ಶ್ರೀನಿಕೇತನ ವಾಲಿಬಾಲ್ ಪಂದ್ಯಾಟ: ಚಾಂಪಿಯನ್ ಆಗಿ ಫ್ರೆಂಡ್ಸ್ ಯಡ್ತಾಡಿ, ಚಾಂದ್ ಆ್ಯಟಾಕರ್ಸ್

Spread the love

ಶ್ರೀನಿಕೇತನ ವಾಲಿಬಾಲ್ ಪಂದ್ಯಾಟ: ಚಾಂಪಿಯನ್ ಆಗಿ ಫ್ರೆಂಡ್ಸ್ ಯಡ್ತಾಡಿ, ಚಾಂದ್ ಆ್ಯಟಾಕರ್ಸ್

ಬ್ರಹ್ಮಾವರ: ಶ್ರೀನಿಕೇತನ ಶಾಲೆ ಮಟಪಾಡಿ ಬ್ರಹ್ಮಾವರ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಳೆ ವಿದ್ಯಾರ್ಥಿಗಳು ಇವರ ಸಹಭಾಗಿತ್ವದಲ್ಲಿ ಬ್ರಹ್ಮಾವರ ಗಾಳಿಮನೆ ನಡೂರು ದಿ.ಶಿವರಾಮ ಶೆಟ್ಟಿ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಶಾಲಾ ಶ್ರೇಯೋಭಿವೃದ್ದಿಗಾಗಿ ಪ್ರಪ್ರಥಮ ಬಾರಿಗೆ ನೆಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಶ್ರೀನಿಕೇತನ ಕಪ್ ಮತ್ತು ದಿ| ಲಲಿತಾ ಬಿ.ಹೆಗ್ಡೆ ಸ್ಮರಣಾರ್ಥ ಶ್ರೀನಿಕೇತನ ಪ್ರೀಮಿಯರ್ ಲೀಗ್ 2023 ರ ಚಾಂಪಿಯನ್ ಆಗಿ ಫ್ರೆಂಡ್ಸ್ ಯಡ್ತಾಡಿ, ಚಾಂದ್ ಆ್ಯಟಾಕರ್ಸ್ ಕ್ರಮವಾಗಿ ಮೂಡಿ ಬಂದರು.

ಶ್ರೀನಿಕೇತನ ಕಪ್ ರನ್ನರ್ಸ್ ಆಗಿ ಮಧುವನ ಫ್ರೆಂಡ್ಸ್ ಮತ್ತು ಶ್ರೀನಿಕೇತನ ಪ್ರೀಮಿಯರ್ ಲೀಗ್ 2023 ರ ಲ್ಲಿ ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಗೆದ್ದುಕೊಂಡಿತು.

ಬ್ರಹ್ಮಾವರ ವಲಯ ಹಂತದ ಆಹ್ವಾನಿತ ತಂಡಗಳ ಶ್ರೀನಿಕೇತನ ಕಪ್ ಇದರ ಬೆಸ್ಟ್ ಆ್ಯಟಾಕರ್ ಆಗಿ ಫ್ರೆಂಡ್ಸ್ ಯಡ್ತಾಡಿ ಇದರ ಹರ್ಷ, ಬೆಸ್ಟ್ ಸೆಟ್ಟರ್ ಆಗಿ ಅದೇ ತಂಡ ನಾಗರಾಜ್, ಬೆಸ್ಟ್ ಡಿಫೆಂಡರ್ ಆಗಿ ಮಧುವನ ಫ್ರೆಂಡ್ಸ್ ನ ಲಕ್ಷ್ಮಣ್ ಶೆಟ್ಟಿ ಮೂಡಿ ಬಂದರು.

