ಶಿವಮೊಗ್ಗ ಪೋಲಿಸರಿಂದ ಅಂತರಾಜ್ಯ ದರೋಡೆಕೋರನ ಬಂಧನ

Spread the love

ಶಿವಮೊಗ್ಗ ಪೋಲಿಸರಿಂದ ಅಂತರಾಜ್ಯ ದರೋಡೆಕೋರನ ಬಂಧನ

ಶಿವಮೊಗ್ಗ: ಕರ್ನಾಟಕ ಮಾತ್ರವಲ್ಲದೆ ನಾಲ್ಕೈದು ರಾಜ್ಯಗಳ ಪೋಲಿಸ್ ಇಲಾಖೆಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ದರೋಡೆಕೋರನನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದಾಸನಗುತ್ತಿ ಎಮ್ಮೆದೊಡ್ಡಿ ಗ್ರಾಮದ ನಿವಾಸಿ ಪ್ರಸ್ತುತ ಮಂಡ್ಯ ಗುತ್ತಲು ಎಂಬಲ್ಲಿ ನೆಲಸಿರುವ ಮಹಮ್ಮದ್ ಸಾದಿಕ್ ಯಾನೇ ಕಡೂರು ಸಾದಿಕ್ ಯಾನೆ ಸುಲ್ತಾನ್(34) ಬಂಧಿತ ಕುಖ್ಯಾತ ಕಳ್ಳ ಎಂದು ಗುರುತಿಸಲಾಗಿದೆ. ಈತನ್ನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ಅಭಿನವ್ ಖರೆ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಂಧಿತ ಆರೋಪಿಯಿಂದ 1.245 ಕೆಜಿ ತೂಕದ ಬಂಗಾರದ ಆಭರಣ, 11 ಕೆಜಿ ಬೆಳ್ಳಿ, 1 ಕಾರು, 1 ಬೈಕ್, ಒಂದು ಕ್ಯಾಮರಾ, 60 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಆತನಿಂದ ವಶಕ್ಕೆ ಪಡೆದ ನಗನಾಣ್ಯದ ಒಟ್ಟು ಅಂದಾಜು ಮೊತ್ತ ರೂ 45,33,350 ಎಂದು ಅಂದಾಜಿಸಲಾಗಿದೆ.

ಆರೋಪಿಯ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಅತ್ಯಂತ ಚಾಕಚಕ್ಯತೆಯಿಂದ ಆರೋಪಿಯನ್ನು ವಿಶೇಷ ತಂಡ ಬಂಧಿಸಿದೆ. ಈ ಕಾರ್ಯಾಚರಣೆಯನ್ನು ಮೆಚ್ಚಿ ತಾವು ವೈಯುಕ್ತಿವಾಗಿ 50 ಸಾವಿರ ನಗದು ಬಹುಮಾನವನ್ನು ವಿಶೇಷ ಪೋಲಿಸ್ ತಂಡಕ್ಕೆ ನೀಡುತ್ತಿದ್ದು, ಹಾಗೇಯೇ ಈ ತಂಡದಲ್ಲಿದ್ದ ಮೂವರು ಪೋಲಿಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಕೂಡ ಮಾಡಲಾಗುತ್ತಿದೆ ಎಂದರು.

ಆರೋಪಿಯು ಶಿವಮೊಗ್ಗ ನಗರದ ರಾಜೇಂದ್ರ ನಗರದಲ್ಲಿ ಕಳ್ಳತನ ಕೃತ್ಯಕ್ಕೆ ವಿಫಲ ಯತ್ನ ನಡೆಸಿ ತಲೆಮರೆಸಿಕೊಂಡ ಮಾಹಿತಿಯ ನಂತರ ಆತನ ಬಂಧನಕ್ಕೆ ವಿಶೇಷ ಪೋಲಿಸ್ ತಂಡ ಸಾಕಷ್ಟು ಕಸರತ್ತು ನಡೆಸಿತ್ತು. ಆತನ ಮೊಬೈಲ್ ಕಾಲ್ ರೆಕಾರ್ಡ್ ಮೂಲಕ ಹಿಡಿಯಲು ಹೋದಾಗ ಹಲವು ಪ್ರದೇಶದಿಂದ ತಪ್ಪಿಸಿಕೊಂಡಿದ್ದ ಕೊನೆಗೂ ಮಂಡ್ಯ ಗುತ್ತುಲು ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಮಾಹಿತಿ ಪೊಲಿಸರಿಗೆ ಲಭಿಸಿತ್ತು. ಈ ಬಾರಿ ಆತ ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡು ಹೋಗಬಾರದು ಎಂದು ವ್ಯವಸ್ಥಿತ ಕಾರ್ಯಾಚರಣೆ ನಡೆಸಿ ಕೊನೆಗೂ ಬಾಡಿಗೆ ಮನೆಯಲ್ಲಿ ಆತನನ್ನು ಬಂಧಿಸಲಾಯಿತು ಎಂದರು.

ಆರೋಪಿಯು ಮೋಜು, ಮಸ್ತಿ, ಐಷಾರಾಮಿ ಜೀನವ ನಡೆಸುತ್ತಿದ್ದ ಈ ಕಾರಣಕ್ಕಾಗಿ ಕಾರುಗಳನ್ನು ಕಳವು ಮಾಡಿ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಓಡಾಡುತ್ತಿದ್ದ ಆತನು ವಾಸಿಸುತ್ತಿದ್ದ ಸ್ಥಳದಲ್ಲಿನ ನೆರೆಹೊರೆಯವರಿಗೆ ತಾನೊಬ್ಬ ಉದ್ಯಮಿಯೆಂದು ಪರಿಚಯಿಸಿಕೊಂಡಿದ್ದ ಹಾಗೆಯೇ ನಿರಂತರವಾಗಿ ಮನೆಗಳನ್ನು ಬದಲಾಯಿಸುತ್ತಿದ್ದ. ಒಂದು ಮನೆಯ ಕಳ್ಳತನಕ್ಕೆ ಒಂದು ಮೊಬೈಲ್, ಸಿಮ್ ಬಳಕೆ ಮಾಡಿ ಅದನ್ನು ನಾಶ ಪಡಿಸುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.


Spread the love