ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿಯೋಗದಿಂದ ಸಿಎಮ್ ಭೇಟಿ, ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆ

ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿಯೋಗದಿಂದ ಸಿಎಮ್ ಭೇಟಿ, ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆ

ಉಡುಪಿ: ನೂತನ ಸಚಿವರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮೀನುಗಾರರ ನಿಯೋಗದೊಂದಿಗೆ  ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ  ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ನಿಯೋಗ ಕರಾವಳಿಯಲ್ಲಿ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು. ಈಗಾಗಲೇ ಮುಖ್ಯಮಂತ್ರಿಗಳು ಮೀನುಗಾರರ ಸಾಲಮನ್ನಾ ಮಾಡಿರುವ ವಿಚಾರವಾಗಿ ಮೀನುಗಾರರ ನಿಯೋಗವು ಅಭಿನಂದನೆಗಳನ್ನು ಸಲ್ಲಿಸಿತು. ಕಡಿಮೆ ವೆಚ್ಚದಲ್ಲಿ ಸಬ್ಸಿಡಿ ಸಹಿತವಾಗಿ ಹೆಚ್ಚಿನ ಡೀಸೆಲನ್ನು ನೀಡುವಂತೆ ಮನವಿ ಮಾಡಲಾಯಿತು. ಹಾಗೂ ಕೆಲ ತಿಂಗಳ ಹಿಂದೆ ನಾಪತ್ತೆಯಾಗಿರುವ ಮೀನುಗಾರರ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟ್‍ನಲ್ಲಿದ್ದ ಮೀನುಗಾರರ ಕುಟುಂಬಗಳಿಗೆ ಹೆಚ್ಚಿನ ರೀತಿಯ ಪರಿಹಾರ ನೀಡುವಂತೆ ಮನವಿ ಮಾಡಲಾಯಿತು. ಮೀನುಗಾರರ ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು ಕರಾವಳಿ ಹಾಗೂ ಮೀನುಗಾರರ ಬಗ್ಗೆ ಕಾಳಜಿ ಇದೆ. ಆ ಭಾಗದ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಹಾಗೂ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದರು.

ನಿಯೋಗದಲ್ಲಿ  ಉಡುಪಿ ಶಾಸಕರಾದ ರಘುಪತಿ ಭಟ್, ಕಾಪು ಶಾಸಕರಾದ ಲಾಲಾಜಿ ಮೆಂಡನ್, ವಿಜಯಪುರ ಶಾಸಕರಾದ ಬಸವರಾಜ್ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ. ಸಿ. ಕಳಸ, ಉಡುಪಿ ಬಿಜೆಪಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಕುಯಿಲಾಡಿ ಸುರೇಶ ನಾಯಕ್, ಯಶ್ಪಾಲ್ ಸುವರ್ಣ, ಗೋಪಾಲ್. ಆರ್. ಕೆ, ರವಿ ಅಮೀನ್, ಪ್ರವೀಣ್ ಕುಮಾರ್ ಶೆಟ್ಟಿ, ಇನ್ನಿತರರು  ಉಪಸ್ಥಿತರಿದ್ದರು