ಶ್ರೀನಿಕೇತನ ಪ್ರೀಮಿಯರ್ ಲೀಗ್ 2023 ರಲ್ಲಿ ಬೆಸ್ಟ್ ಆ್ಯಟಾಕರ್ ಆಗಿ ಚಾಂದ್ ಆ್ಯಟಾಕರ್ಸ್ ನ ಅಶ್ವಥ್ ಪೂಜಾರಿ, ಬೆಸ್ಟ್ ಸೆಟ್ಟರ್ ಆಗಿ ಅದೇ ತಂಡದ ರಾಘವೇಂದ್ರ, ಬೆಸ್ಟ್ ಡಿಫೆಂಡರ್ ಆಗಿ ಫ್ರೆಂಡ್ಸ್ ಮಟಪಾಡಿ ರಾಘವೇಂದ್ರ ಪೂಜಾರಿ ಕೆಳಮನೆ ಪಡೆದುಕೊಂಡರು.

ನಂದಿ ಫ್ರೆಂಡ್ಸ್ ಮಟಪಾಡಿ ಮತ್ತು ಸ್ಟಾರ್ ಬುಲ್ಸ್ ಸೆಮಿ ಫೈನಲಿಸ್ಟ್ ಪ್ರಶಸ್ತಿಯನ್ನು ಪಡೆದ ಕೊಂಡರು

ಸಮಾರೋಪ ಸಮಾರಂಭದಲ್ಲಿ ಮಟಪಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರವೀಣ್ ಹೆಗ್ಡೆ, ವಾಲಿಬಾಲ್ ಕಾರ್ಯಾಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರೋನ್ ಸಿಕ್ವೇರಾ, ಉಪಾಧ್ಯಕ್ಷರಾದ ಅಬ್ದುಲ್ ಸಲೀಂ, ಸ್ಟೀವನ್ ಸಿಕ್ವೇರಾ, ಚಾಂದ್ ಇಬ್ರಾಹಿಂ, ಅಲ್ತಾಫ್ ಉಪಸ್ಥಿತರಿದ್ದರು.

ಶ್ರೀನಿಕೇತನ ಕಪ್ ನಲ್ಲಿ ಫ್ರೆಂಡ್ಸ್ ಯಡ್ತಾಡಿ, ಮಧುವನ ಫ್ರೆಂಡ್ಸ್, ಕುಂಜಾಲು ಫ್ರೆಂಡ್ಸ್, ಎಮ್ ಝಡ್ ಗೊದ್ದನಕಟ್ಟೆ, ಶ್ರೀ ಮಾರಿಗುಡಿ ಚಾಂತಾರು, ಓಶಿಯನ್ ಫ್ರೆಂಡ್ಸ್ ಕೊಕ್ಕರ್ಣೆ, ಮಾರ್ನಿಂಗ್ ಫ್ರೆಂಡ್ಸ್ ಬ್ರಹ್ಮಾವರ, ಕಳಿನಬೈಲ್ ಸ್ವಾಮಿ ಕೊರಗಜ್ಜ ತಂಡ ಪಾಂಡೇಶ್ವರ ಭಾಗವಹಿಸದ್ದವು.

ಸ್ಥಳೀಯ ಆಹ್ವಾನಿತ ತಂಡಗಳಲ್ಲಿ ಸ್ವರ್ಣಸ್ಮೃತಿ ಮಟಪಾಡಿ, ಗ್ರೀನ್ ಪಾರ್ಕರ್ಸ್ ಮಟಪಾಡಿ, ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್, ನಂದಿ ಫ್ರೆಂಡ್ಸ್ ಮಟಪಾಡಿ, ಚಾಂದ್ ಆ್ಯಟಾಕರ್ಸ್, ನ್ಯೂ ಸ್ಟಾರ್ ರೋಕರ್ಸ್, ಡಿಸೇಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರ, ಸ್ಟಾರ್ ಬುಲ್ಸ್ ತಂಡಗಳು ಭಾಗವಹಿಸಿದ್ದವು.

ಪತ್ರಕರ್ತ ಚೇತನ್ ಮಟಪಾಡಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.


Spread the love