ಸಂಸದೆ ಶೋಭಾ ಕರಂದ್ಲಾಜೆ ಎಸ್‌ಬಿಐ ಖಾತೆಗೆ ಕನ್ನ; 20 ಲಕ್ಷ ರು. ಎಗರಿಸಿದ ಖದೀಮರು!

ಸಂಸದೆ ಶೋಭಾ ಕರಂದ್ಲಾಜೆ ಎಸ್‌ಬಿಐ ಖಾತೆಗೆ ಕನ್ನ; 20 ಲಕ್ಷ ರು. ಎಗರಿಸಿದ ಖದೀಮರು!

ನವದೆಹಲಿ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಎಸ್‌ಬಿಐ ಖಾತೆಗೆ ಕನ್ನ ಹಾಕಿರುವ ದುಷ್ಕರ್ಮಿಗಳು 20 ಲಕ್ಷ ರುಪಾಯಿ ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಂಸತ್ ಭವನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರತಿಯೊಬ್ಬ ಸಂಸದರಿಗೂ ಖಾತೆ ತೆರೆಯಲಾಗಿರುತ್ತದೆ. ಸಂಸದರ ವೇತನ, ಇರತೆ ಭತ್ಯೆಗಳು ನೇರವಾಗಿ ಈ ಬ್ಯಾಂಕಿನ ಖಾತೆಗಳಿಗೆ ನೇರವಾಗಿ ಸಂದಾಯವಾಗುತ್ತದೆ. ಈ ಖಾತೆ ಹ್ಯಾಕ್ ಆಗಿರುವುದಾಗಿ ಶೋಭಾ ಕರಂದ್ಲಾಜೆ ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಶೋಭಾ ಅವರು ಸಂಸತ್ ಭವನ ಮಾರ್ಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.