ಜೇಸಿಐ ಉದ್ಯಾವರ ಕುತ್ಪಾಡಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Spread the love

ಜೇಸಿಐ ಉದ್ಯಾವರ ಕುತ್ಪಾಡಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಉಡುಪಿ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜೇಸಿಐ ಉದ್ಯಾವರ ಕುತ್ಪಾಡಿ ಇವರ ವತಿಯಿಂದ ವಿಶೇಷ ಕಾರ್ಯಕ್ರಮಗಳು ನಡೆಯಿತು .

ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ರಾಜ್ಯ ಮಹಿಳಾ ನಿಲಯ ನಿಟ್ಟೂರು ಉಡುಪಿ , ಇಲ್ಲಿಗೆ ಭೇಟಿ ನೀಡಿ ಸುಮಾರು ಅರುವತ್ತು 60 ಕ್ಕೂ ಮಿಕ್ಕಿದ ಮಹಿಳೆಯರಿಗೆ , ಮಕ್ಕಳಿಗೆ ಮತ್ತು ಅಲ್ಲಿನ ಮುಖ್ಯಸ್ಥರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿ , ದಾನಿ ಶಶಿಧರ್ ಭಾನುಶ್ರೀ ಇವರ ಪ್ರಾಯೋಜಕತ್ವದಲ್ಲಿ ಸಿಹಿತಿಂಡಿ ಫಲಾಹಾರ ವಿತರಣೆ ಮಾಡಲಾಯಿತು . ರಾಜ್ಯ ಮಹಿಳಾ ನಿಲಯ ಇಲ್ಲಿಯ ಮುಖ್ಯಸ್ಥರು , ಜೇಸಿಐ ಉದ್ಯಾವರ ಕುತ್ಪಾಡಿ ಇವರ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .

ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜೇಸಿಐ ಉದ್ಯಾವರ ಕುತ್ಪಾಡಿಯ ದ್ವಿತೀಯ ಕಾರ್ಯಕ್ರಮ ಕಟಪಾಡಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವ ಮಹಿಳೆಯರಿಗೆ  ಅಭಿನಂದಿಸಲಾಯಿತು . ಜೇಸಿರೇಟ್ ಅಧ್ಯಕ್ಷೆ ರೋಶ್ನಿ ಪಿಂಟೋ ಮತ್ತು ಕಾರ್ಯಕ್ರಮದ ಕಾರ್ಯ ನಿರ್ದೇಶಕಿ ಜೇಸಿ ಜಾಯ್ಲೇಟ್ ಡಿಸೋಜ ರವರು ಕಾರ್ಯಕ್ರಮದ ಅತಿಥಿಗಳಾದ ಜಿಲ್ಲಾ ಪಂಚಾಯತ ಸದಸ್ಯೆ ಗೀತಾಂಜಲಿ ಸುವರ್ಣ ಮತ್ತು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೂಲಿಯೆಟ್  ಡಿಸೋಜಾ ಇವರಿಗೆ ಶಾಲು ಹೊದಿಸಿ ಮಲ್ಲಿಗೆ ಹೂ ಮೂಡಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು .  ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ,  ಜೇಸಿಐ ಉದ್ಯಾವರ ಕುತ್ಪಾಡಿ ಅವರ ಈ ವಿಶಿಷ್ಟ ಸೇವಾ ಕಾರ್ಯವನ್ನು ಗುರುತಿಸಿ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು . ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಇಂದು ಎದ್ದು ನಿಲ್ಲುವಂತಾಗಿದೆ . ಪುರುಷರಿಗೆ ಸಮಾನವಾದ ಕೆಲಸವನ್ನು ಮಹಿಳೆಯರು ಇಂದು ಮಾಡುತ್ತಿದ್ದಾರೆ . ಬಹಳಷ್ಟು ಸನ್ಮಾನ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದೇನೆ.  ಆದರೆ ಇಂಥ ವಿಶಿಷ್ಟ ಸನ್ಮಾನ ನಿಜಕ್ಕೂ ಹೆಮ್ಮೆ ಪಡುವಂಥದ್ದು ” ಎಂದರು .

ಕಟಪಾಡಿ ಮೀನು ಮಾರುಕಟ್ಟೆಯ ಇಪ್ಪತ್ತ್ ಆರು 26ಮಹಿಳೆಯರಿಗೆ ಮತ್ತು ಒಟ್ಟಾರೆಯಾಗಿ ನಲವತ್ತು ಎರಡು 42 ಮಹಿಳೆಯರಿಗೆ ಶಾಲು ಹೊದಿಸಿ ಗುಲಾಬಿ ಹೂ ನೀಡಿ ಅವರ ಸೇವೆಯನ್ನು ಗೌರವಿಸಿ ,ಅವರಿಗೆ ಶುಭ ಕೋರಲಾಯಿತು .

ಜೇಸಿಐ ಉದ್ಯಾವರ ಕುತ್ಪಾಡಿ ಅಧ್ಯಕ್ಷ ಜೆಸಿ ಸ್ಟೀವನ್ ಕುಲಾಸೊ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು .

ವಲಯ ಹದಿನೈದರ ಪೂರ್ವಾಧ್ಯಕ್ಷರಾದ ಜೇಸಿ ಹರೀಶ್ಚಂದ್ರ ಅಮೀನ್ ,ವಲಯ ಉಪಾಧ್ಯಕ್ಷರಾದ ಜೆಸಿ ಪಶುಪತಿ ಶರ್ಮ , ಸಮಾಜ ಸೇವಕರಾದ ಪ್ರತಾಪ್ ಕುಮಾರ್ ,ಕಲಾವಿದೆ ಕಾವ್ಯವಾಣಿ ಕೊಡಗು , ಜೇಸಿ ರಮೇಶ್ ಕುಮಾರ್ ,ಜೇಸಿ ಸುಪ್ರೀತ್ ಕುಮಾರ್ ,ಕಟಪಾಡಿ ಮೀನು ಮಾರ್ಕೆಟ್ ಅಧ್ಯಕ್ಷೆ ಚಂದ್ರಾವತಿ ಶ್ರೀಯಾನ್ , ಜೇಸಿ ಪ್ರೇಮ್ ಮಿನೇಜಸ್, ಜೇಸಿ ಯೋಗೀಶ್ ಕೋಟ್ಯಾನ್  ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಕಾರ್ಯಕ್ರಮದ ಕಾರ್ಯ ನಿರ್ದೇಶಕ ಜೇಸಿ ಗಿರೀಶ್ ಕುಮಾರ್ ವಂದಿಸಿದರು .


Spread the love