ವ್ಯಾಟಿಕನ್, ಮೆಕ್ಕಾದ ರೀತಿಯಲ್ಲಿ ರಾಮಮಂದಿರ ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ – ಬಾಬಾ ರಾಮ್ ದೇವ್

ವ್ಯಾಟಿಕನ್, ಮೆಕ್ಕಾದ ರೀತಿಯಲ್ಲಿ ರಾಮಮಂದಿರ ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ – ಬಾಬಾ ರಾಮ್ ದೇವ್

ಉಡುಪಿ: ವ್ಯಾಟಿಕನ್, ಮೆಕ್ಕಾದ ಥರ ರಾಮಮಂದಿರ ರೂಪುಗೊಳ್ಳಬೇಕು ಇದರೊಂದಿಗೆ ರಾಮಮಂದಿರ ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಅನ್ನೋದು ನನ್ನ ಬಯಕೆ ಎಂದು ಯೋಗ ಗುರು ಬಾಬಾರಾಮ್ ದೇವ್ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಉಡುಪಿಯಲ್ಲಿ ಆಯೋಜಿಸಿರುವ ಐದು ದಿನಗಳ ಯೋಗ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದು ಮಾಧ್ಯಮಗಳೊಂದಿಗೆ ಮಾತನಾಡಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹಾ ಹಿರಿಯರ ಕನಸಾಗಿತ್ತು. ದೇಶದ ಅನೇಕ ಮಹಾಪುರುಷರ ಆಂದೋಲನದ ಫಲವಾಗಿದ್ದು ಈ ಎಲ್ಲಾ ಮಹಾನುಭಾವರ ಒಳಗೊಳ್ಳುವಿಕೆಯಿಂದ ಟ್ರಸ್ಟ್ ನಿರ್ಮಾಣವಾಗಲಿ. ಅಯೋಧ್ಯೆ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆ ಪ್ರತೀಕವಾಗಲಿ ಎಂದು ರಾಮ ಜನ್ಮಭೂಮಿ ನ್ಯಾಸ್ ಗೆ ರಾಮ್ ದೇವ್ ಸಲಹೆ ನೀಡಿದರು.

ಅಯೋಧ್ಯೆ ಜ್ಞಾನತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ ರಾಮನವಮಿ ದಿನವೇ ರಾಮಮಂದಿರಕ್ಕೆ ಶಿಲಾನ್ಯಾಸವಾಗಲಿ ಎಂದ ಬಾಬಾ ರಾಮ್ ದೇವ್ ರಾಮಮಂದಿರಕ್ಕೆ ಪ್ರಧಾನಿಯವರೇ ಶಿಲಾನ್ಯಾಸ ಮಾಡಲಿ. ಸರ್ಕಾರವೇ ನೇರವಾಗಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಆದರೆ ಪ್ರಧಾನಿ ಶಿಲಾನ್ಯಾಸ ಮಾಡಲು ಅಡ್ಡಿಯಿಲ್ಲ ಆದರೆ ಪ್ರಧಾನಿ ಮೋದಿ ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಈ ಕೆಲಸ ಮಾಡಲಿ ಎಂದರು.

ಮಂದಿರದ 67 ಎಕರೆ ಭೂಮಿ ಹೊರತು ಪಡಿಸಿ ಮಸೀದಿ ನಿರ್ಮಾಣವಾಗಲಿ ಅಲ್ಲದೆ ಅಯೋಧ್ಯೆಯಲ್ಲಿ ಮಸೀದಿಯೂ ದಿವ್ಯವಾಗಿ ನಿರ್ಮಾಣ ಅಗಲಿ. ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ರ ಡಿಎನ್ ಎ ಒಂದೇ ಎಂದ ಬಾಬಾ ರಾಮ್ ದೇವ್ ಮುಸ್ಲೀಮ ರಿಗೆ ಐದು ಎಕರೆ ಭಿಕ್ಷೆ ಬೇಡ ಎಂದಿದ್ದ ಅಸಾವುದ್ದೀನ್ ಓವೈಸಿ ಮಾತಿಗೆ ಪ್ರತಿಕ್ರಿಯಿಸಿ ಓವೈಸಿ ತಲೆ ಕೆಟ್ಟ ಮನೋಸ್ಥಿತಿಯವ, ಆತನ ಮನಸ್ಸಿನಲ್ಲಿ ವಿಷವೇ ತುಂಬಿದೆ. ಹಿಂದೂ ಮುಸ್ಲಿಂ ರಲ್ಲಿ ಸಂಘರ್ಷ ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದು ಆಗಿ ಹೋದ ಸಂಘರ್ಷಗಳ ಬಗ್ಗೆ ಚಿಂತಿಸಿ ಫಲವಿಲ್ಲ, ಸೌಹಾರ್ದ ಮತ್ತು ಸಮಾನತೆ ನಮ್ಮ ಆದ್ಯತೆಯಾಗಲಿ ಒವೈಸಿ ಎರಡನೇ ಜಿನ್ನಾ ಆಗಲು ಪ್ರಯತ್ನಿಸುತ್ತಿದ್ದಾನೆ ಆದರೆ ಈ ಕಾರ್ಯದಲ್ಲಿ ಯಶಸ್ವಿಯಾಗಲ್ಲ ಎಂದರು.

Leave a Reply

  Subscribe  
Notify of