ಶ್ರಮಿಕ ಸಂತ ಜೋಸೆಫರ ದೇವಾಲಯ, ನೀರುಮಾರ್ಗ ಸುವರ್ಣ ಮಹೋತ್ಸವ

Spread the love

ಶ್ರಮಿಕ ಸಂತ ಜೋಸೆಫರ ದೇವಾಲಯ, ನೀರುಮಾರ್ಗ ಸುವರ್ಣ ಮಹೋತ್ಸವ

ಮಂಗಳೂರು: ನಗರದ ನೀರುಮಾರ್ಗದಲ್ಲಿರುವ ಶ್ರಮಿಕ ಸಂತ ಜೋಸೆಫರ ದೇವಾಲಯ ಇದರ ಸುವರ್ಣ ಮಹೋತ್ಸವ ಅಂಗವಾಗಿ ಎಪ್ರಿಲ್ 21ರಿಂದ ಎಪ್ರಿಲ್ 30ರವೆರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಎಪ್ರಿಲ್ 21ರಂದು ನಡೆದ ಹೊರೆಕಾಣಿಕೆಯ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಜುಡಿಶಿಯಲ್ ವಿಕಾರ್ ರೆ|ಫಾ| ವಾಲ್ಟರ್ ಡಿ’ಮೆಲ್ಲೊರವರು ಹೊರೆಕಾಣಿಕೆಯನ್ನು ಸಾಂಕೇತಿಕವಾಗಿ ಸ್ವೀಕರಿಸಿ ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಳಚ್ಚಿಲ್‍ನಲ್ಲಿ ಪ್ರಾರ್ಥನೆಯೊಂದಿಗೆ ಹೊರೆಕಾಣಿಕೆಯ ಮೆರವಣಿಗೆಯು ಪ್ರಾರಂಭಗೊಂಡು ಶ್ರಮಿಕ ಸಂತ ಜೋಸೆಫರ ದೇವಾಲಯಕ್ಕೆ ಮುಟ್ಟಿತು. ಪ್ರಸ್ತುತ ಚರ್ಚಿನ ಧರ್ಮಗುರುಗಳಾದ ರೆ|ಫಾ| ಅನಿಲ್ ಡಿ’ಮೆಲ್ಲೊರವರು ಈ ಸಂಭ್ರಮದ ನಾಯಕತ್ವ ವಹಿಸಿದ್ದಾರೆ.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಪಿರೇರಾ, ಕಾರ್ಯದರ್ಶಿ ಜೆರಾಲ್ಡ್ ಲೋಬೊ, ಸಮಿತಿಯ ಸಂಚಾಲಕ ಅರುಣ್ ಡಿ’ಸೋಜ ಪಬ್ಲಿಸಿಟಿ ಕಮಿಟಿಯ ಪ್ರಸಾದ್ ಪಿರೇರಾ ವಾಸ್ ಉಪಸ್ಥಿತರಿದ್ದರು.


Spread the love