ಶಿವಮೊಗ್ಗ: ರೌಡಿ ಶೀಟರ್ ಬರ್ಬರ ಹತ್ಯೆ

Spread the love

ಶಿವಮೊಗ್ಗ: ರೌಡಿ ಶೀಟರ್ ಬರ್ಬರ ಹತ್ಯೆ

ಶಿವಮೊಗ್ಗ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಶೀಟರೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶಿವಮೊಗ್ಗದ ಸೂರ್ಯ ಕಂಫರ್ಟ್ ಬಳಿ ಇಂದು ರಾತ್ರಿ ಸುಮಾರು 9:45 ರ ವೇಳೆಗೆ ನಡೆದಿದೆ.

ಹತ್ಯೆಯಾದ ರೌಡಿ ಶೀಟರನ್ನು ಮಾರ್ಕೇಟ್ ಗಿರಿ ಎಂದು ಗುರುತಿಸಲಾಗಿದ್ದು, ಹಳೇ ವೈಷಮ್ಯದ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿದ್ದು, ಮೃತ ಶರೀರವನ್ನು ಮೆಗ್ಗಾನ್ ಶವಾಗಾರಕ್ಕೆ ರವಾನಿಸಲಾಗಿದೆ.


Spread the love