ಶಿರೂರು ದೋಣಿ ದುರಂತ, ಇಬ್ಬರು ಮೀನುಗಾರರು ದುರ್ಮರಣ

Spread the love

ಶಿರೂರು ದೋಣಿ ದುರಂತ, ಇಬ್ಬರು ಮೀನುಗಾರರು ದುರ್ಮರಣ

ಬೈಂದೂರು: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ.

ಮೃತರನ್ನು ಅಬ್ಸುಲ್ ಸತ್ತರ್ (45 ) ಹಡವಿನಕೋಣೆ ಶಿರೂರು ಮಿಸ್ಬಾ ಯೂಸುಫ್ (48) ಕುದ್ವಾಯಿ ರೋಡ್, ಭಟ್ಕಳ ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ 10-00 ಗಂಟೆಗೆ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ ಎಂಬ ದೋಣಿಯಲ್ಲಿ 3 ಜನ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸಿ ವಾಪಾಸ್ಸು ಬರುವಾಗ ಸೋಮವಾರ ಮುಂಜಾನೆ 01.30 ಗಂಟೆಗೆ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ

ಮಗುಚಿ ದೋಣಿಯಲ್ಲಿದ್ದ ನನ್ನು ಅಬ್ಸುಲ್ ಸತ್ತರ್ ಮತ್ತು ಮಿಸ್ಬಾ ಯೂಸುಫ್ ಮೃತಪಟ್ಟಿದ್ದಾರೆ.
ದೋಣಿಯಲ್ಲಿದ್ದ ಮತ್ತೋರ್ವ ಬುಡ್ಡು ಮುಖ್ತಾರ್ (37) ಹಡವಿನಕೋಣೆ ಇವರನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಸು ಯಾಕೂಬ್ ಎಂಬವರು ರಕ್ಷಣೆ ಮಾಡಿದ್ದಾರೆ.

ಕರಾವಳಿ ಕಾವಲು ಪಡೆ ಹಾಗೂ ಆರಕ್ಷಕ ಸಿಬಂಧಿಗಳು ಆಗಮಿಸಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love