್ರತಿನಿಧಿ ಎಂದೆನಿಸುವುದಿಲ್ಲ. ಸಂಸದನಾಗಿ ಅಲ್ಪ ಅವಧಿಯಲ್ಲಿ ಜನಪರ ಕಾರ್ಯಗಳನ್ನು ಮಾಡಿದ್ದ ಪರಿಣಾಮ ಇಂದು ನೀವೆಲ್ಲ ಪ್ರೀತಿ ತೋರಿಸಿದ್ದೀರಿ. ಅಭಿವೃದ್ಧಿಯ ಬಗ್ಗೆ, ಮಾಡಿದ ಕೆಲಸಗಳ ಬಗ್ಗೆ ಮಾತನಾಡುವುದಾದರೆ ನನ್ನಲ್ಲಿ ಸಮಯವಿದೆ, ಕೇವಲ ವೈಯಕ್ತಿಕ ಠೀಕೆಗಳಿಗೆ, ನವಿಲುಗರಿ ಮರಿ ಹಾಕುವ ಕತೆ ಹೇಳಲು ಸಮಯವಿಲ್ಲ,” ಎಂದರು.

ಒಬ್ಬ ಸಮರ್ಥ ನಾಯಕ ಯಾವುದೇ ಪಕ್ಷದಲ್ಲಿ ಇರಲಿ ಅವರಿಗೆ ಪ್ರಜ್ಞಾವಂತ ಸಮುದಾಯ ಬೆಂಬಲ ನೀಡುತ್ತದೆ ಎಂಬುದಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಉತ್ತಮ ನಿದರ್ಶನ.

ಮೂಡಿಗೆರೆಯ ವಿಶ್ವಕರ್ಮ ಸಮುದಾಯದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.


Spread the love