ವೀರ ಸೈನಿಕರಿಗೊಂದು ಸಲಾಮು

Spread the love

ವೀರ ಸೈನಿಕರಿಗೊಂದು ಸಲಾಮು

ಭಾರತ ಮಾತೆಯೇ ಕೇಳು
ಈ ದೇಶದಲ್ಲಿ ನಮ್ಮಯ ಗೋಳು
ಆಯಿತು ಮೊನ್ನೆ ಸೈನಿಕರ ಜೀವದ ಹೋಳು
ಬಿತ್ತು ಆತ್ಮಾಹುತಿ ಬಾಂಬು ಕಾಶ್ಮಿರದೊಳು……

ಫೆಬ್ರವರಿ ಹದಿನಾಲ್ಕರ ಕರಾಳ ದಿನ
ಚಿಮ್ಮಿತು ಚರಿತ್ರೆಗೆ ರಕ್ತದ ಬಣ್ಣ
ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸಲು
ಹೊರಟಿತು ಸೈನಿಕರ ತುಕಡಿಗಳ ಸಾಲು

ಹುಚ್ಚು ಸ್ವರ್ಗದ ಅಮಲಿನಲಿ ಯುವಕ
ಹಚ್ಚಿದ ಕಿಚ್ಚನು ದ್ವೇಷದ ನರಕ
ಆತ್ಮಾಹುತಿಯಾಗಲು ಬಿಟ್ಟ ಆರ್ಡಿಎಕ್ಸ್ ತುಂಬಿದ ವಾಹನ
ಅಪ್ಪಳಿಸಿ ಕೊಂದ 44 ಸೈನಿಕರನ್ನ

ರಕ್ಷಿಸಿದರು ಸೈನಿಕರು ನಮ್ಮ ನಿಮ್ಮೆಲ್ಲರ
ಆದರೆ ತಮ್ಮನ್ನೇ ರಕ್ಷಿಸಲು ತಪ್ಪಿತು ಅವಕಾಶ
‘ಅಮ್ಮ’ ನಾನು ಸುರಕ್ಷಿತ ಮುಟ್ಟಿದೆ ಎನ್ನುವ ಮುನ್ನ
ಆತ್ಮಾಹುತಿ ಬಾಂಬರ್ ಮಾಡಿದ ಅವರನ್ನೆಲ್ಲಾ ಮೌನ

ವೀರ ಸೈನಿಕರೇ ನಿಮಗಿದೋ ನಮನ
ಹುಟ್ಟಿ ಬನ್ನಿ ಈ ಲೋಕಕ್ಕೆ ಪುನ:
ಬೇಡುತ್ತೇವೆ ನಿಮ್ಮ ಆತ್ಮಕ್ಕೆ ಶಾಂತಿಯ
ದೇವರು ಕರುಣಿಸಲಿ ಶಕ್ತಿ ಕುಟುಂಬಕ್ಕೆ ನಿಮ್ಮಯ

ಜೈ ಜವಾನ್, ಜೈ ಭಾರತ ಮಾತಾ

ವಾಯ್ಲೆಟ್ ಜೆ. ಪಿರೇರಾ


Spread the love