ಶಾಸಕ ಮತ್ತು ಮೂಡ ಆಯುಕ್ತರು ಶ್ರೀನಿವಾಸ ಮಲ್ಯ ನಗರ ಬಡಾವಣೆಗೆ ಭೇಟಿ

Spread the love

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಮತ್ತು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ (MUDA) ಆಯುಕ್ತ ಮುಹಮ್ಮದ್ ನಝೀರ್, ಬಡಾವಣೆ ಕ್ಷೇಮಾಭಿವೃದ್ಧಿ ಸಂಘದವರು ಸಲ್ಲಿಸಿದ ಮನವಿಗೆ ಸ್ಪಂದಿಸಿ, ಶಕ್ತಿನಗರದಲ್ಲಿರುವ ಯು. ಶ್ರೀನಿವಾಸ ಮಲ್ಯ ನಗರ ಬಡಾವಣೆಗೆ ಸೋಮವಾರ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಯನ್ನು ಪರೀಶಿಲಿಸಿದರು.

jr_lobo_mangalorean jr_lobo_mangalorean-001 jr_lobo_mangalorean-002 jr_lobo_mangalorean-003 jr_lobo_mangalorean-004 jr_lobo_mangalorean-005

ಸುಮಾರು 120 ಮನೆಗಳಿರುವ ಈ ಬಡಾವಣೆಯಲ್ಲಿ, ಈಗಾಗಲೆ 60 ವಸತಿ ಗೃಹಗಳಿರುತ್ತವೆ.

ಈ ಸಂದರ್ಭದಲ್ಲಿ, ಸಂಘದ ಅಧ್ಯಕ್ಷರದ ಕ್ರಷ್ಣಪ್ಪ ಹೆಚ್., ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದವರು ನೀಡಿರುವ ಭರವಸೆ ಪ್ರಕಾರ ಕೆಲವು ಸೌಲಭ್ಯವನ್ನು ಒದಗಿಸದೇ ಇರುವುದನ್ನು ಶಾಸಕರ ಗಮನ ಸೇಳದರು.

ನಗರಾಭಿವೃದ್ಧಿ ಪ್ರಾದೀಕಾರದವರು ಮೂಲ ನಕಾಶೆಯಲ್ಲಿ ತೋರಿಸಿದಂತೆ, ಬಡಾವಣೆಗೆ ಬರುವ ರಸ್ತೆಯನ್ನು ಮಾಡದೇ ಇರುವುದರಿಂದ ತೊಂದರೆಯಾಗಿದ್ದು, ರಸ್ತೆ ಮತ್ತು ಸೇತುವೆಯನ್ನು ತುರ್ತಾಗಿ ನಿರ್ಮಿಸಿ, ಮೂಲ ನಕಾಶೆಯಲ್ಲಿ ತೊರಿಸಿರುವ ಬಡಾವಣೆಯ ಪಾರ್ಕ್‍ನ್ನು ಮತ್ತು ಬಡಾವಣೆಯಲ್ಲಿ ಯು. ಶ್ರೀನಿವಾಸ ಮಲ್ಯರವರ 100ನೇ ವರ್ಷದ ಸ್ಮರಣಾರ್ಥ ಪಾರ್ಕ್‍ನಲ್ಲಿ ಅವರ ಪುತ್ಥಳಿಯನ್ನು ನಿರ್ಮಿಸಿ ಪಾರ್ಕನ್ನು ಅಭಿವೃದ್ಧಿಪಡಿಸದ ಬಗ್ಗೆ, ಶಾಸಕರ ಗಮನ ಸೆಳೆದರು.

ಬಡಾವಣೆಯ ಉತ್ತರ ಭಾಗದಲ್ಲಿ ಕೇಂದ್ರ ಸರಕಾರದ ಕಸ್ಟಂ ಇಲಾಖೆಯ ಸುಮಾರು 80 ವಸತಿ ಗ್ರಹಗಳು ನಿರ್ಮಾಣ ಹಂತದಲ್ಲಿದ್ದು, ಅದರ ಒಳಚರಂಡಿಯ ಜೋಡಣೆಯನ್ನು ನಮ್ಮ ಬಡಾವಣೆಯ ಒಳಚರಂಡಿಗೆ ಜೋಡಿಸಲು ಪ್ರಯತ್ನ ಮಾಡುತ್ತಿರುವ ಬಗ್ಗೆ ತಿಳಿಸಿದರು.

ಬಡಾವಣೆಯನ್ನು ಪರೀಶಿಲಿಸಿದ ಶಾಸಕ ಜೆ. ಅರ್. ಲೋಬೊ, ಅಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಿ, ಅಯಕ್ತರಿಗೆ ಸೂಕ್ತ ಕ್ರಮ ಕ್ಯೆಗೂಳ್ಳುವಂತೆ ಹೇಳಿದರು.

ಬಳಿಕ, ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿ, ಈ ಬಡಾವಣೆಯಲ್ಲಿ ಮೂರು ಸಮಸ್ಯೆಗಳಿದ್ದು, ರಸ್ತೆ ಮತ್ತು ಸೇತುವೆಯನ್ನು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ ಅಧಿಕಾರಿಗಳಗೆ ನಿರ್ಮಿಸಲು ಸೂಚಿಸಿರುತ್ತೇನೆ. ಬಡಾವಣೆಗೆ ಬರುವ ರಸ್ತೆಯನ್ನು ನಿರ್ಮಿಸಲು, ಭೂಸ್ವಾಧಿನ ಮಾಡುವ ಅವಶ್ಯಕತೆ ಇದ್ದು, ಅದನ್ನು ಶೀಘ್ರಗತಿಯಲ್ಲಿ ಮಾಡಲಾಗುವುದು, ಎಂದು ಭರವ¸ ನೀಡಿದರು. ಪಾರ್ಕ್‍ನ್ನು ನಿರ್ಮಿಸಲು ಹಣವಿದ್ದು, ಕೆಲವು ಕಾನೂನು ಸಮಸ್ಯೆಯನ್ನು ಬಗೆಹರಿಸಿ, ಶೀಘ್ರದಲ್ಲಿ ಪಾರ್ಕ್‍ನ್ನು ಅಭಿವ್ರದ್ಧಿಗೂಳಿಸಲಾಗುವುದು.

ಈ ಸಂದರ್ಭದಲ್ಲಿ, ಸ್ಥಳಿಯ ಕಾರ್ಪರೇಟರ್ ಆಖಿಲಾ ಅಳ್ವ, ಟಿ. ಕೆ. ಸುಧೀರ್, ರಾಮನಂದ ಪೂಜಾರಿ, ಕ್ರತಿನ್ ಕುಮಾರ್ ಮತ್ತಿತ್ತರು ಉಪಸ್ಥಿತರಿದ್ದರು.


Spread the love