ವಿಶ್ವ ಕೊಂಕಣಿ ಕೇಂದ್ರ: ಕೊಂಕಣಿ ಕಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸವಲತ್ತು 

Spread the love

ವಿಶ್ವ ಕೊಂಕಣಿ ಕೇಂದ್ರ: ಕೊಂಕಣಿ ಕಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸವಲತ್ತು 

ಈ ವರ್ಷದಿಂದ ವಿಶ್ವ ಕೊಂಕಣಿ ಕೇಂದ್ರ ನೀಡುತ್ತಿರುವ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿ ವೇತನ ಪಡೆಯಲು ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ತೃತೀಯ ಭಾಷೆ ಕೊಂಕಣಿ ಕಲಿತ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವ ಸೌಲಭ್ಯ ಪ್ರಾರಂಭಿಸಲಾಗಿದೆ. ಈ ವಿದ್ಯಾರ್ಥಿ ವೇತನ ಪಡೆಯಲು ಇಚ್ಚಿಸುವವರು ವಿಶ್ವ ಕೊಂಕಣಿ ಕೇಂದ್ರದ ವೆಬ್ ಸೈಟಿನಲ್ಲಿ (www.vishwakonkani.org) Google Form ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿ ದ್ವಿತೀಯ ಪಿಯುಸಿ ಅಂಕ ಪಟ್ಟಿ, ಶಾಲೆಯಲ್ಲಿ ಕೊಂಕಣಿ ಕಲಿತ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರ ಪ್ರಮಾಣ ಪತ್ರ, ಪ್ರವೇಶ ಪಡೆದ ಕಾಲೇಜಿನ ದಾಖಲು ಪತ್ರ, ಕಾಲೇಜು ಶುಲ್ಕ, ಸಿಇಟಿ ಹಾಗೂ ನೀಟ್ ಅಂಕಪಟ್ಟಿ ಹಾಗೂ ಗೂಗಲ್ ನೊಂದಣಿ ವಿವರಗಳನ್ನು ಅಂಚೆ ಮೂಲಕ ಕಾರ್ಯದರ್ಶಿ, ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು -575016 ವಿಳಾಸಕ್ಕೆ ಕಳುಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.


Spread the love